ದಾರಾಳವಾಗಿ ದೇವಾಲಯಕ್ಕೆ ಬಂದು ಸಹೋದರಿಯನ್ನೇ ಮದ್ವೆಯಾದ ಯುವತಿ; ಫೇಸ್‍ಬುಕ್‍ನಲ್ಲಿ ಫೋಟೋ ಹಂಚಿಕೊಂಡ ಸುದ್ದಿ ವೈರಲ್..

0
80

ಸಲಿಂಗಿಗಳ ಪರವಾಗಿ ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟ ನಂತರ ದೇಶದಲ್ಲಿ ಏನೆಲ್ಲಾ ಆಶ್ಚರ್ಯಕರ ಘಟನೆಗಳು ನಡೆಯುತಿವೆ. ಅದರಲ್ಲಿ ಕೆಲವುಗಳನ್ನು ನೋಡಿದ ಜನರು ಈ ತರಹದ ಪರಿಸ್ಥಿತಿ ಬಂದೆ ಬರುತ್ತೆ ಅಂತ ಕನಸು- ನನಸ್ಸಿನಲ್ಲಿ ಅಂದುಕೊಂಡಿರಲಿಲ್ಲ, ಅನ್ನೋ ಮಾತುಗಳು ಕೂಡ ಕೇಳಿ ಬರುತ್ತಿವೆ. ಇದರಿಂದ ಹುಡುಗ -ಹುಡುಗರ ನಡುವೆ ವಿವಾಹ ಮತ್ತು ಲೈಗಿಂಕತೆ ನಡೆಯುತ್ತಿದೆ, ಅದರಂತೆ ಮಹಿಳೆಯರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಇದಕ್ಕೆ ಮಾರಕವಾಗುತ್ತಿದ್ದು, ಇದಕ್ಕೆ ಸಾಕ್ಷಿಯಾಗಿ ಕಸಿನ್ ಸಹೋದರಿಯನ್ನೇ ಯುವತಿಯೊಬ್ಬಳು ಮದುವೆಯಾಗಿದ್ದು ದೇಶದಲ್ಲಿ ಬಾರಿ ವೈರಲ್ ಆಗಿದೆ.

Also read: ಮೂರು ಮಕ್ಕಳನ್ನು ಹೆತ್ತ ಪಾಲಿಕೆ ಸದಸ್ಯೆಯನ್ನು ಅನರ್ಹ ಗೊಳಿಸಿದ ಕೋರ್ಟ್; ಚುನಾವಣೆ ನಿಲ್ಲುವುದಕ್ಕೆ ಅರ್ಹತೆಗಿಂತ ಫ್ಯಾಮಿಲಿ ಪ್ಲಾನಿಂಗ್ ಮುಖ್ಯವೆಂದ ಸುಪ್ರಿಂ ಕೋರ್ಟ್!!

ಹೌದು ಮನೆಯಲ್ಲಿ ಪ್ರೇಮ ವಿವಾಹಕ್ಕೆ ಒಪ್ಪಿಗೆ ನೀಡುತ್ತಿರಲಿಲ್ಲ, ಅದಕ್ಕೆ ಈಗ ಜಯ ಸಿಕ್ಕತಾಗಿದ್ದು ಈಗ ಮತ್ತೊಂದು ರೀತಿಯ ವಿವಾಹಗಳು ಪಾಲಕರನ್ನು ಬೆಚ್ಚಿಬಿಳಿಸುತ್ತಿವೆ. ಯುವತಿಯರು ದಾರಾಳವಾಗಿ ದೇವಸ್ಥಾನಕ್ಕೆ ಹೋಗಿ ನಮಗೆ ಮದುವೆ ಮಾಡಿಸಿ ಎಂದು ಹೇಳಿ ಮದುವೆ ಮಾಡಿಕೊಳ್ಳುತ್ತಿರುವುದು ಹೆಚ್ಚುತ್ತಿವೆ. ಇಂತಹದೆ ಒಂದು ಘಟನೆ ನಿನ್ನೆ ವಾರಾಣಾಸಿಯ ನಡೆದಿದ್ದು ರೋಹನಿಯಾ ನಿವಾಸಿಯಾದ ಕಸಿನ್ ಸಹೋದರಿಯರು ಪೋಷಕರ ವಿರುದ್ಧವಾಗಿ ಹೋಗಿ ಮದುವೆ ಆಗಿದ್ದಾರೆ. ಮದುವೆ ಆದ ಬಳಿಕ ಆ ಫೋಟೋಗಳನ್ನು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡುವ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದಾರೆ.

ಇವರು ಮದುವೆಗೆ ಯಾರು ಒಪ್ಪಿಗೆ ನೀಡಲು ಸಾದ್ಯವಿಲ್ಲ ಎನ್ನುವುದು ಅರಿತ ಸಹೋದರಿಯರು ಬುಧವಾರ ಶಿವನ ದೇವಸ್ಥಾನಕ್ಕೆ ಹೋಗಿ ಅಲ್ಲಿದ್ದ ಅರ್ಚಕರಿಗೆ ಮದುವೆ ಮಾಡಿಸಿ ಎಂದು ಹೇಳಿದ್ದಾರೆ. ಆದರೆ ಅರ್ಚಕರು ಮದುವೆ ಮಾಡಿಸಲು ನಿರಾಕರಿಸುತ್ತಾರೆ. ಪಂಡಿತ ನಿರಾಕರಿಸಿದರೂ ಸಹ ಸಹೋದರಿಯರು ದೇವಸ್ಥಾನದ ಒಳಗೆ ಕುಳಿತ್ತಿದ್ದರು. ಹುಡುಗಿಯರು ಜೀನ್ಸ್, ಟೀ-ಶರ್ಟ್ ಧರಿಸಿ ಅದಕ್ಕೆ ಕೆಂಪು ಬಣ್ಣದ ಚುನ್ನಿ ಹಾಕಿ ಮದುವೆ ಮಾಡಿಕೊಂಡರು. ಸಹೋದರಿಯರು ಮದುವೆ ಆಗುವ ಹೊತ್ತಿಗೆ ದೇವಸ್ಥಾನದ ಬಳಿ ಹೆಚ್ಚು ಜನ ಸೇರಿದ್ದರು. ಅಹಿತಕರ ಘಟನೆ ನಡೆಯುವ ಮೊದಲೇ ಸಹೋದರಿಯರು ಅಲ್ಲಿಂದ ಹೊರಟು ಹೋದರು.

Also read: ವಿಧಾನಸೌಧದಲ್ಲಿ ನಿಂಬೆಹಣ್ಣಿಗೆ ನೋ ಎಂಟ್ರಿ! ಅಯ್ಯೋ ಹಾಗಾದ್ರೆ ಸಚಿವ ರೇವಣ್ಣನ ಗತಿಯೇನು??

ಸಹೋದರಿಯರನ್ನು ಮದುವೆ ಮಾಡಿಸಿದ್ದಕ್ಕೆ ಕೆಲವರು ಪಂಡಿತರನ್ನು ಟೀಕಿಸಿದ್ದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಪಂಡಿತ, ಒಬ್ಬಳು ಯುವತಿ ಕಾನ್‍ಪುರದವಳಾಗಿದ್ದು, ಮತ್ತೊಬ್ಬಳು ವಿದ್ಯಾಭ್ಯಾಸಕ್ಕೆ ಎಂದು ಕಸಿನ್ ಮನೆಯಲ್ಲಿ ವಾಸಿಸುತ್ತಿದ್ದಳು ಎಂದು ಹೇಳಿದ್ದಾರೆ. ಹೇಳಿದ್ದಾರೆ ಆದರೆ ಇಬ್ಬರು ಸುಮಾರು ದಿನಗಳಿಂದ ಒಂದೇ ಮನೆಯಲ್ಲಿ ವಾಸವಾಗಿದ್ದರು, ಈ ನಡುವೆ ಇಬ್ಬರಲ್ಲಿ ಇಂತಹ ವಿಚಾರ ಬಂದಿದೆ. ಇದಕ್ಕೆ ಸುಪ್ರಿಂಕೋರ್ಟ್ ಕೂಡ ಒಪ್ಪಿಗೆ ನೀಡಿದರು ಮಾನವನ ಸೃಷ್ಟಿಯಲ್ಲಿ ಇದು ವಿರೋಧವಾಗಿದೆ ಎಂದು ಹಲವರು ಅಭಿಪ್ರಾಯ ತಿಳಿಸಿದ್ದಾರೆ.

ಅದರಂತೆ ಒಂದೇ ಲಿಂಗದ ಇಬ್ಬರು ವ್ಯಕ್ತಿಗಳು ಲಿಂಗ ಪರಿವರ್ತನೆಗೆ ಒಳಗಾಗುತ್ತಿದ್ದಾರೆ, ಮೊದಲು ಕದ್ದು ಮುಚ್ಚಿ ನಡೆಯಿತ್ತಿದ್ದ ಚಿಕಿತ್ಸೆ ಈಗ ಓಪನ್ ಆಗಿ ನಡೆಯುತ್ತಿದೆ. ಲೈಂಗಿಕ ಅಲ್ಪಸಂಖ್ಯಾತರು ಧೈರ್ಯವಾಗಿ ಲಿಂಗ ಪರಿವರ್ತನಾ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುತ್ತಿದ್ದಾರೆ. ಅನೇಕ ಸಣ್ಣ ಪುಟ್ಟ ಚಿಕಿತ್ಸಾಲಯಗಳು ಈ ಸರ್ಜರಿಗಳನ್ನು ಸರಿಯಾಗಿ ಮಾಡದೇ ಅವಾಂತರ ಮಾಡುತ್ತಿದ್ದವು. ಆದರೆ ಈಗ ಹಲವು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಲಿಂಗ ಪರಿವರ್ತನಾ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ಮಾಡುತ್ತಿವೆ. ಬೆಂಗಳೂರಿನಲ್ಲಿ ಕೂಡ ಇಂತಹ ಚಿಕಿತ್ಸೆ ಬಾರಿ ಬೇಡಿಕೆ ಇದೆ.