ರೈಲ್ವೆ ಹಾಡು ಹೇಳಿ ಬಂದ ಹಣದಿಂದ ಜೀವನ ನಡೆಸುತ್ತಿದ್ದ ರಾನು ಮೊಂಡಲ್ ಎನ್ನುವ ಮಹಿಳೆ ಈಗ ಸ್ಟಾರ್ ಆಗಿದ್ದಾಳೆ. ಸದ್ಯ ಮಹಿಳೆ ಹೇಳಿರುವ ಹಾಡಿನ ಸದ್ದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಈಗಾಗಲೇ ಮಹಿಳೆಗೆ ಹಲವು ಟಿವಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಸಿನಿಮಾದಲ್ಲಿ ಹಾಡುವ ಅವಕಾಶಗಳು ಹರಿದು ಬರುತ್ತಿವೆ ಅಷ್ಟೇ ಅಲ್ಲದೆ ಮನವಿತೆಗೆ ಹೆಸರುವಾಸಿಯಾದ ಬಾಲಿವುಡ್ ಭಾಯ್ಜಾನ್, ಸೂಪರ್ಸ್ಟಾರ್ ಸಲ್ಮಾನ್ ಖಾನ್ ಸಿಂಗರ್ ರಾನು ಮೊಂಡಲ್ 55 ಲಕ್ಷ ರೂ.ಗಳ ಮೌಲ್ಯದ ಮನೆಯನ್ನು ಉಡುಗೊರೆಯಾಗಿ ನೀಡಿದ್ದಾರೆ ಎನ್ನುವ ಸುದ್ದಿ ಈಗ ಹರಿದಾಡುತ್ತಿದೆ.
ಹೌದು ವ್ಯಕ್ತಿಗೆ ಅದೃಷ್ಟ ಎನ್ನುವುದು ಯಾವಾಗೆ ಎಲ್ಲಿ ಹೇಗೆ ಬರುತ್ತೆ ಎಂದು ಹೇಳಲು ಸಾಧ್ಯವಾಗುವುದಿಲ್ಲ ಆದರೆ ಅದಕೊಂದು ಟೈಮ್ ಕೂಡಿ ಬರಬೇಕು ಅಷ್ಟೇ. ಇಂತಹ ಅದೃಷ್ಟಕ್ಕೆ ಸಿಕ್ಕ ಮಹಿಳೆ ರಾನು ಮಂಡಲ್ಗೆ ಸಲ್ಮಾನ್ ಖಾನ್ ಅವರು ಸಹಾಯಕ್ಕೆ ಮುಂದಾಗಿದ್ದಾರೆ. ಅಲ್ಲದೆ ಅವರಿಗೆ 55 ಲಕ್ಷ ರೂ. ಬೆಲೆಯ ಮನೆ ಕೊಡಿಸಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ. ಆದರೆ ಈ ಬಗ್ಗೆ ಸಲ್ಮಾನ್ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಈ ಮೊದಲು ಸಲ್ಮಾನ್ ತಮ್ಮ ಮುಂಬರುವ ‘ದಬಾಂಗ್-3’ ಚಿತ್ರದಲ್ಲಿ ಹಾಡಲು ಅವಕಾಶ ನೀಡಲಿದ್ದಾರೆ ಎಂಬ ವಿಷಯ ಕೇಳಿ ಬರುತ್ತಿತ್ತು. ಸದ್ಯ ಸಲ್ಮಾನ್ ಕಷ್ಟದಲ್ಲಿ ಇರುವವರಿಗೆ ಯಾವಾಗಲೂ ಸಹಾಯ ಮಾಡುತ್ತಾರೆ. ಹಾಗೆಯೇ ಅವರು ರಾನು ಅವರಿಗೂ ಸಹಾಯ ಮಾಡಿದ್ದಾರೆ ಎನ್ನಲಾಗಿದೆ.
ಹೌದು, ನಾವು ಮಾತನಾಡುತ್ತಿರುವುದು ರಾಣೂ ಮೊಂಡಲ್ ಅವರ ಬಗ್ಗೆ, ಇತ್ತೀಚಿಗೆ ಅವರು ಪಶ್ಚಿಮ ಬಂಗಾಳದ ರಣಘಾಟ್ ನಿಲ್ದಾಣದಲ್ಲಿ ಲತಾ ಮಂಗೇಶ್ಕರ್ ಅವರ ಅಪ್ರತಿಮ ಗೀತೆ ಏಕ್ ಪ್ಯಾರ್ ಕಾ ನಾಗಮ ಹೈ ಹಾಡುವ ವಿಡಿಯೋ ನೆಟ್ನಲ್ಲಿ ವೈರಲ್ ಆಗಿತ್ತು, ಅವರ ಪ್ರತಿಭೆಯನ್ನು ಗಮನಿಸಿದ ಗಾಯಕ ಮತ್ತು ನಟ ಹಿಮೇಶ್ ರೇಶಮ್ಮಿಯಾ ಅವರು ತಮ್ಮ ಮುಂಬರುವ ಚಿತ್ರ ಹ್ಯಾಪಿ ಹಾರ್ಡಿ ಮತ್ತು ಹೀರ್ ಗಾಗಿ ತಮ್ಮ ಆರಂಭಿಕ ಹಾಡನ್ನು ರೆಕಾರ್ಡ್ ಮಾಡಿದ್ದಾರೆ. ರಾನು ಮೊಂಡಲ್ ಅಂತಿಮವಾಗಿ ತನ್ನ ಮೊದಲ ಬಾಲಿವುಡ್ ಚಲನಚಿತ್ರ ಗೀತೆ ‘ತೇರಿ ಮೇರಿ ಕಹಾನಿಯನ್ನು ಧ್ವನಿಮುದ್ರಣ ಮಾಡಿದೆ, ಇದು ಈಗ ಅಂತರ್ಜಾಲದಲ್ಲಿ ಬಿರುಗಾಳಿಯನ್ನೇ ಸೃಷ್ಟಿಸಿದೆ. ಈ ವಿಷಯವನ್ನು ಸ್ವತಃ ಹಿಮೇಶ್ ತಮ್ಮ ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಹಾಕುವ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದರು.
ವಿಶೇಷವೆಂದರೆ ಸೋಷಿಯಲ್ ಮೀಡಿಯಾ ವರದಿಗಳಲ್ಲಿ ಸಲ್ಮಾನ್ ಖಾನ್ ಅವರಿಗೆ 55 ಲಕ್ಷ ರೂ ಮೌಲ್ಯದ ದುಬಾರಿ ಮನೆ ಮತ್ತು ಮುಂಬರುವ ದಬಾಂಗ್ ಚಿತ್ರಕ್ಕೆ ಹಾಡುವ ಅವಕಾಶವನ್ನು ನೀಡಿದ್ದಾರೆ ಎನ್ನಲಾಗಿದೆ. ಆದರೆ ಇದು ಇನ್ನು ಅಧಿಕೃತವಾಗಿ ಘೋಷಣೆ ಮಾಡಿಲ್ಲ ಎನ್ನಲಾಗಿದೆ. ನಟ ಹಿಮೇಶ್ ರಾನು ಅವರ ಮೊದಲ ಹಾಡಿಗೆ 7 ಲಕ್ಷ ರೂ. ಸಂಭಾವನೆ ನೀಡಿದ್ದಾರೆ. ಈ ಹಣವನ್ನು ನೀಡುವಾಗ ರಾನು ನಿರಾಕರಿಸಿದರಂತೆ, ಆಮೇಲೆ ಒತ್ತಾಯ ಪೂರಕವಾಗಿ ಹಣ ನೀಡಿದ್ದಾರೆ. ಇದರ ನಡುವೆ ಮಹಿಳೆಗೆ ಮತ್ತೊಂದು ಉಡುಗರೇ ಸಿಕ್ಕಿದ್ದು, 10 ವರ್ಷದಿಂದ ದೂರವಿದ್ದ ಮಗಳು ಈಗ ನನ್ನ ತಾಯಿ ಎಂದು ಓಡಿ ಬಂದಿದ್ದಾಳಂತೆ. ಹೀಗೆ ಹಾಡಿನಿಂದಲೇ ಕಳೆದುಕೊಂಡ ಜೀವನವನ್ನು ಮತ್ತೆ ಮಹಿಳೆ ಪಡೆದುಕೊಂಡಿದ್ದಾಳೆ. ಅದರಂತೆ ಮತ್ತೊಂದು ಭೋಜ್ಪುರಿ ಸಿನಿಮಾದಲ್ಲಿ ಅವಕಾಶ ಸಿಕ್ಕಿದೆ.