ಸರ್ಪ ದೋಷ ಪರಿಹಾರ ಆಗಲಿಲ್ಲ ಅಂದ್ರೆ ಜೀವನದಲ್ಲಿ ನಾನಾ ಸಂಕಷ್ಟಗಳನ್ನು ಎದುರಿಸಬೇಕಾಗುತ್ತೆ, ಈ ಪೂಜಾ ಅನುಸಾರಗಳನ್ನು ತಪ್ಪದೇ ಪಾಲಿಸಿ!!

0
3766

ಹಿಂದೂ ನಂಬಿಕೆಯ ಪ್ರಕಾರ, ನಾಗ ದೋಷವೆನ್ನುವುದು ಮಾನವನ ಜೀವನದಲ್ಲಿ ಅತಿ ಪ್ರಮುಖ ಪಾತ್ರವಹಿಸುತ್ತದೆ. ದೋಷವಿದ್ದಾಗ ಪ್ರತಿಭೆ, ಅನುಕೂಲತೆಗಳು, ಶ್ರೀಮಂತಿಕೆ ಏನೇ ಇದ್ದರೂ ಸಹಿಸಲಾಗದಂತಹ ಕಷ್ಟಗಳು ಜೀವನದಲ್ಲಿ ಬಂದೊದಗುತ್ತವೆ ಎಂದು ಹೇಳಲಾಗಿದೆ. ಒಟ್ಟಾರೆಯಾಗಿ ನಾಗ ದೋಷ ಎನ್ನುವುದು ಕಷ್ಟಕರ ಬದುಕಿನ ಸಂಕೇತವಾಗಿದೆ ಎಂದು ನಂಬಲಾಗಿದೆ. ಜಾತಕದಲ್ಲಿ ನಾಗದೋಷಗಳು ಇದ್ದರೆ ಆ ವ್ಯಕ್ತಿಯ ಮನಸ್ಸು ಸ್ಥಿರವಾಗಿರುವುದಿಲ್ಲ ಅನೇಕ ಸಮಸ್ಸೆಗಳನ್ನು ಎದುರಿಸುತ್ತಿರುತ್ತಾರೆ ಮುಖ್ಯವಾಗಿ ವಿವಾಹ ವಿಚಾರದಲ್ಲಿ, ಸಂತಾನವಿಚಾರದಲ್ಲಿ ಬಹಳ ನೋವುಗಳಾಗಿ ಮಾನಸಿಕವಾಗಿ ತುಂಬಾ ಕುಗ್ಗಿರುತ್ತಾರೆ. ಹೀಗೆ ಅನೇಕ ತೊಂದರೆಗಳು ಅವರ ಜೀವನದಲ್ಲಿ ಎದುರಿಸುತ್ತಾರೆ. ಈ ಕೆಳಗೆ ನಾಗ ದೋಷಕ್ಕೆ ಕೆಲವು ಕಾರಣಗಳನ್ನು ತಿಳಿಸಲಾಗಿದೆ.

Also read: ಕಾಲ ಸರ್ಪ ದೋಷ ನಿಮ್ಮನ್ನು ಕಾಡುತ್ತಿದೆಯೇ? ಈ ಪೂಜಾ ವಿಧಾನ ಪಾಲಿಸಿ ಕಾಲಸರ್ಪ ದೋಷದಿಂದ ನಿವಾರಣೆ ಹೊಂದಿ…!!

ಜಾತಕದಲ್ಲಿ ಚಂದ್ರನಿಂದ ರಾಹುಗ್ರಹವು 8ನೇ ಮನೆಯಲ್ಲಿ ಇದ್ದರೆ ನಾಗದೋಷ. ಕುಜಗ್ರಹಕ್ಕೆ ರಾಹುವಿನ ದೃಷ್ಠಿ ಇದ್ದು 5ನೇ ಮನೆಯಲ್ಲಿ ಕುಜಗ್ರಹವಿದ್ದರೆ ದೋಷವಿರುತ್ತದೆ. ಲಗ್ನದಲ್ಲಿ ರಾಹುವಿದ್ದು ಯಾವುದೇ ಶುಭ ಗ್ರಹಗಳ ದೃಷ್ಠಿ ಲಗ್ನದ ಮೇಲೆ ಇಲ್ಲದಿದ್ದರೆ ನಾಗ ದೋಷ. ಪಂಚಮ ಸ್ಥಾನದಲ್ಲಿ ರವಿ, ಕುಜ, ಶನಿ, ರಾಹು, ಬುಧ, ಗುರು ಇದ್ದು ಪಂಚಮಾಧಿಪತಿ ಮತ್ತು ಲಗ್ನಾಧಿಪತಿ ಬಲಹೀನರಾಗಿದ್ದರೆ ದೋಷವಿರುತ್ತದೆ. ರಾಹುವಿನಿಂದ 8ನೇ ಮನೆಯಲ್ಲಿ ರವಿ ಇದ್ದರೆ ನಾಗದೋಷ.

ಚಂದ್ರನ ಜೊತೆ ರಾಹು ಇದ್ದರೆ ಅಥವಾ ದೃಷ್ಠಿಸಿದರೆ ನಾಗ ದೋಷವಿರುತ್ತದೆ. ಸಂತಾನಕಾರಕನಾದ ಗುರುವಿನೊಂದಿಗೆ ರಾಹು ಇದ್ದರೆ ನಾಗದೋಷದಿಂದ ಸಂತಾನಕ್ಕೆ ತೊಂದರೆಯಾಗುತ್ತದೆ. ಕುಜನೊಂದಿಗೆ ರಾಹು ಇದ್ದರೆ ಅಥವಾ ದೃಷ್ಠಿಸಿದರೆ ಈ ನಾಗದೋಷ ವಿವಾಹಕ್ಕೆ ತೊಂದರೆಗಳಾಗುತ್ತದೆ. ಮೇಷ ಮತ್ತು ವೃಶ್ಚಿಕ ರಾಶಿಯಲ್ಲಿ ರಾಹು ಇದ್ದರೆ ನಾಗದೋಷವಿರುತ್ತದೆ.

Also read: ಸರ್ಪದೋಷ ನಿವಾರಣೆಗೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ಕೊಡಿ

ನಾಗದೋಷ ಪರಿಹಾರ ಸ್ಥಳಗಳು:

ಕುಕ್ಕೆ ಸುಬ್ರಮಣ್ಯ ದೇವಾಲಯ, ಕುಡುಪು ಅನಂತಪದ್ಮನಾಭ ದೇವಾಲಯ (ದಕ್ಷಿಣಕನ್ನಡ ಜಿಲ್ಲೆ), ಘಾಟಿ ಸುಬ್ರಮಣ್ಯ ದೇವಾಲಯ, ಮುಚ್ಚಿಲಕೋಡು ಸುಬ್ರಮಣ್ಯ ದೇವಾಲಯ (ಉಡುಪಿ ಜಿಲ್ಲೆ), ಖಡ್ಗೆಶ್ವರಿ ಮೂಲ (ಉಡುಪಿ ಜಿಲ್ಲೆ, ಪಡುಬಿದ್ರೆ ಬಲಿ, ಧಕ್ಕೆದಬಲಿ ಎಂದು ಜನಪ್ರಿಯ), ಹಾದಿಗಲ್ಲು (ಶಿವಮೊಗ್ಗ ಜಿಲ್ಲೆ) ಬೆಂಗಳೂರು ಸಜ್ಜನರಾವ್ ವೃತ್ತದ ಸುಬ್ರಮಣ್ಯ ಸ್ವಾಮಿ ದೇವಾಲಯ, ಹನುಮಂತನಗರದ ಕುಮಾರಸ್ವಾಮಿ ದೇವಾಲಾಯ ಇತ್ಯಾದಿ..

Also read: ಬಯಲುಸೀಮೆಯ ಕುಕ್ಕೆ ಸುಬ್ರಮಣ್ಯವೆಂದೇ ಖ್ಯಾತಿ ಪಡೆದಿರುವ ಶ್ರೀ ಘಾಟಿ ಸುಬ್ರಮಣ್ಯ ಸ್ವಾಮಿ ದೇಗುಲದಲ್ಲಿ ನೀವು ಎಂದೂ ಊಹಿಸಲಾಗದ ರಹಸ್ಯಗಳಿವೆ. ತಪ್ಪದೆ ಒಮ್ಮೆ ಭೇಟಿ ಕೊಡಿ..!!

ಅದರಲ್ಲೂ ಕುಕ್ಕೆ ಸುಬ್ರಹ್ಮಣ್ಯ ನಾಗಗಳ ವಾಸಸ್ಥಾನವಾಗಿದೆ. ಇಲ್ಲಿ ಶ್ರೀ ಸುಬ್ರಹ್ಮಣ್ಯನಿಗೆ ಸಲ್ಲಿಸಿದ ಪೂಜೆಯು ಸರ್ಪರಾಜನಾದ ವಾಸುಕಿಗೆ ಸಲ್ಲುವುದು. ಹಾಗಾಗಿ ಈ ಸ್ಥಳವು ಎಲ್ಲಾ ತರಹದ ನಾಗದೋಷಗಳ ಪರಿಹಾರ ಸ್ಥಳವಾಗಿ ನಂಬಲಾಗಿದೆ. ದೇಶದ ಮೂಲೆ ಮೂಲೆಗಳಿಂದ ಸರ್ಪಸಂಸ್ಕಾರ, ನಾಗಪ್ರತಿಷ್ಠೆ, ಆಶ್ಲೇಷಬಲಿ ಹಾಗೂ ಇತರ ಪೂಜಾದಿಗಳನ್ನು ಸಲ್ಲಿಸಲು ಭಕ್ತಾದಿಗಳು ಬರುತ್ತಿರುತ್ತಾರೆ. ಸರ್ಪದೋಷ ಪೀಡಿತರಾಗಿ ಔಷಧಗಳಿಂದ ಶಮನವಾಗದಂತಹ ರೋಗಗಳಿಂದ ನರಳುವವರು ಹಾಗೂ ಸಂತಾನವಿಲ್ಲದೆ ಇರುವವರು ಶ್ರೀ ಸುಬ್ರಹ್ಮಣ್ಯನ ಸನ್ನಿಧಿಯಲ್ಲಿ ಸೇವಾ ಕೈಂಕರ್ಯಗಳನ್ನು ನೆರವೇರಿಸಿ ಸಕಲಾಭೀಷ್ಠ ಸಿದ್ಧಿಯನ್ನು ಹೊಂದುತ್ತಿರುವುದು ಪ್ರಸಿದ್ಧವಾಗಿದೆ.