ಸರ್ವ ಕಷ್ಟ ಪರಿಹಾರಾರ್ಥ – ಅಂಗಾರಕ ಸಂಕಷ್ಟ ಹರ ಚತುರ್ದಶಿ ವ್ರತ ಪೂಜಾ ವಿಧಾನ

0
9322

ಪುರಾಣ ಕಾಲದಿಂದಲೂ ಎಲ್ಲ ಶುಭ ಸಮಾರಂಭಗಳಲ್ಲೂ ವಿಜ್ಞೇಶ್ವರನಿಗೆ ಪ್ರಥಮ ಆದ್ಯತೆ. ವಿವಿಧ ಹಿಂದೂ ಮತ, ಪಂಗಡದವರು ಭಕ್ತಿಯಿಂದ ಪೂಜಿಸುವ ದೇವ ಗಣಪ. ಅದರಲ್ಲೂ ಮಾಘ ಮಾಸದ ಕೃಷ್ಣ ಪಕ್ಷದ ೪ ದಿನವು  ವಿನಾಯಕನ ಪೂಜೆಗೆ ಸರ್ವ ಶ್ರೇಷ್ಠ. ಹೆಸರೇ ಹೇಳುವಂತೆ ಈ ವ್ರತ ಮಾಡಿದರೆ ಎಲ್ಲ ಕಷ್ಟಗಳು ಪರಿಹಾರವಾಗಿ ಮಹಾಗಣಪತಿಯ ಅನುಗ್ರಹ ಪ್ರಾಪ್ತವಾಗುತ್ತದೆ.

Image result

 

 ಪುರಾಣ ಹಿನ್ನಲೆ:

ಭೂದೇವಿ ಹಾಗು ಭಾರದ್ವಾಜ ಮುನಿಗಳ ಮಗನಾದ ಅಂಗಾರಕ ಮಹರ್ಷಿಯು ಶ್ರೀವಿನಾಯಕನ ಪರಮ ಭಕ್ತನಾಗಿರುತ್ತಾರೆ. ಅವರು  ಮಹಾಗಣಪತಿಯ ಕುರಿತು ತಪಸ್ಸು ಮಾಡಲಾಗಿ  ಭಕ್ತಿಗೆ ಮೆಚ್ಚಿ ಮಹಾಗಣಪತಿಯು ಮಾಘ ಮಾಸದ ಕೃಷ್ಣ ಚತುರ್ಥಿಯಂದು ಆವರಿಗೆ ಪ್ರತ್ಯಕ್ಷನಾಗುತ್ತಾನೆ. ವರವನ್ನು ಕೇಳು ಎಂದು ಸ್ವಾಮಿಯು ಹೇಳಿದಾಗ ಮಹರ್ಷಿಯು ನಿನ್ನ ಹೆಸರಿನ ಜೊತೆ ನನ್ನ ಹೆಸರು ಸೇರಬೇಕೆಂದು ಬೇಡಿಕೊಳ್ಳಲು, ವಿನಾಯಕನು  ಮಹರ್ಷಿಯನ್ನು ಕುರಿತು ” ನಿನಗೆ ನಾನು ದರ್ಶನವಿತ್ತ ಈ ದಿನವನ್ನು ಅಂಗಾರಕ ಸಂಕಷ್ಟ ಹರ ಚತುರ್ಥಿಯಾಗಿ ಆಚರಿಸಬೇಕು” ಎಂದು ಆಶೀರ್ವದಿಸುತ್ತಾನೆ. ಅಂದಿನಿಂದ ಮಾಘ ಕೃಷ್ಣ ಚತುರ್ಥಿಯು ಅಂಗಾರಕ ಸಂಕಷ್ಟ ಚತುರ್ಥಿ ರೂಪದಲ್ಲಿ ಆಚರಣೆಯಲ್ಲಿದೆ.

Image result

 

ಪೂಜಾ ವಿಧಾನ:

ಈ ವ್ರತ ಮಾಡಲಿಚ್ಛಿಸುವವರು ಪ್ರಾತಃ ಕಾಲವೆದ್ದು ಬಿಳಿ ಎಳ್ಳನ್ನು ಮೈಗೆ ಲೇಪಿಸಿಕೊಂಡು ತಲೆ ಸ್ನಾನವನ್ನು ಮಾಡಬೇಕು. ನಂತರ ಗಣಪತಿಯನ್ನು ಪೂರ್ವ ದಿಕ್ಕು ಅಥವಾ ಉತ್ತರ ದಿಕ್ಕಿಗೆ ಮುಖ ಮಾಡಿ ಪ್ರತಿಷ್ಠಾಪಿಸಿ, ಶಕ್ತ್ಯಾನುಸಾರ ಸಂಕಲ್ಪವನ್ನು ಮಾಡಿಕೊಂಡು ,  ಕೆಂಪು ಹೂವು, ದೂರ್ವೆಗಳಿಂದ ಪೂಜಿಸಬೇಕು. ನಂತರ ಎಳ್ಳಿನಿಂದ ಮಾಡಿದ ಕಡುಬು, ಪಂಚಗಜ್ಜಾಯವನ್ನು ನೈವೇದ್ಯ ಮಾಡಬೇಕು. ಬೆಳಿಗ್ಗೆ ಇಂದ ಉಪವಾಸವಿದ್ದು ಚಂದ್ರೋದಯದ ನಂತರ ಚಂದ್ರ ದರ್ಶನ ಮಾಡಿ ಮನೆಯವರೊಂದಿಗೆ ಕುಳಿತು ಊಟ ಮಾಡಬೇಕು. ಮಹಾಗಣೇಶನ ಅಷ್ಟೋತ್ತರ, ಸಹಸ್ರನಾಮಗಳನ್ನು ಪಠಿಸಿ ವಿನಾಯಕನ ದರ್ಶನ ಮಾಡಬೇಕು.

ಪೂಜಾ ಫಲ:

ಪುರಾಣದಲ್ಲಿ ಈ ವ್ರತವನ್ನು ಮಾಡಿ ಧರ್ಮರಾಯನು ಕಳೆದುಕೊಂಡಿದ್ದ ರಾಜ್ಯವನ್ನು ಮತ್ತೆ ಪಡೆದನೆಂಬ ಉಲ್ಲೇಖವಿದೆ. ಯಾರು ಈ ವ್ರತವನ್ನು ೫/೯/೧೧ ತಿಂಗಳು ಅಥವಾ ವರ್ಷ ಮಾಡುತ್ತಾರೋ ಅವರು ಶ್ರೀ ಮಹಾಗಣಪತಿಯ ಅನುಗ್ರಹದಿಂದ ತಮ್ಮೆಲ್ಲ ಕಷ್ಟ ಕಾರ್ಪಣ್ಯಗಳಿಂದ ಹೊರಬಂದು ಆಯು ಅರೋಗ್ಯ ಮತ್ತು ಐಶ್ವರ್ಯವಂತ ಜೀವನವನ್ನು ನಡೆಸುತ್ತಾರೆ.

 

                                    ——-ಸರ್ವೇ ಜನಃ ಸುಖಿನೋ ಭವಂತು———-