ರಾಯಚೂರಿನ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಭರದಿಂದ ಸಾಗಿದೆ

0
1297

ರಾಯಚೂರು: ರಾಯಚೂರಿನಲ್ಲಿ ನಡೆಯುವ 82ನೇ ಅಖಿಲ ಭಾರತ ಕನ್ನಡ ಸಾಹಿತ್ತ ಸಮ್ಮೇಳನಕ್ಕೆ ಬಿಸಿಲನಗರಿ ಸಜ್ಜಾಗಿದೆ. ಬಿಸಿಲ ನಗರಿಯಲ್ಲಿ ಸಾಹಿತ್ಯದ ಹೊಸ ಗಾಳಿ ಬೀಸುತ್ತಿದೆ. ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪ ಸಮ್ಮನೇಳನಾಧ್ಯಕ್ಷರು. ಅವರನ್ನ ಸಾಂಪ್ರದಾಯಿಕ ಶೈಲಿಯಲ್ಲಿ ಸ್ವಾಗತಿಸಲು ಸ್ವಾಗತ ಸಮಿತು ಸಜ್ಜಾಗಿದೆ. ಹಿರಿಯ ಸಾಹಿತಿ ಶಾಂತರಸರ ಹೆಸರಿನಲ್ಲಿ ಪ್ರಧಾನ ವೇದಿಕೆ ಸಜ್ಜಾಗಿದೆ.

ಅಂತಾರಾಷ್ಟ್ರೀಯ ಮಟ್ಟದ ವೇದಿಕೆ ಸಜ್ಜುಗೊಂಡಿದ್ದು, ಸಾಹಿತ್ಯಾಸಕ್ತರು ಕೂರಲು 25ಸಾವಿರ ಆಸನದ ವ್ಯವಸ್ಥೆ ಮಾಡಲಾಗಿದೆ. ಲಕ್ಷಾಂತರ ಜನ ಸಾಹಿತ್ಯ‌ ಜಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಊಟಕ್ಕೂ ‌ಕೂಡ  ವ್ಯವಸ್ಥೆ ಮಾಡಲಾಗಿದೆ. ಯಾವುದೇ ಸಮಸ್ಯೆಗಳಾಗದಂತೆ ಸಕಲ ವ್ಯವಸ್ಥೆ ಮಾಡಲಾಗಿದೆ. ಈ ಬಾರಿ ಉಳಿದುಕೊಳ್ಳು ಸ್ವಲ್ಪ ಸಮಸ್ಯೆಯಾಗುತ್ತೆ ಎನ್ನುವುದಿತ್ತು. ಆ ಸಮಸ್ಯೆಯನ್ನು ಕೂಡ ಬಗೆಹರಿಸಲಾಗಿದೆ. ಇಡೀ ಬಿಸಿಲ ನಗರಿ ರಾಯಚೂರು ಸೊಗಸಾಗಿ ಸಿಂಗಾರವಾಗುತ್ತಿದೆ. ಅದ್ಧೂರಿಯಾಗಿ ಅರ್ಥಪೂರ್ಣ ಸಾಹಿತ್ಯ ಜಾತ್ರೆ ನಡೆಯುತ್ತೆ.ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮನು ಬಳಿಗಾರ್ ತಿಳಿಸಿದ್ದಾರೆ.

ಸಂಜೆ 4ಗಂಟೆಗೆ ರಾಯಚೂರಿಗೆ ಆಗಮಿಸಲಿರುವ ಸಮ್ಮೇಳನಾಧ್ಯಕ್ಷರು. ರಾಯಚೂರಿನ ಗದ್ವಾಲ್ ರಸ್ತೆಯಲ್ಲಿ ಸಮ್ಮೇನಾಧ್ಯಕ್ಷ ಬರಗೂರು ರಾಮಚಂದ್ರಪ್ಪ ಅವರಿಗೆ ಸ್ವಾಗತಕ್ಕೆ ಸಜ್ಜುಮಾಡಲಾಗಿದೆ. ಕುಂಭ ಮೇಳ, ಕಳಸ ಹೊತ್ತ ಮಹಿಳೆಯರ ಮೂಲಕ ಬರಗೂರು ಅವರಿಗೆ ಸ್ವಾಗತಕ್ಕೆ ಸಿದ್ಧತೆಮಾಡಿಕೊಂಡಿದ್ದಾರೆ. ಜಗಮಗಿಸಲು ಸಜ್ಜಾಗುತ್ತಿರುವ  ರಾಯಚೂರು. ನಗರದ ತುಂಬಾ ಸ್ವಾಗತದ ಬ್ಯಾನರ್ ಗಳ ಅಬ್ಬರ.  ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಅಧ್ಯಕ್ಷ ಮನು ಬಳಿಗಾರ್ ಖುದ್ದಾಗಿ ಪರಿಶೀಲಿಸುತ್ತಿದ್ದಾರೆ.