ಗ್ರೂಪ್ ‘ಸಿ’ ಮತ್ತು ಗ್ರೂಪ್ ‘ಡಿ’ ಕನ್ನಡ ಉದ್ಯೋಗಾಂಕ್ಷಿಗಳಿಗೆ ಅನಿಲ್ ‘ಲಾಡು’: ಶೇಕಡಾ 70 % ರಷ್ಟು ಮೀಸಲು!!

0
1027

ಗ್ರೂಪ್ ‘ಸಿ’ ಮತ್ತು ಗ್ರೂಪ್ ‘ಸಿ’ ಕನ್ನಡ ಉದ್ಯೋಗಾಂಕ್ಷಿಗಳಿಗೆ ಅನಿಲ್ ‘ಲಾಡು’: ಗ್ರೂಪ್ ‘ಸಿ’, ಗ್ರೂಪ್ ‘ಡಿ’ ಹುದ್ದೆಗಳಿಗೆ ಶೇಕಡಾ ೭೦ % ರಷ್ಟು ಮೀಸಲು.

2017 ರ ಬಜೆಟ್ ಅಧಿವೇಶನದಲ್ಲಿ ಎರಡು ವಿಧೇಯಕಗಳನ್ನು ಮಂಡಿಸುವ ಮೂಲಕ (ಖಾಸಗಿ ವಲಯ ಮತ್ತು ಐ.ಟಿ./ಬಿ.ಟಿ. ವಲಯಕ್ಕೆ ಪ್ರತ್ಯೇಕವಾಗಿ) ರಾಜ್ಯ ಸರ್ಕಾರ ಕನ್ನಡಿಗರ ಬಹು ದಿನಗಳ ಬೇಡಿಕೆಗೆ ಸ್ಪಂದಿಸಿದ್ದಾರೆ.

ಐ.ಟಿ./ಬಿ.ಟಿ ಕ್ಷೇತ್ರದಲ್ಲಿ ಗ್ರೂಪ್ ‘ಸಿ’ ಮತ್ತು ಗ್ರೂಪ್ ‘ಡಿ’ ದರ್ಜೆಯಲ್ಲಿ ಮೀಸಲು ಕಲ್ಪಿಸುವ ಸರೋಜಿನಿ ಮಹಿಷಿ ವರದಿಯ ಅನುಷ್ಠಾನ ಶೀಘ್ರದಲ್ಲೇ ಆಗುವುದೆಂದು ಕಾರ್ಮಿಕ ಸಚಿವ ಅನಿಲ್ ಲಾಡ್ ತಿಳಿಸಿದ್ದಾರೆ.

ಈ ಕುರಿತಾದ ನಿರ್ಧಾರವನ್ನು 2017 ರ ಬಜೆಟ್ ವೇಳೆ ಮಂಡನೆ ಮಾಡಿ; ಉಭಯ ಸದನಗಳಲ್ಲಿ ಚರ್ಚಿಸಿ, ಅನುಮೋದಿಸಲಾಗುವುದೆಂದು ಕಾರ್ಮಿಕ ಸಚಿವಾಲಯದ ಉನ್ನತ ಮೂಲಗಳು ತಿಳಿಸಿವೆ.

ಸದರಿ ವಿಧೇಯಕವು, ಕೆಲವು ತಿದ್ದುಪಡಿಯೊಂದಿಗೆ ದಿವಂಗತ. ಸರೋಜಿನಿ ಮಹಿಷಿ ವರದಿಯಲ್ಲಿ ಪ್ರಸ್ತಾಪಿಸಿದ ಸಲಹೆ ಸೂಚನೆಗಳನ್ನು ಒಳಗೊಂಡಿರುತ್ತದೆ.

ಏನಿದೆ ವಿಧೇಯಕದಲ್ಲಿ?

  • ಐ.ಟಿ./ಬಿ.ಟಿ. ಕಂಪೆನಿಗಳಲ್ಲಿ ಗ್ರೂಪ್ ‘ಎ’ ಮತ್ತು ಗ್ರೂಪ್ ‘ಬಿ’ ಕ್ಲಾಸ್ ನೌಕರರಿಗೆ ಯಾವುದೇ ಮೀಸಲಿಲ್ಲ. (ತಾಂತ್ರಿಕ ಮತ್ತು ವೈಟ್ ಕಾಲರ್)
  • ಆದರೆ, ಖಾಸಗಿ ವಲಯದಲ್ಲಿ ಗ್ರೂಪ್ ‘ಎ’ ಮತ್ತು ಗ್ರೂಪ್ ‘ಬಿ’ ನೇಮಕಾತಿಯಲ್ಲಿ ಮೀಸಲು ಇರುವುದು.
  • ಗ್ರೂಪ್ ‘ಸಿ’ ಮತ್ತು ಗ್ರೂಪ್ ‘ಡಿ’ (ಖಾಸಗಿ ವಲಯ) ದಲ್ಲಿ ಶೇಕಡಾ 70 % ಅಷ್ಟು ಮೀಸಲು ಕೊಡಲಾಗುವುದು. (ಈ ಮೀಸಲು ಐ.ಟಿ./ಬಿ.ಟಿ. ಮತ್ತು ಖಾಸಗಿ ವಲಯ [ಪ್ರೈವೇಟ್ ಸೆಕ್ಟರ್] ಗೆ ಅನ್ವಯಿಸುತ್ತದೆ.

ಈಗಿನ ವಿಧೇಯಕದಲ್ಲಿ ಹಲವು ಸುಧಾರಣೆಗಳನ್ನು ತಂದು ಅದನ್ನು ಉಭಯ ಸದನಗಳಲ್ಲಿ ಮಂಡಿಸಲಾಗುವುದು ಎಂದು ಹೇಳಲಾಗಿದೆ. ಸದರಿ ವಿಧೇಯಕವು, ಕಳೆದ ವಾರ ನಡೆದ ಬೆಳಗಾವಿ ಅಧಿವೇಶನದಲ್ಲಿ ಚರ್ಚೆಗೆ ಬರಬೇಕಾಗಿತ್ತು; ಆದರೆ ಕೆಲ ತಾಂತ್ರಿಕ ಕಾರಣದಿಂದಾಗಿ ಚರ್ಚೆಗೆ ಅವಕಾಶ ನೀಡಲಾಗಲಿಲ್ಲ ಎಂದು ಹೇಳಲಾಗಿದೆ.

ಮಹಿಷಿ ವರದಿಯನ್ನು ಅನುಷ್ಠಾನಗೊಳಿಸಬೇಕಾದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದೆ.

ಹಲವು ವರ್ಷಗಳಿಂದ ಚರ್ಚೆಗಷ್ಟೇ ಗ್ರಾಸವಾಗಿದ್ದ ಸರೋಜಿನಿ ಮಹಿಷಿ ವರದಿಗೆ ಈಗ ಅನುಷ್ಠಾನ ಆಗುತ್ತಿರುವುದನ್ನು ಕನ್ನಡ ಪರ ಸಂಘಟನೆಗಳು ಸ್ವಾಗತಿಸಿವೆ. ರೈಲ್ವೆ/ ಸಾರ್ವಜನಿಕ ಕ್ಷೇತ್ರ/ ಖಾಸಗಿ ಕ್ಷೇತ್ರದಲ್ಲಿ ಪರಭಾಷಿಕರ ಪ್ರಾಬಲ್ಯವನ್ನು ‘ಹೆಡೆಮುರಿಕಟ್ಟಲು’; ಅಂದಿನ ಮುಖ್ಯ ಮಂತ್ರಿಗಳಾದ ಶ್ರೀ ರಾಮಕೃಷ್ಣ ಹೆಗ್ಡೆ ಯವರು ಕಾನೂನು ತಜ್ಞೆ ಸರೋಜಿನಿ ಮಹಿಷಿ ಯವರಿಗೆ ಕನ್ನಡಿಗರಿಗೆ ಉದ್ಯೋಗ ಕ್ಷೇತ್ರದಲ್ಲಾಗುತ್ತಿರುವ ಅನ್ಯಾಯದ ಬಗ್ಗೆ ವರದಿ ನೀಡಲು ಸೂಚಿಸಿದ್ದರು. ಅದರಂತೆ, ವರದಿಯನ್ನು ಮಹಿಷಿ ಯವರು ಸರ್ಕಾರಕ್ಕೆ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.