ನಂಗೇನೋ ಈ ಪ್ರೀತಿ ನೋಡಿದ್ರೆ ಅತಂತ್ರ ಪ್ರೀತಿ ಅನ್ಸುತ್ತೆ ನಿಮಗೆ ಏನ್ ಅನ್ಸುತ್ತೆ ಓದಿ ಹೇಳಿ…!

0
1174

ಸಂಜು ಅನ್ನೋ ಒಬ್ಬ ಹುಡುಗ ಅವನು ಹುಟ್ಟಿದ ದಿನದಿಂದಲೂ ತನ್ನ ಜೀವನದಲ್ಲಿ ಶ್ರೀಮಂತಿಕೆಯಿಂದ ಮತ್ತು ಸಂತೋಷದಿಂದ ಬೆಳೆದು ಬಂದ ಹುಡುಗ.

ಸಂಜುಗೆ ಮನೆಯಲ್ಲಿ ಎಲ್ಲರೂ ತುಂಬ ಪ್ರೀತಿಯಿಂದ ಬೆಳಸಿದ್ದರು. ಸಂಜು ಅಂದ್ರೆ ಮನೆಯಲ್ಲಿ ಎಲ್ರಿಗೂ ಇವನ ಮೇಲೆ ಪ್ರೀತಿ ಜಾಸ್ತಿ.
ಹೀಗೆ ಸಂಜು ಬೆಳೆದು ಶಾಲೆಗೆ ಹೋಗುತ್ತಾ ಮುಂದೆ ದೊಡ್ಡವನಾಗಿ. ಕಾಲೇಜು ಸೇರುತ್ತಾನೆ ಕಾಲೇಜಿಗೆ ಸೇರಿದ ಸಂಜು ಯಾವತ್ತು ಒಂದು ಹುಡುಗಿಯನ್ನು ಮಾತಾಡಿಸಿದ ಹುಡುಗನಲ್ಲ.

Image result for love boy image

ಆದರೆ ಒಂದು ದಿನ ಕಾಲೇಜಿನಲ್ಲಿ ಒಂದು ಹುಡುಗಿಯನ್ನು ನೋಡುತ್ತಾನೆ.ನೋಡಿದಾಗ ಅವನಿಗೆ ಅನ್ಸೋದು ಒಂದೇ ಜೀವನದಲ್ಲಿ ಮದುವೆ ಅಂತ ಆದ್ರೆ ಈ ಹುಡುಗಿನೇ ಮದುವೆ ಆಗಬೇಕು ಅಂತ ಮನಸಲ್ಲಿ ಅನ್ಕೊಂಡು. ಪ್ರೀತಿ ಮಾಡೋಕೆ ಶುರು ಮಾಡ್ತಾನೆ.
ಇಬ್ಬರು ಒಂದೇ ಕ್ಲಾಸನಲ್ಲಿ ಇರತಾರೆ ಆದ್ರೆ ಅವನ ಪ್ರೀತಿಯನ್ನ ಹೇಳೋಕೆ ಭಯಪಡುತ್ತಾನೆ. ಸಂಜುಗೆ ಧೈರ್ಯ ಅನ್ನೋದು ಇರಲ್ಲ ಹೀಗೆ ಹಲವು ದಿನ ಕಳೆಯುತ್ತಾನೆ.

ಆದ್ರೆ ಸಂಜು ಒಂದು ದಿನ ಧೈರ್ಯ ಮಾಡಿ ಗೀತಾ ಹತ್ತಿರ ಹೋಗಿ ಕಷ್ಟ ಪಟ್ಟು ತನ್ನ ಪ್ರಿಯನ್ನು ಹೇಳಿಕೊಳ್ಳುತ್ತಾನೆ. ಆದ್ರೆ ಗೀತಾ ಸಂಜು ಪ್ರೀತಿಯನ್ನ  ಒಲ್ಲೆ ಏ0ದು ನಿರಾಕರಿಸುತ್ತಾಳೆ. ಆದ್ರೆ ಸಂಜುಗೆ ಮಾತ್ರ ಗೀತಳ ಮೇಲಿನ ಪ್ರೀತಿ ಕಡಮೆ ಆಗುವುದಿಲ್ಲ ದಿನೇ ದಿನ ಕಳೆದಂತೆ ಪ್ರೀತಿ ಇನ್ನು ಗಟ್ಟಿಯಾಗುತ್ತೆ.Image result for lovely couple

ಸಂಜು ಒಂದು ದಿನ ಕಾಲೇಜಿನ ತನ್ನ ಕ್ಲಾಸ್ ರೂಮಿನ ಬಾಗಿಲ ಹತ್ತಿರ ನಿಂತಿರುತ್ತಾನೆ. ಆಗ ಬಂದ ಗೀತಾ ಸಂಜುನ ಗಟ್ಟಿಯಾಗಿ ತಬ್ಬಿಕೊಂಡು. ಸಂಜು ಪ್ರೀತಿಯನ್ನ ಒಪ್ಪಿಕೊಳ್ಳುತ್ತಾಳೆ .ಹೀಗೆ ಇಬ್ಬರ ಪ್ರೀತಿ ಮುಂದುವರಿಯುತ್ತದೆ ಕಾಲೇಜಿನಲ್ಲಿ ಇವರನ್ನ ಕಂಡ್ರೆ ಎಲ್ಲಾ ಪ್ರೆಂಡ್ಸ್ ಇವರನ್ನ ಸಂಜು ಗೀತಾ ಅನ್ನುವ ಬದಲು ಲೈಲಾ ಮಾಜುನ ಅನ್ನೋಕೆ ಶುರು ಮಾಡ್ತಾರೆ ಅಸ್ತ್ರ ಮಟ್ಟಿಗೆ ಇವರ ಪ್ರೀತಿ ಗಟ್ಟಿಯಾಗಿರುತ್ತದೆ.

ಕಾಲೇಜು ಅನ್ನೋದು ಏನ್ ಜೀವನ ಪೂರ್ತಿ ಇರುತ್ತಾ. ಕಾಲೇಜು ಮುಗಿತ ಬಂತು ಆದ್ರೆ ಕಾಲೇಜು ಬಿಟ್ಟು ಹೋಗೋಕೆ ಇವರಿಗೆ ತುಂಬ ಕಷ್ಟ ಆಗುತ್ತೆ. ಮುಂದೆ ಹೇಗೆ ಬೇಟಿಯಾಗೋದು ಮತ್ತು ತಮ್ಮ ಮುಂದಿನ ಭವಿಷ್ಯದ ಬಗ್ಗೆ ಚಿಂತೆ ಮಾಡುತ್ತ ತುಂಬ ಬೇಸರವಾಗಿರುತ್ತೆ.

Image result for lovely couple

ಆದ್ರೆ ಇವರಿಬ್ಬರಿಗೂ ಒಬ್ಬರನ್ನ ಒಬ್ಬರು ಬಿಟ್ಟು ಇರೋಕೆ ಸಾಧ್ಯನೇ ಇಲ್ಲ ಅನ್ನೋ ಮಟ್ಟಿಗೆ ಪ್ರೀತಿ ಮಾಡುತಿದ್ದರು. ಮನೆಯಲ್ಲಿ ಒಪ್ಪಿಸಿ ಮದುವೆ ಆಗಬೇಕು ಅನ್ನೋ ತೀರ್ಮಾನಕ್ಕೆ ಬರುತ್ತಾರೆ ಆದ್ರೆ ಇವರಿಬ್ಬರ ಮನೆಯಲ್ಲಿ ಇವರ ಮಾತು ಕೇಳೋರು ಯಾರು ಇರಲ್ಲ. ಅದಕ್ಕಿಂತ ಹೆಚ್ಚಾಗಿ ಇವ್ರು ಇಬ್ಬರು ಮನೆಯಲ್ಲಿ ತಮ್ಮ ಪ್ರೀತಿಯ ಬಗ್ಗೆ ಹೇಳಿಕೊಳ್ಳೋಕ್ಕೆ ಧೈರ್ಯ ಅನ್ನೋದು ಇರೋದೇ ಇಲ್ಲ.

Image result for lovely couple sad image

ಸಂಜು ಮತ್ತು ಗೀತಾ ತುಂಬ ಯೋಚನೆ ಮಾಡಿ ಒಂದು ನಿರ್ಧಾರಕ್ಕೆ ಬರ್ತಾರೆ ನೀನು ನಿಮ್ಮ ಮನೆಯಲ್ಲಿ ಹೇಳೋಕೆ ಆಗಲ್ಲ ನಾನು ನಮ್ಮ ಮನೆಯಲ್ಲಿ ಹೇಳೋಕೆ ಆಗಲ್ಲ. ಇಬ್ಬರು ದೂರ ದೂರ ಇರೋಕೆ ಅಂತೂ ಆಗೋದಿಲ್ಲ ನಾವು ಇಬ್ಬರು ಒಟ್ಟಿಗೆ ಇರಬೇಕು ಸಂತೋಷದಿಂದ ಇರಬೇಕು ಅಂದ್ರೆ ನಾವು ಒಟ್ಟಿಗೆ ಸತ್ತು ಸ್ವರ್ಗದಲ್ಲಿ ಒಟ್ಟಿಗೆ ಪ್ರೀತಿ ಮಾಡ್ಕೊಂಡು ಇರಾನ ಬಾ ಅಲ್ಲಿ ನಮಗೆ ಯಾರು ತೊಂದ್ರೆ ಕೊಡಲ್ಲ ಅಂತ ತೀರ್ಮಾನ ಮಾಡ್ಕೊಂಡು ಜೊತೆಗೆ ವಿಷ ಕುಡಿದು ತಮ್ಮ ಪ್ರೀತಿಗೆ ತಿಲಾಂಜಲಿ ಇಟ್ಟ ಅಮರ ಪ್ರೇಮಿಗಳು…..