ಮರಳುದಂದೆ ಮಟ್ಟ ಹಾಕುವಲ್ಲಿ ರಾಜ್ಯಸರ್ಕಾರ ವಿಫಲ. ಮರಳುದಂದೆ ತಡೆಗಟ್ಟುಲು ಹೋದ ಪೊಲೀಸ್ ಇನ್ಸ್‍ಪೆಕ್ಟರ್ ಕೊಲೆಗೆ ಯತ್ನ..!

0
570

ನಮ್ಮ ರಾಜ್ಯದಲ್ಲಿ ಹಲವು ರೀತಿಯ ಭ್ರಷ್ಟಾಚಾರಗಳು ತಂಡವಾಡುತಿದ್ದು ಇದರಲ್ಲಿ ಮರಳುದಂದೆ ಸಹ ಒಂದಾಗಿದೆ ಇದನ್ನು ತಡೆಗಟ್ಟುಲು ಸರ್ಕಾರಿದಿಂದ ಇನ್ನು ಕಠಿಣ ಕಾನೂನು ಜಾರಿ ಮಾಡುವ ಅವಶ್ಯಕತೆ ಇದೆ.

ಅಕ್ರಮವಾಗಿ ಮರಳು ಸಾಗಾಟಕ್ಕೆ ಯತ್ನಿಸುತ್ತಿದ್ದವರನ್ನು ಹಿಡಿಯಲು ಹೋದ ರಿಸರ್ವ್ ಪೊಲೀಸ್ ಇನ್ಸ್‍ಪೆಕ್ಟರ್ ಮೇಲೆಯೇ ವಾಹನ ಚಲಾಯಿಸಿ ಕೊಲೆ ಮಾಡಲು ಯತ್ನಿಸಿದ ಘಟನೆ ಬಳ್ಳಾರಿಯ ದತ್ತಾತ್ರೇಯ ದೇವಸ್ಥಾನದ ಬಳಿ ನಡೆದಿದೆ.

ಕಳೆದ ತಡ ರಾತ್ರಿ ಬಳ್ಳಾರಿಯಲ್ಲಿ ಬೊಲೆರೋ ವಾಹನದಲ್ಲಿ ಮರಳು ಸಾಗಾಟ ಮಾಡಲಾಗಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ರಿಸರ್ವ್ ಪೊಲೀಸ್ ಇನ್ಸ್ ಪೆಕ್ಟರ್ ಸರ್ದಾರ್ ಹಾಗೂ ಪೇದೆಯೊಬ್ಬರ ಮೇಲೆ ಮರಳು ಸಾಗಿಸುತ್ತಿದ್ದ ಚಾಲಕ ವಾಹನನವನ್ನು ಚಲಾಯಿಸಿ ಕೊಲೆ ಮಾಡಲು ಯತ್ನಿಸಿದ್ದಾನೆ.

ಅದೃಷ್ಟವಶಾತ್ ಘಟನೆಯಲ್ಲಿ ಪಾರಾಗಿರುವ ರಿಸರ್ವ್ ಪೊಲೀಸ್ ಇನ್ಸ್ ಪೆಕ್ಟರ್ ಸರ್ದಾರ್ ಅವರಿಗೆ ಸ್ವಲ್ಪ ಗಾಯಗಳಾಗಿದ್ದು ವಿಮ್ಸ್ ನಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ. ಘಟನೆಯ ನಂತರ ಬೊಲೆರೋ ವಾಹನದ ಸಮೇತವಾಗಿ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ಈ ಘಟನೆಯ ಕುರಿತು ಬಳ್ಳಾರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.