ಅಪರೂಪದ ಪಕ್ಷಿ ಕಲ್ಲುಗೌಜಲು’!!!

0
970

Kannada News | kannada Useful Tips

ಮಸಾರಿ ಮಣ್ಣಿನ ಬಣ್ಣ ಹೋಲುವ ಪಕ್ಷಿಗಳ ದೂರದಿಂದ ನೋಡಿದರೆ ಬೆಣಚು ಕಲ್ಲಿನಂತೆ ಕಂಡು ಬರುತ್ತವೆ. ಇವು ಅಪರೂಪದ ಪಕ್ಷಿಗಳಾಗಿದ್ದು, ಇವುಗಳ ಹೆಸರು ಸ್ಯಾಂಡ್‍ಗ್ರೋಜ್. ಕನ್ನಡದಲ್ಲಿ ಇವುಗಳನ್ನು “ಕಲ್ಲುಗೌಜಲು” ಎಂದು ಕರೆಯುತ್ತಾರೆ. ಈ ಪಕ್ಷಿಗಳ ಜೀವನ ಕ್ರಮ ಉಳಿದ ಪಕ್ಷಿಗಳಿಗಿಂತ ಭಿನ್ನವೇನಲ್ಲ, ಇವು ತುಂಬಾ ದೂರದವರೆಗೂ ಹಾರಬಲ್ಲವು. ಹೆಚ್ಚಾನು ಹೆಚ್ಚು ಗಂಡು-ಹೆಣ್ಣು ಜೊತೆಗೆ ಇರುತ್ತವೆ. ಕೆಲವೊಮ್ಮೆ ಗುಂಪಾಗಿಯು ಸಹ ಇರುತ್ತವೆ. ಹೆಣ್ಣು-ಗಂಡು ಪಕ್ಷಿಗಳು ನೋಡಲು ಒಂದೆ ಆಕಾರದಲ್ಲಿ ಕಂಡರೂ ಗಂಡಿಗೆ ಕೊಕ್ಕಿನವರೆಗೆ ಚುಕ್ಕಿಗಳಿದ್ದರೆ, ಹೆಣ್ಣಿಗೆ ಕುತ್ತಿಗೆಬಾಗದವರೆಗೆ ಮಣ್ಣಿನ ಆಕಾರದ ಚುಕ್ಕಿಗಳಿವೆ, 28 ಸೆ.ಮೀ ಅಥವಾ 12 ಇಂಚು ಉದ್ದ ಇರುತ್ತವೆ.

Image result for sandgrouse in india
Source VisualQuotient

ಇವುಗಳನ್ನು ಗುರುತಿಸುವುದು ಸುಲಭವೇನಲ್ಲ!, ಎಲ್ಲೋ ಮರದ ಮೇಲೆ ಕುಳಿತರೆ ಹುಡುಕಬಹುದೇನೋ, ಆದರೆ ಹುಲ್ಲುಗಳ ನಡುವೆ, ಕಲ್ಲುಗಳ ನಡುವೆ, ಮಣ್ಣಿನ ಹೆಂಟೆಗಳಲ್ಲಿ ಇವು ಕುಳಿತ ಸಂದರ್ಭದಲ್ಲಿ ಕಲ್ಲು-ಹೆಂಟೆ ಯಾವುದು, ಪಕ್ಷಿಯಾವುದು ಎನ್ನುವ ವ್ಯತ್ಯಾಸ ಗೊತ್ತಾಗುವುದಿಲ್ಲ. ಸ್ಯಾಂಡ್‍ಗ್ರೋಜ್ ಪಕ್ಷಿಗಳಲ್ಲಿ ಒಟ್ಟು ಸುಮಾರು 16 ಪ್ರಭೇದಗಳಿವೆ. ಇವು ಆಫ್ರಿಕ ಹಾಗೂ ಮಡಗಾಸ್ಕರ್, ದಕ್ಷಿಣ ಯುರೋಪ್, ದಕ್ಷಿಣ ಹಾಗೂ ಮಧ್ಯ ಏಷ್ಯದ ಮರಳುಗಾಡುಗಳಲ್ಲಿ ಕಾಣಬರುತ್ತವೆ. ಇವುಗಳಲ್ಲಿ ಮುಖ್ಯವಾದವು ಮಧ್ಯ ಏಷ್ಯದ ನಿವಾಸಿಯಾದ ಸಿರಾಪ್ಟಿಸ್ ಪ್ಯಾರಡಾಕ್ಸಸ್; ಸ್ಪೇನ್, ಉತ್ತರ ಆಫ್ರಿಕ ಮತ್ತು ಏಷ್ಯ ಮೈನರ್ಗಳ ನಿವಾಸಿಯಾದ ಟೀರೋಕ್ಲಿಸ್ ಆಲ್ಚಾಟ, ಭಾರತದಲ್ಲಿ ಕಾಣಬರುವ ಟೀರೋಕ್ಲಿಸ್ ಎಕ್ಸಸ್ಟ್‍ಸ್ ಮತ್ತು ಟೀರೋಕ್ಲಿಸ್ ಇಂಡಿಕಸ್ ಎಂಬವು. ಸ್ಯಾಂಡ್‍ಗ್ರೋಜ್ ಪಕ್ಷಿಗಳು ಸಾಧಾರಣವಾಗಿ 9″_16″ ಇಂಚು ಉದ್ದಕ್ಕೆ ಬೆಳೆಯುತ್ತದೆ. ಇದಕ್ಕೆ ಪುಷ್ಟವಾದ ದೇಹವಿದೆ. ದೇಹದ ಬಣ್ಣ ಬೂದು ಅಥವಾ ಕಂದು. ಅಲ್ಲಲ್ಲಿ ಕಿತ್ತಳೆ, ಕೆಂಗಂದು, ಕಪ್ಪು ಹಾಗೂ ಬಿಳಿಯ ಬಣ್ಣದ ಮಚ್ಚೆಗಳಿವೆ. ಇದರಿಂದಾಗಿ ಹಕ್ಕಿಯ ಬಣ್ಣ ಪರಿಸರದ ಬಣ್ಣದೊಂದಿಗೆ ಮಿಳಿತವಾಗಿ ಹಕ್ಕಿಯನ್ನು ಗುರುತಿಸುವುದು ಕಷ್ಟವಾಗುತ್ತದೆ.

Also Read: ರೈತರಿಗೆ ಲಕ್ಷಾಂತರ ರೂಗಳ ಆದಾಯ ತರುತ್ತಿದೆ ಗೋಮಾತೆ!!!

Watch :