ಕನ್ನಡದ ವೀರ ಯೋಧ ಸಂದೀಪ್ ಪಾರ್ಥಿವ ಶರೀರ ತವರಿಗೆ

0
841

ಕನ್ನಡದ ವೀರ ಯೋಧ ಸಂದೀಪ್ ಪಾರ್ಥಿವ ಶರೀರ ತವರಿಗೆ

ಹಾಸನ:  ಕೊನೆಗೂ ಕನ್ನಡದ ವೀರ ಯೋಧ ಸಂದೀಪ್ ಪಾರ್ಥಿವ ಶರೀರ ತವರಿಗೆ ಆಗಮಿಸಿದೆ. ಯೋಧನ ಸಾವಿಗೆ ಜನ ಕಂಬನಿ ಮಿಡಿದಿದ್ದಾರೆ. ದೇಶಕ್ಕಾಗಿ ಪ್ರಾಣತೆತ್ತಿದ್ದಕ್ಕೆ ನಮನ ಸಲ್ಲಿಸಿದರು. ಇಂದು ಹುಟ್ಟೂರು ದೇವಿರಹಳ್ಳೀಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಲಿದೆ.

ಯೋಧ ಸಂದೀಪ್ ಪಾರ್ಥಿವ ಶರೀರ

ಜಮ್ಮು ಮತ್ತು ಕಾಶ್ಮೀರದ ಸೇನಾ ಶಿಬಿರದಲ್ಲಿ ಸಂಭವಿಸಿದ ಹಿಮಕುಸಿತದಲ್ಲಿ 20ಕ್ಕೂ ಹೆಚ್ಚು ಯೋಧರು ಸಾವಿಗೀಡಾಗಿದ್ದರು. ರಾಜ್ಯದ ಹಾಸನ ಜಿಲ್ಲೆಯ ದೇವಿಹಳ್ಳಿಯ ಯೋಧ ಸಂದೀಪ್‌ ಶೆಟ್ಟಿ ಅವರು ದುರ್ಘಟನೆಯಲ್ಲಿ ಹುತಾತ್ಮರಾದರು.

ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಂತಿಮ ನಮನ ಸಲ್ಲಿಸಿದ ಬಳಿಕ ಹುಟ್ಟೂರು ದೇವಿಹಳ್ಳಿವರೆಗೆ ಮೆರವಣಿಗೆ ಮೂಲಕ ಕೊಂಡೊಯ್ಯಲಾಗುವುದು.. ಸಂದೀಪ್ ಮನೆಯಲ್ಲಿ ಅಂತಿಮ ವಿಧಿವಿಧಾನ ಸಲ್ಲಿಸಿದ ಬಳಿಕ ಹಿಂದೂ ಸಂಪ್ರದಾಯದಂತೆ ಸಕಲ ಸರ್ಕಾರಿ ಗೌರವಗೊಳೊಂದಿಗೆ ಅಂತ್ಯಸಂಸ್ಕಾರ ನಡೆಯಲಿದೆ.

ನಿನ್ನೆ ಡೆಲ್ಲಿಯಿಂದ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಯೋಧನ ಪಾರ್ಥಿವ ಶರೀರ ತರಲಾಯ್ತು.. ಇನ್ನು ರಾಜ್ಯ ಸರ್ಕಾರದ ಪರವಾಗಿ ಸಚಿವ ಎ.ಮಂಜು, ಯೋಧನ ಕುಟುಂಬಕ್ಕೆ ೨೫ ಲಕ್ಷ ರೂಪಾಯಿ ಚೆಕ್ ವಿತರಿಸಿದ್ದಾರೆ.. ಅಲ್ದೆ, ಕುಟುಂಬಕ್ಕೆ ಒಂದು ಸೈಟ್ ನೀಡುವ ಭರವಸೆ ನೀಡಿದ್ದಾರೆ. ಒಟ್ಟಿನಲ್ಲಿ  ಮಧ್ಯಾಹ್ನ ಹುತಾತ್ಮ ಯೋಧನ ಅಂತ್ಯಸಂಸ್ಕಾರ ನಡೆಯಲಿದೆ.

ರಾಜ್ಯ ಸರ್ಕಾರದ ಪರವಾಗಿ ಸಚಿವ ಎ.ಮಂಜು, ಯೋಧನ ಕುಟುಂಬಕ್ಕೆ ೨೫ ಲಕ್ಷ ರೂಪಾಯಿ ಚೆಕ್ ವಿತರಿಸಿದ್ದಾರೆ.. ಅಲ್ದೆ, ಕುಟುಂಬಕ್ಕೆ ಒಂದು ಸೈಟ್ ನೀಡುವ ಭರವಸೆ ನೀಡಿದ್ದಾರೆ. ಒಟ್ಟಿನಲ್ಲಿ  ಮಧ್ಯಾಹ್ನ ಹುತಾತ್ಮ ಯೋಧನ ಅಂತ್ಯಸಂಸ್ಕಾರ ನಡೆಯಲಿದೆ.