ಮಹಿಳೆಯರ ಆರೋಗ್ಯ, ಶುಚಿತ್ವಕ್ಕೆ ಹೊಸ ಹೆಜ್ಜೆ ಇಟ್ಟಿರುವ ಕೇಂದ್ರ ಸರ್ಕಾರ; ಇಂದಿನಿಂದ ಜನೌಷಧ ಕೇಂದ್ರಗಳಲ್ಲಿ 1 ರೂ.ಗೆ ಸ್ಯಾನಿಟರಿ ಪ್ಯಾಡ್‌ ಮಾರಾಟ.!

0
527

ದೇಶದ ಬಡವರಿಗೆ ಅನುಕೂಲವಾಗುವಂತೆ ಜನೌಷಧ ಕೇಂದ್ರಗಳನ್ನು ತೆರೆಯಲಾಗಿದ್ದು, ಇದರಿಂದ ಲಕ್ಷಾಂತರ ಜನರು ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಇದರಿಂದ ಮಹಿಳೆಯರಿಗೆ ಹೆಚ್ಚಿನ ಅನುಕೂಲ ಮಾಡಲು ಸರ್ಕಾರ ಜನೌಷಧ ಕೇಂದ್ರಗಳಲ್ಲಿ ಕೇವಲ 1 ರೂಪಾಯಿಗೆ ಸ್ಯಾನಿಟರಿ ಪ್ಯಾಡ್‍ಗಳನ್ನು ಒದಗಿಸಲು ಮುಂದಾಗಿದ್ದು. ಮಹಿಳೆಯರ ಆರೋಗ್ಯವನ್ನು ಗಂಭೀರವಾಗಿ ಪರಿಗಣಿಸಿ ಆರೋಗ್ಯ, ಶುಚಿತ್ವ ವಿಚಾರದಲ್ಲಿ ಹೊಸ ಹೆಜ್ಜೆ ಇಟ್ಟಿರುವ ಕೇಂದ್ರ ಸರ್ಕಾರ ಜನೌಷಧ ಕೇಂದ್ರಗಳಲ್ಲಿ 2.50 ರೂ.ಗೆ ಮಾರಲಾಗುತ್ತಿದ್ದ ಸ್ಯಾನಿಟರಿ ಪ್ಯಾಡ್‍ಗಳು ಇಂದಿನಿಂದ ಕೇವಲ 1 ರೂ.ಗೆ ಮಾರಾಟ ಮಾಡುವಂತೆ ತಿಳಿಸಿದೆ.

ಹೌದು ಮಹಿಳೆಯರ ಆರೋಗ್ಯವನ್ನು ಗಂಭೀರವಾಗಿ ಪರಿಗಣಿಸಿರುವ ಸರಕಾರ ಮಹಿಳೆಯರು ಮುಟ್ಟಿನ ಸಮಯದಲ್ಲಿ ಬಳಸುವ ಸ್ಯಾನಿಟರಿ ಪ್ಯಾಡ್‌ಗಳನ್ನು ಜನೌಷಧಿ ಕೇಂದ್ರಗಳಲ್ಲಿ ಒಂದು ರೂ.ಗೆ ಮಾರಾಟ ಮಾಡಲು ನಿರ್ಧರಿಸಿದೆ. ಸದ್ಯ ಈ ಪ್ಯಾಡ್‌ಗಳ ಬೆಲೆ ಒಂದಕ್ಕೆ 2.50ರೂ. ಇದೆ. ಸುವಿಧ ಹೆಸರಿನ ಸ್ಯಾನಿಟರಿ ಪ್ಯಾಡ್‌ಗಳು ಆಗಸ್ಟ್ 27ರಿಂದ ದೇಶಾದ್ಯಂತವಿರುವ 5,500 ಜನೌಷಧಿಗಳಲ್ಲಿ ಒಂದು ರೂ.ಗೆ ಲಭ್ಯವಾಗಲಿದೆ ಇದೆಲ್ಲವೂ ನಮ್ಮ ಪ್ರಧಾನಿಗೆ ಮಹಿಳೆಯರ ಮೇಲಿನ ಅಕ್ಕರೆ ಹಾಗೂ ಗೌರವದ ಬಗ್ಗೆ ಎರಡು ಮಾತಿಲ್ಲ. ಈ ಸ್ಯಾನಿಟರಿ ಪ್ಯಾಡ್ ಮಾತ್ರವಲ್ಲ ಗ್ರಾಮೀಣ ಮಹಿಳೆಯರಿಗೆ ಉಚಿತ ಗ್ಯಾಸ್ ಕನೆಕ್ಷನ್, ಉಜ್ವಲಾ ಯೋಜನೆ ನೀಡಿದ್ದು ಮಣ್ಣಿನಲ್ಲಿ ಕರಗಬಲ್ಲ ‘ಸುವಿಧಾ’ ನ್ಯಾಪ್‌ಕಿನ್‌ಗಳನ್ನು ಇಳಿಸಿದ ದರದಲ್ಲಿ ನೀಡಲಾಗುವುದು ಎಂದು ರಾಸಾಯನಿಕ ಮತ್ತು ಗೊಬ್ಬರ ಸಹಾಯಕ ಸಚಿವ ಮನ್ಸುಖ್ ಮಾಂಡವಿಯ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಈ ಹಿಂದೆ 4 ಸ್ಯಾನಿಟರಿ ಪ್ಯಾಡ್‍ಗಳುಳ್ಳ ಪ್ಯಾಕಿಗೆ 10 ರೂ. ಇತ್ತು. ಆದರೆ ಇಂದಿನಿಂದ ಅದೇ ಪ್ಯಾಡ್‍ಗಳ ಬೆಲೆ 4 ರೂ.ಗೆ ಇಳಿದಿದೆ. ಹೀಗೆ ದರದಲ್ಲಿ 60% ಕಡಿತ ಮಾಡುವ ಮೂಲಕ ಮೋದಿ ನೇತೃತ್ವದ ಸರ್ಕಾರವು 2019ರ ಚುನಾವಣೆ ವೇಳೆ ನೀಡಿದ್ದ ಭರವಸೆಯನ್ನು ಈಡೇರಿಸಿದೆ ಎಂದು ಸಚಿವರು ತಿಳಿಸಿದರು. ಸದ್ಯ ತಯಾರಕರು ಉತ್ಪಾದನಾ ವೆಚ್ಚ ಎಷ್ಟಾಗುತ್ತದೋ ಅದೇ ಬೆಲೆಯಲ್ಲಿ ಸ್ಯಾನಿಟರಿ ಪ್ಯಾಡ್‍ಗಳನ್ನು ಪೂರೈಕೆ ಮಾಡುತ್ತಿದ್ದಾರೆ. ಆದರೆ ನಾವು ಅದಕ್ಕೆ ಸಬ್ಸಿಡಿ ನೀಡಿ ಅದರ ಮಾರಾಟ ದರವನ್ನು ಕಡಿಮೆಗೊಳಿಸಿದ್ದೇವೆ. ಮಾರಾಟದ ಪ್ರಮಾಣದ ಮೇಲೆ ಸಬ್ಸಿಡಿಯ ವಾರ್ಷಿಕ ವೆಚ್ಚ ಅವಲಂಭಿಸಿದೆ ಎಂದರು.

ಸುವಿಧಾ ನ್ಯಾಪ್‌ಕಿನ್ಸ್‌ ಯೋಜನೆಯನ್ನು 2018ರ ಮಾರ್ಚ್‌ನಲ್ಲಿ ಘೋಷಿಸಲಾಗಿತ್ತು. ಅನಂತಕುಮಾರ್‌ ಅವರು ರಾಸಾಯನಿಕ ಮತತು ರಸಗೊಬ್ಬರ ಸಚಿವರಾಗಿದ್ದಾಗ ಘೋಷಿಸಿದ್ದ ಯೋಜನೆ ಇದು. ಅದೇ ವರ್ಷದ ಮೇ ತಿಂಗಳಿನಿಂದ ಅದು ಜನೌಷಧ ಕೇಂದ್ರಗಳಲ್ಲಿ ಲಭ್ಯವಾಗಿತ್ತು. ಅದರಂತೆ ಕಳೆದ 1 ವರ್ಷದ ಅವಧಿಯಲ್ಲಿ ಸುಮಾರು 5,500 ಜನೌಷಧ ಕೇಂದ್ರಗಳಲ್ಲಿ 2.2 ಕೋಟಿ ನ್ಯಾಪ್‍ಕಿನ್‍ಗಳು ಮಾರಾಟವಾಗಿವೆ ಎಂದು ವರದಿಯಾಗಿದೆ. ಈಗ ದರ ಇಳಿಕೆ ಮಾಡಿರುವುದರಿಂದ ಸುವಿಧಾ ನ್ಯಾಪ್‍ಕಿನ್ಸ್ ಮಾರಾಟ ಪ್ರಮಾಣ ದ್ವಿಗುಣಗೊಳ್ಳುವ ನಿರೀಕ್ಷೆ ಇದೆ ಎಂದು ಮನ್‍ಸುಖ್ ಮಾಂಡವೀಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Also read: ಇನ್ಮುಂದೆ ಮಾತ್ರೆ ಕೊಂಡುಕೊಳ್ಳಲು ಮೆಡಿಕಲ್ ಶಾಪ್-ಗೆ ಹೋಗೋ ಬದಲು ಜನಔಷಧಿ ಕೇಂದ್ರಕ್ಕೆ ಹೋಗಿ, ನೂರಾರು ರುಪಾಯಿ ಇರುವ ಔಷಧಿ ಹತ್ತು ರೂಪಾಯಿಯೊಳಗೆ ಸಿಗುತ್ತೆ!!