ರೈತರ ಸಾಲ ಮನ್ನಾ ಮಾಡದ ಕೇಂದ್ರ ಸರ್ಕಾರ ಉದ್ಯಮಿಗಳ 81 ಸಾವಿರ ಕೋಟಿ ಮಾಫಿ ಮಾಡಿದೆ..!

0
869

ಹೌದು ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದ ರೈತರು ಸಾಲ ತೀರಿಸಲು ಸಾಧ್ಯವಾಗದೆ ಎಷ್ಟೋ ರೈತರು ಸಾವನ್ನಪ್ಪಿದ್ದಾರೆ.
ಸತತ ಬರದಿಂದ ಕಂಗೆಟ್ಟು ಸಾಲ ಮರುಪಾವತಿ ಮಾಡಲಾಗದೇ ಆತ್ಮಹತ್ಯೆ ದಾರಿ ಹಿಡಿಯುತ್ತಿರುವ ರೈತನ ಕೇವಲ ಸಾವಿರ ಅಥವಾ ಲಕ್ಷಗಳ ಲೆಕ್ಕದಲ್ಲಿರುವ ಸಾಲವನ್ನು ಮನ್ನಾ ಮಾಡಲು ಸಾಧ್ಯವೇ ಇಲ್ಲ ಎಂದು ಹೇಳಿರುವ ಕೇಂದ್ರ ಸರ್ಕಾರ, ಇದೀಗ ಉದ್ಯಮಪತಿಗಳ ಸಾಲವನ್ನು ತಮ್ಮ ಖಾತೆಯಿಂದಲೇ ತೆಗೆದುಹಾಕಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ಸ್ಪಷ್ಟ ಹೇಳಿಕೆ ನೀಡಬೇಕು ಎಂದು ಸಿಪಿಎಂ ನಾಯಕ ಸೀತಾರಾಂ ಯೆಚೂರಿ ಆಗ್ರಹಿಸಿದ್ದಾರೆ.

source:The Indian Express

ಸಾಲ ಪಡೆದು ವಾಪಸ್‌ ಕಟ್ಟಲಾಗದೇ ಮನೆ ಬಿಟ್ಟು ಓಡಿ ಹೋದವರು, ತಲೆ ತಪ್ಪಿಸಿಕೊಂಡು ಓಡಾಡುತ್ತಿರುವವರು, ಏನ್‌ ಮಾಡ್ತಿರೋ ಮಾಡ್ಕೊಳಿ ಎಂದು ಬಹಿರಂಗವಾಗಿಯೇ ಅವಾಜ್‌ ಹಾಕಿಕೊಂಡು ಭಂಡ ಧೈರ್ಯದಿಂದ ತಿರುಗಾಡುತ್ತಿರುವವರ “ವಾಪಸ್‌ ಬರಲಾಗದ ಸಾಲವನ್ನು ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಅನಾಮತ್ತಾಗಿ ಮನ್ನಾ ಅಥವಾ ಮಾಫಿ ಮಾಡಿವೆ.

source:NDTV Profit

ಈ ಮೊತ್ತ ಕೇವಲ ಸಾವಿರ ಲೆಕ್ಕದಲ್ಲೋ, ಲಕ್ಷಗಳ ಲೆಕ್ಕದಲ್ಲೋ ಅಥವಾ ಕೋಟಿಗಳ ಲೆಕ್ಕದಲ್ಲೋ ಇಲ್ಲ. ಇದು ಸಾವಿರ ಸಾವಿರ ಕೋಟಿಗಳನ್ನು ಮೀರಿದೆ. ಮಾರ್ಚ್‌ಗೆ ಅಂತ್ಯವಾದ 2017ರ ವಿತ್ತೀಯ ವರ್ಷದಲ್ಲಿ 81,683 ಕೋಟಿಯಷ್ಟು ಸಾಲವನ್ನು ಮಾಫಿ ಮಾಡಲಾಗಿದೆ.

source:wallpapers-images.ru

ವಸೂಲಾಗದ ಸಾಲವನ್ನು ಮಾಫಿ ಮಾಡಿರುವ ಬಗ್ಗೆ ಹಣಕಾಸು ಇಲಾಖೆಯಿಂದಲೇ ಮಾಹಿತಿ ಸಿಕ್ಕಿದೆ. ದೇಶದಲ್ಲಿರುವ ಸರ್ಕಾರಿ ವಲಯದ ಬ್ಯಾಂಕುಗಳು ಎದುರಿಸುತ್ತಿರುವ ಅನುತ್ಪಾದಕ ಆಸ್ತಿ ಸಮಸ್ಯೆಯನ್ನು ಈಡೇರಿಸುವ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಹಣಕಾಸು ವರ್ಷವೊಂದರಲ್ಲಿ ಭಾರಿ ಪ್ರಮಾಣದ ವಸೂಲಾಗದ ಸಾಲವನ್ನು ಮಾಫಿ ಮಾಡಲಾಗಿದೆ.

2016 ಹಣಕಾಸು ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಪ್ರಮಾಣ ಶೇ.41 ರಷ್ಟು ಹೆಚ್ಚಳವಾಗಿದೆ. ಪ್ರತಿ ಬಾರಿಯೂ ಬ್ಯಾಂಕ್‌ಗಳ ಆದಾಯ ಮೇಲೆ ಭಾರಿ ಪ್ರಮಾಣದ ಹೊಡೆತ ನೀಡುತ್ತಿದ್ದ ಈ ವಸೂಲಾಗದ ಸಾಲ ಅಥವಾ ಅನುತ್ಪಾದಕ ಆಸ್ತಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವಂತೆ ಆರ್‌ಬಿಐ ಕಠಿಣ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಬ್ಯಾಂಕುಗಳು ಸಾಲದ ಹಣವನ್ನೇ “ಮಾಯಾ’ ಮಾಡುವ ನಿರ್ಧಾರ ತೆಗೆದುಕೊಳ್ಳುತ್ತಿವೆ.

source:Alchetron

ನಾವು ಕಾರ್ಪೊರೇಟ್‌ಗಳ ಪರ ಇಲ್ಲ ಎಂದು ಹೇಳುತ್ತಿದ್ದ ಬಿಜೆಪಿ ಇದೀಗ ಅವರು ಮಾಡಿದ್ದ ಸಾಲವನ್ನು ಮಾಫಿ ಮಾಡಿದೆ. ಹೀಗಾಗಿ ಅದು ಯಾರ ಪರ ಇದೆ ಎಂಬುದನ್ನು ಬಹಿರಂಗಗೊಳಿಸಬೇಕು ಎಂದು ಸೀತಾರಾಂ ಯೆಚೂರಿ, ಸಿಪಿಎಂ ಪ್ರಧಾನ ಕಾರ್ಯದರ್ಶಿ ಆಗ್ರಹಿಸಿದ್ದಾರೆ.