ವಲಸಿಗರ ವಿರುದ್ಧ ಕಾನೂನು ಸಮರದಲ್ಲಿ ‘ಸಾಮಾನ್ಯ ಕನ್ನಡಿಗನಿಗೆ ಮತ್ತೊಂದು ಮುನ್ನಡೆ’

1
2332

ಈ ಹಿಂದೆ ಸಾಮಾನ್ಯ ಕನ್ನಡಿಗ ಪ್ರತಿಷ್ಠಾನ ಟ್ರಸ್ಟ್ [ರಿ] ಪ್ರೀತೇಶ್ ಕುಮಾರ್ ಎಂಬ ಸಾಫ್ಟ್ವೇರ್ ಇಂಜಿನಿಯರ್ ನ ವಿರುದ್ಧ ಗಂಗಮ್ಮ ಗುಡಿ ಪೊಲೀಸ್ ಠಾಣೆ, ಜಾಲಹಳ್ಳಿ ಯಲ್ಲಿ ದೂರು ನೀಡಿತ್ತು. ಇಂಡಿಯನ್ ಏರ್ ಫೋರ್ಸ್ ಅಧಿಕಾರಿಯೊಬ್ಬರ ಮಗನಾಗಿರುವ ಪ್ರೀತೇಶ್ ತನ್ನ ಫೇಸ್ಬುಕ್ ವಾಲ್ ನಲ್ಲಿ ದಕ್ಷಿಣ ಭಾರತೀಯರ ಬಗ್ಗೆ ಅವಹೇಳನಕಾರಿಯಾದ ಪೋಸ್ಟ್ ಒಂದನ್ನು ಹಾಕಿದ್ದ. ಇದನ್ನು ಗಮನಿಸಿದ್ದ ಸಾಮಾನ್ಯ ಕನ್ನಡಿಗರ ಪ್ರತಿಷ್ಠಾನ ಟ್ರಸ್ಟ್ ನ ಅಧ್ಯಕ್ಷರಾದ ಸಂದೀಪ್ ಮತ್ತು ಕಾರ್ಯಕರತರು ಇವನ ಮಾಡಿದ್ದ ಘನಕಾರ್ಯದ ಮಾಹಿತಿಯನ್ನು ಕಲೆಹಾಕಿ ಗಂಗಮ್ಮ ಗುಡಿಯಲ್ಲಿ ಐ.ಪಿ.ಸಿ ಕಲಾಂ ೫೦೫ ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.

ಅಷ್ಟೇ ಅಲ್ಲದೆ, ಪ್ರೀತೇಶ್ ಕುಮಾರ್ ಕೆಲಸ ಮಾಡುತ್ತಿದ್ದ ಅಕ್ಸೆನ್ಚಾರ್ ಕಂಪನಿಗೆ ಈ ಸುದ್ದಿ ಮುಟ್ಟಿಸಿ ಇವನನ್ನು ಕೆಲಸದಿಂದ ವಜಾ ಹಾಗುವ ಹಾಗೆ ಮಾಡಿತ್ತು. ಕಂಪನಿಯು ನಮಗೂ ಮತ್ತು ಈ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ ಅಂತ ಒಂದು ಮುಚ್ಚಳಿಕೆಯನ್ನು ಬರೆದುಕೊಟ್ಟು ಗಂಗಮ್ಮ ಗುಡಿ ಪೊಲೀಸ್ ಇನ್ಸ್ಪೆಕ್ಟರ್ ಅವರಿಗೆ ನೀಡಿದ್ದಾರೆ.
a1dc5fbc-f636-497f-99d8-851f10a6015c

ಈ ಮಧ್ಯೆ, ಆರೋಪಿ ಪ್ರೀತೇಶ್ ಕರ್ನಾಟಕ ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದಾನೆ. ಆದರೆ, ಸನ್ಮಾನ್ಯ ಘನತೆವೆತ್ತ ಆನಂದ ಭೈರಾ ರೆಡ್ಡಿ ನೇತೃತ್ವದ ಏಕ ಸದಸ್ಯ ಪೀಠ ಇವನ ಅರ್ಜಿಯನ್ನು ವಜಾ ಮಾಡಿದ್ದಾರೆ.
“ಆರೋಪಿ ತನ್ನ ಫೇಸ್ಬುಕ್ ನಲ್ಲಿ ಮಾಡಿರುವ ಅವಹೇಳನಕಾರಿಯಾದ ಪೋಸ್ಟ್ ಅನ್ನು ಇಟ್ಟುಕೊಂಡು ಟ್ರಸ್ಟ್ ಪ್ರಕರಣ ದಾಖಲಿರುಸುತ್ತದೆ. ಕನ್ನಡ ಭಾಷಿಕರ ಪರವಾಗಿ, ರಾಜ್ಯದ ಪರವಾಗಿ ಕೆಲಸಮಾಡುವ ಧ್ಯೇಯೋದ್ದೇಶಗಳನ್ನಿಟ್ಟುಕೊಂಡು ಸದರಿ ಟ್ರಸ್ಟ್ ಕಾರ್ಯ ನಿರ್ವಹಿಸುತ್ತಿದೆ. ಆರೋಪಿ ಉಪಯೋಗಿಸಿರುವ ಭಾಷೆಯನ್ನೂ ಟ್ರಯಲ್ ಕೋರ್ಟ್ ಪರಿಶೀಲಿಸಿ ಇದರ ಬಗ್ಗೆ ಸುದೀರ್ಘವಾದ ವಿಚಾರಣೆ/ತನಿಖೆ ಮಾಡಬೇಕಾಗುತ್ತದೆ. ಆರೋಪಿಗೆ ವಾರೆಂಟ್ ಕೂಡ ನೀಡದಿಲ್ಲದಿರುವಾಗ; ಸದರಿ ಪ್ರಕರಣವನ್ನು ರದ್ದುಗೊಳಿಸಲು ಸಾಧ್ಯವಲ್ಲವೆಂದು ಐತಿಹಾಸಿಕವಾದ ತೀರ್ಪನ್ನು ನೀಡಿದೆ”
untitled-1

ಈ ಪ್ರಕರಣವನ್ನು ನಗರದ ೮ನೆ ಏ.ಸಿ.ಎಂ.ಎಂ. ನ್ಯಾಯಾಲಯದಲ್ಲಿ ನಡೆಸಲು ‘ಕನ್ನಡ ಪರ’ ನಿಲುವಿರುವ ನ್ಯಾಯವಾದಿಗಳು, ವಕೀಲರು ಬೇಕಾಗಿದ್ದಾರೆ. ಸದರಿ ಪ್ರಕರಣವನ್ನು ನಡೆಸುವ ಸರ್ಕಾರಿ ಅಭಿಯೋಜಕರನ್ನು ನಮ್ಮ ನ್ಯಾಯವಾದಿಗಳು ಸಹಾಯ ಮಾಡಿ ಆರೋಪಿಗೆ ಶಿಕ್ಷೆಯಾಗಿ; ರಾಜ್ಯಕ್ಕೆ ಮಾದರಿ ಪ್ರಕರಣವಾಗಬೇಕೆಂಬುದು ನಮ್ಮೆಲ್ಲರ ಆಶಯ. ನಮಗೆ ಕಾನೂನು ನೆರವು ನೀಡ ಬಯಸುವವರು, ಸಂದೀಪ್ ಅವರನ್ನು ಸಂಪರ್ಕಿಸಬಹುದು. ಸಂದೀಪರ ಮೊಬೈಲ್ ನಂಬರ್:  72042 51123. ಅವರ ಮಿಂಚಂಚೆ ವಿಳಾಸ: sandeep@samanyakannadiga.com