ಸಾವಿನಿಂದ ಪಾರಾಗಿ ಬಂದ ಕರುಣ್ ತ್ರಿಶತಕದ ಸಾಧನೆ ಮಾಡಿದ!

0
645

ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯುವುದೇ ದುಸ್ತರ ಎಂಬಂತಹ ಪರಿಸ್ಥಿತಿಯಲ್ಲಿ ಸ್ಥಾನ ಗಿಟ್ಟಿಸಿದ್ದೂ ಅಲ್ಲದೇ ಇಂಗ್ಲೆಂಡ್‍ ವಿರುದ್ಧ ತ್ರಿಶತಕ ಸಿಡಿಸಿ ಇತಿಹಾಸದ ಪುಟಗಳಲ್ಲಿ ತಮ್ಮ ಹೆಸರು ಶಾಶ್ವತವಾಗಿರುವಂತಹ ಸಾಧನೆ ಮಾಡಿದ ಕರ್ನಾಟಕದ ಯುವ ಬ್ಯಾಟ್ಸ್‍ಮನ್ ಕರುಣ್ ‍ನಾಯರ್‍ ಈಗ ಸೂಪರ್‍ಸ್ಟಾರ್‍. ಆದರೆ ತ್ರಿಶತಕ ಸಿಡಿಸಿದ ನಂತ ಕರುಣ್‍ ನಾಯರ್‍ಗೆ ನೆನಪಾಗಿದ್ದು, ಸಾವಿನಿಂದ ಪಾರಾಗಿ ಬಂದ ಕ್ಷಣ!

ಕರುಣ್‍ ನಾಯರ್‍ ಇದೀಗ ತ್ರಿಶತಕ ಬಾರಿಸಿದ ವೀರೇಂದ್ರ ಸೆಹ್ವಾಗ್‍ ಜೊತೆ ತಮ್ಮ ಹೆಸರು ಗುರುತಿಸಿಕೊಂಡಿದ್ದಾರೆ. ಅಲ್ಲದೇ ಈ ಸಾಧನೆ ಮಾಡಿದ ಕೇವಲ 2ನೇ ಭಾರತೀಯ ಆಟಗಾರ ಕೂಡ ಆಗಿದ್ದಾರೆ, ಅಲ್ಲದೇ ಗ್ಯಾರಿ ಸೋಬರ್ಸ್‍, ಡಾನ್‍ ಬ್ರಾಡ್ಮನ್, ಬಾಬ್‍ ಸಿಮ್ಸನ್‍ ಅವರೊಂದಿಗೆ ಹೆಸರು ಗುರುತಿಸಿಕೊಳ್ಳುವ ಪ್ರದರ್ಶನ ನೀಡಿದ್ದಾರೆ.

ಆದರೆ ಇಷ್ಟೆಲ್ಲಾ ಸಾಧನೆಗಳನ್ನು ಮಾಡಿದ ಇತಿಹಾಸ ಪುರುಷರ ಪಟ್ಟಿಯಲ್ಲಿ ತಮ್ಮ ಹೆಸರು ನೆನಪಿಸಿಕೊಳ್ಳುವ ಮುನ್ನ ಕರುಣ್‍ ನಾಯರ್‍ಗೆ ನೆನಪಾಗಿದ್ದು, ಇದೇ ವರ್ಷ ಸಾವಿನ ಬಾಗಿಲು ತಟ್ಟಿ ಬಂದ ಕರಾಳ ಘಟನೆ ಮಾತ್ರ.

ಇತ್ತೀಚೆಗೆ ತವರು ಕೇರಳಕ್ಕೆ ಪ್ರವಾಸ ತೆರಳಿದ್ದ ಸಂದರ್ಭದಲ್ಲಿ ಕರುಣ್‍ ನಾಯರ್‍ ಇದ್ದ ಬೋಟ್‍ ಮುಳುಗಿತ್ತು. ಆದರೆ ಈಜು ಬಾರದ ಕರುಣ್ ‍ನಾಯರ್‍ ಮುಳಗುವ ಅಪಾಯಕ್ಕೆ ಸಿಲುಕಿದ್ದರು. ಆದರೆ ಅದೃಷ್ಟವಶಾತ್‍ ಪರಾಗಿ ಬಂದಿದ್ದು ಅಲ್ಲದೇ ಅದ್ಭುತ ಇನಿಂಗ್ಸ್‍ ಕಟ್ಟಿಕೊಟ್ಟರು.

ಹೌದು, ಇದೇ ವರ್ಷ ನಾನು ಕೇರಳದ ಪ್ರವಾಸಕ್ಕೆ ತೆರಳಿದಾಗ ದೋಣಿ ಮುಳುಗಿತ್ತು. ಈಜು ಬಾರದ ನಾನು ಸಾವಿನ ಬಾಗಿಲು ತಟ್ಟಿದ್ದೆ. ಆದರೆ ಸ್ಥಳೀಯರು ನನ್ನನ್ನು ರಕ್ಷಿಸಿದರು ಎಂದು ವಿವರಿಸಿದರು.