ಇಪತ್ತು ವರ್ಷಗಳ ಹಿಂದಿನ ಕೃಷ್ಣ ಮೃಗ ಬೇಟೆ ಪ್ರಕರಣದಲ್ಲಿ ಸಲ್ಲುಗೆ ಐದು ವರ್ಷ ಶಿಕ್ಷೆ!!

0
531

ಎರಡು ದಶಕಗಳ ಹಿಂದಿನ ಕೃಷ್ಣ ಮೃಗ ಬೇಟೆ ಪ್ರಕರಣವನ್ನು ವಿಚಾರಣೆ ನಡೆಸುತ್ತಿದ್ದ ಜೋಧಪುರ ಸಿಜೆಎಂ ಕೋರ್ಟ್ ಅ ಬಾಲಿವುಡ್-ನ ಖ್ಯಾತ ನಟರಾದ ಸಲ್ಮಾನ್ ಖಾನ್-ಗೆ ಐದು ವರ್ಷ ಜೈಲು ಹಾಗು ೧೦ ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದೆ. ಈ ಪ್ರಕರಣವು ಬಾಲಿವುಡ್ ಸಿನೆಮ “ಹಮ್ ಸಾಥ್ ಸಾಥ್ ಹೈ” ಚಿತ್ರೀಕರಣವಾಗುತ್ತಿದ್ದ ವೇಳೆ ಜರುಗಿದ್ದು ಈಗ ಇತಿಹಾಸ.

ಅನೇಕ ವರ್ಷಗಳಿಂದ ಭಾರಿ ಕುತೂಹಲಕ್ಕೆ ಕಾರಣವಾಗಿದ್ದ ಈ ಪ್ರಕರಣ ಇಂದು ಸಲ್ಮಾನ್ ಖಾನ್-ಗೆ ಶಿಕ್ಷೆಯಾಗುವ ತಿರುವು ಕಂಡುಕೊಂಡಿದೆ. ಇನ್ನು ಪ್ರಕರಣದ ವಿಚಾರಣೆಯಲ್ಲಿ ಸರ್ಕಾರಿ ಪರ ವಕೀಲರು ಕನಿಷ್ಠ 6 ವರ್ಷವಾದರೂ ಶಿಕ್ಷೆ ವಿಧಿಸಬೇಕೆಂದು ತಮ್ಮ ವಾದದಲ್ಲಿ ಹೇಳಿದ್ದರು, ಇದಕ್ಕೆ ಸಲ್ಮಾನ್ ಪರ ವಕೀಲರು ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡಬೇಕೆಂದು ನ್ಯಾಯಾಲಯದ ಮುಂದೆ ಮನವಿ ಮಾಡಿದ್ದರು.

ಸಲ್ಮಾನ್ ಕೆಲವು ಸಿನೆಮಾಗಳಲ್ಲಿ ತೊಡಗಿಕೊಂಡಿರುವುದರಿಂದ, ಸದ್ಯದ ಮಟ್ಟಿಗೆ ಈ ಆದೇಶವನ್ನು ಅಮಾನತಿನಲ್ಲಿಡಬೇಕೆಂದು ಸಲ್ಮಾನ್ ಪರ ವಕೀಲರು ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಈ ಪ್ರಕರಣದಲ್ಲಿ ಇನ್ನೋರ್ವ ಖ್ಯಾತ ಬಾಲಿವುಡ್ ನಟ ಸೈಫ್ ಅಲಿ ಖಾನ್, ನಟಿಯರಾದ ಟಬು, ನೀಲಂರವರನ್ನು ನಿರ್ದೋಷಿಗಳೆಂದು ನ್ಯಾಯಾಲಯ ತೀರ್ಮಾನಿಸಿದೆ.

ಈ ಪ್ರಕರಣದಲ್ಲಿ ಸಲ್ಮಾನ್ ಖಾನ್-ರನ್ನು IPC ಸೆಕ್ಷನ್ 51 (ವನ್ಯ ಜೀವಿ ರಕ್ಷಣಾ ಕಾಯ್ದೆ) ಹಾಗು ಸೆಕ್ಷನ್ 149ರ ಅಡಿಯಲ್ಲಿ ಶಿಕ್ಷೆಗೆ ಒಳಗಾಗಿದ್ದಾರೆ. ಇದೆ ವೇಳೆ ಬಿಶ್ನಾಯ್ ಸಮುದಾಯ ಬೇರೆಯವರನ್ನು ನ್ಯಾಯಾಲಯ ಖುಲಾಸೆ ಮಾಡಿರುವುದು ಬೇಸರ ತಂದಿದೆ ಎಂದು ತಮ್ಮ ಅಸಮಧಾನ ವ್ಯಕ್ತಪಡಿಸಿದ್ದಾರೆ.