ಸಲ್ಮಾನ್ ಮತ್ತು ಕಿಚ್ಚ ಸಿದೀಪ್ ಒಂದೇಚಿತ್ರದಲ್ಲಿ ಅಭಿನಯಿಸ್ತಾರಂತೆ

0
552

ಬೆಂಗಳೂರು :ಸಲ್ಮಾನ್ ಖಾನ್ ಅಭಿನಯದ ‘ಏಕ್ ಥಾ ಟೈಗರ್’ ಸೀಕ್ವೆಲ್‍ನಲ್ಲಿ ಕಿಚ್ಚ ಸುದೀಪ್ ಅಭಿನಯಿಸ್ತಿದ್ದಾರೆ ಅನ್ನಲಾಗ್ತಿದೆ. ಇಂತಾದೊಂದು ಸುದ್ದಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ.

ಇದೀಗ ಕಿಚ್ಚ ಸುದೀಪ್ ವೃತ್ತಿ ಜೀವನಕ್ಕೆ ಇನ್ನಷ್ಟು ಕಿಚ್ಚು ಹಚ್ಚುವ ಬೆಳವಣಿಗೆ ಆಗುತ್ತಿದೆ. ಹಿಂದಿಯ ಖಾನ್’ದಾನ್ ಸಲ್ಮಾನ್ ಖಾನ್ ಅವರ ಸಿನಿಮಾದಲ್ಲಿ ಸುದೀಪ್ ಅಭಿನಯಿಸಲು ಆಫರ್ ಬಂದಿದೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಸಲ್ಮಾನ್ ಅವರ “ಟೈಗರ್ ಜಿಂದಾ ಹೈ” ಸಿನಿಮಾದಲ್ಲಿ ಸುದೀಪ್ ವಿಲನ್ ಕ್ಯಾರೆಕ್ಟರ್ ಅಭಿನಯಿಸಲು ಆಫರ್ ಬಂದಿದೆಯಂತೆ. ಹರಿದಾಡುತ್ತಿರುವ ಸುದ್ದಿಗಳ ಪ್ರಕಾರ ಆ ಚಿತ್ರದಲ್ಲಿ ಸುದೀಪ್ ಅವರು ಐಎಸ್’ಐ ಏಜೆಂಟ್’ನ ಪಾತ್ರ ಮಾಡಬೇಕಾಗುತ್ತದಂತೆ. ಆದರೆ, ಸುದೀಪ್ ಎಲ್ಲಿಯೂ ಈ ಕುರಿತು ಸ್ಪಷ್ಟನೆ ನೀಡಿಲ್ಲ.

ಟೈಗರ್ ಜಿಂದಾ ಹೈ ಸಿನಿಮಾದಲ್ಲಿ ಸುದೀಪ್ ಪಾಕಿಸ್ತಾನದ ಐಎಸ್‍ಐ ಏಜೆಂಟ್ ಜಾóಹೀರ್ ಅನ್ನೋ ಪಾತ್ರದಲ್ಲಿ ಅಭಿನಯಿಸ್ತಾರೆ ಅನ್ನೋ ಸುದ್ದಿ ಕೇಳಿಬರ್ತಿದೆ. ಅಭಿನಯ ಚಕ್ರವರ್ತಿ ಸುದೀಪ್ ಅವರಿಗೆ ಬಾಲಿವುಡ್ ಹೊಸತಲ್ಲ. ಈ ಹಿಂದೆ ಫೂಂಕ್, ರಣ್, ರಕ್ತ ಚರಿತ್ರ ಸಿನಿಮಾಗಳಲ್ಲಿ ತಮ್ಮ ಅಮೋಘ ಅಭಿನಯದಿಂದ ಸುದೀಪ್ ಬಿಟೌನ್ ಪ್ರೇಕ್ಷಕರ ಮನಗೆದ್ದಿದ್ದಾರೆ. ಇದೀಗ ಬಾಲಿವುಡ್ ಟೈಗರ್ ಜೊತೆ ಸ್ಯಾಂಡಲ್‍ವುಡ್ ಹೆಬ್ಬುಲಿ ತೆರೆಹಂಚಿಕೊಳ್ತಿರೋ ಸುದ್ದಿ ಫ್ಯಾನ್ಸ್ ಥ್ರಿಲ್ಲಾಗಿದ್ದಾರೆ.

ಕನ್ನಡದ ಬಿಗ್’ಬಾಸ್ ರಿಯಾಲಿಟಿ ಶೋಗೆ ಸುದೀಪ್ ಅವರನ್ನು ಆಯ್ಕೆ ಮಾಡಲು ಶಿಫಾರಸು ಮಾಡಿದ್ದು ಇದೇ ಸಲ್ಲು ಭಾಯ್ ಅವರೇ. ಇವರಿಬ್ಬರ ಗೆಳೆತನ ವರ್ಷಗಳದ್ದು. ಸಲ್ಮಾನ್ ಕೊಟ್ಟ ಆಫರ್’ನ್ನು ಕಿಚ್ಚ ಒಪ್ಪಿಕೊಳ್ಳುತ್ತಾರಾ ಎಂದು ಕಾದುನೋಡಬೇಕು.

ಹಿಂದಿ ಮತ್ತು ತೆಲುಗು ಚಿತ್ರರಂಗದಲ್ಲಿ ಸುದೀಪ್ ತಮ್ಮದೇ ಛಾಪು ಮೂಡಿಸಿದ್ದಾರೆ. ಟಾಲಿವುಡ್’ನಲ್ಲೂ ಅವರು ನಟಿಸಿದ್ದಾರೆ. ರಾಮಗೋಪಾಲ್ ವರ್ಮಾ, ರಾಜಮೌಳಿಯಂಥ ಘಟಾನುಘಟಿ ನಿರ್ದೇಶಕರ ಜೊತೆ ಕೆಲಸ ಮಾಡಿದ್ದಾರೆ. ಅಮಿತಾಭ್ ಬಚ್ಚನ್, ಸೂರ್ಯ, ವಿಜಯ್ ಮೊದಲಾದವರೊಂದಿಗೆ ಅಭಿನಯಿಸಿದ್ದಾರೆ. “ಫೂಂಕ್”, “ರಣ್”, “ಈಗಾ”, “ಬಾಹುಬಲಿ”, “ರಕ್ತ ಚರಿತ” ಮೊದಲಾದ ಸೂಪರ್’ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ ನಮ್ಮ ಅಭಿನಯ ಚಕ್ರವರ್ತಿ ಸುದೀಪ್.