ಸಂಬಳ ಬಿಡಿಸಿಕೊಳ್ಳಲು ಟೆನ್ಷನ್ ಇಲ್ಲ..!

0
941

ತಿಂಗಳ ಕೊನೆಬಂದಿದ್ದು ನೌಕರರ ವೇತನಗಳು ಅಗುತ್ತೆ ಮುಂದಿನ ಎರಡು ವಾರಗಳಲ್ಲಿ ವೇತನ ಬಿಡಿಸಿಕೊಳ್ಳಲು ಹೆಚ್ಚಲಿದೆ ಜನದಟ್ಟನೆ. ಸಾಮಾನ್ಯ ವಾಗಿ ಜನರು ಅವರ ಸಂಬಳವನ್ನು ಎಟಿಎಂಗಳಲ್ಲಿ ಹಣವನ್ನು ಬಿಡಿಸಿಕೊಳ್ಳುತ್ತಾರೆ. ಇದರಿಂದ ಬ್ಯಾಂಕ್ ನಲ್ಲಿ ಜನರು ಕ್ಯೂ ನಿಲ್ಲಲು ತೊಂದರೆಯಾಗುತ್ತದೆ. ಇದಕ್ಕೆ ಪರಿಹಾರವಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊಸ ಕ್ರಮವನ್ನು ಕೈಗೊಂಡಿದ್ದಾರೆ.

ಎಟಿಎಂ ನಲ್ಲಿ ಹಣವಿಲ್ಲದೆ ಖಾಲಿ ಹೊಡಿತಾಇತ್ತು ಇದರಿಂದ ಸಂಬಳವನ್ನು ಬಿಡಿಸಿಕೊಳ್ಳುವುದು ಜನರಲ್ಲಿ ಚಿಂತೆಯಾಗಿದೆ.ಇದಕ್ಕೆ ಪರಿಹಾರ ಹುಡುಕಲು ರಿಸರ್ವ ಬ್ಯಾಂಕ್ ಮುಂದಾಗಿದ್ದು.

ಸಂಬಳವನ್ನ ಹೇಗಪ್ಪ ಬಿಡಿಸಿಕೊಳ್ಳೋದು ಅನ್ನೋ ಚಿಂತೆ ಸಾಮಾನ್ಯ ಜನ್ರನ್ನ ಕಾಡ್ತಿದೆ. ಇದಕ್ಕೆ ಪರಿಹಾರ ಹುಡುಕೋಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮುಂದಾಗಿದೆ. ಈಗಾಗಲೇ ಆರ್ ಬಿ ಐ ಡೆಪ್ಯೂಟಿ ಗವರ್ನರ್ ಎಸ್.ಎಸ್. ಮುಂಡ್ರಾ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರೆಡಿಯಾಗಿದ್ದು, ಈ ತಂಡ ಈಗಾಗಲೇ ಎಟಿಎಂಗಳಲ್ಲಿ ಉಂಟಾಗಿರೋ ಕ್ಯಾಶ್ ಪ್ರಾಬ್ಲಂ ಸಾಲ್ವ್ ಮಾಡೋ ನಿಟ್ಟಿನಲ್ಲಿ ಸಭೆ ನಡೆಸಿದೆ.

ಹಿಂದಿನ ತಿಂಗಳುಗಳಲ್ಲಿ ಯಾವೆಲ್ಲಾ ಎಟಿಎಂಗಳಲ್ಲಿ ಹೆಚ್ಚನದಾಗಿ ಸಂಬಳ ಬಿಡಿಸಿಕೊಳ್ಳುತ್ತದ್ದರು ಎಂಬುದನ್ನು ಪತ್ತೆ ಹಚ್ಚಿ ಅಂತಹ ಎಟಿಎಂಗಳಿಗೆ ಹೆಚ್ಚಿನ ಹಣ ತುಂಬಲು ಕ್ರಮವನ್ನು ಕೈಗೊಂಡಿದ್ದಾರೆ. ಇದರಿಂದ ನ.29 ರಿಂದ ಡಿ 29 ವರೆಗೆ ಜನರಿಗೆ ಯಾವುದೇ ತೊಂದರೆಯಾಗದಂತೆ ಈ ಕ್ರಮವನ್ನು ಕೈಗೊಳ್ಳುತ್ತಿದೆ.

ಸಂಬಳವನ್ನು ಬಿಡಿಸಿ ಕೊಳ್ಳಲು ಜನರು ಕ್ಯೂ ನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಬರುತ್ತದೆ ಹಾಗೂ ಎಟಿಎಮಗಳಲ್ಲಿನ ತೊಂದರೆಗಳಿಂದ ಜನರು ಹಣವನ್ನು ತೆಗೆದು ಕೊಳ್ಳಲು ತೊಂದರೆಯಾಗುತ್ತದೆ ಈ ಹಣದಿಂದ ಮನೆಯ ಬಾಡಿಗೆ ವಿದ್ಯುತ್ ಬಿಲ್, ವಾಟರ್ ಬಿಲ್, ಇತ್ಯದಿ ಕೆಲಸಗಲಿಗೆ ಹಣವಿಲ್ಲದೆ ತೊಂದರೆಯಾಗುವ ಕಾರಣದಿಂದಾಗಿ ಸಮಸ್ಯೆಯನ್ನು ಬಗೆಹರಿಸಲು ರಿಸರ್ವ್ ಬ್ಯಾಂಕ್ ಹೊಸ ಕ್ರಮವನ್ನು ಕೈಗೊಂಡಿದೆ. ಆರ್ಬಿಐ ಗವರ್ನರ್ ಎಸ್. ಎನ್.ಮುಡ್ರಾ ನೇತೃತ್ವದಲ್ಲಿ ಟಾಸ್ಕ್ ಪೋರ್ಸ್ ಸಿಬ್ಬಂದಿಗಳನ್ನು ನಿರ್ಮಿಸಿದ್ದಾರೆ, ಈ ತಂಡದಿಂದ ಎಟಿಎಂಗಳಲ್ಲಿ ಉಂಟಾದ ತೊಂದರೆಗಳನ್ನು ನಿವಾರಿಸಲು ಮುಂದಾಗಿದ್ದಾರೆ.