ಬಾಹ್ಯಾಕಾಶ ನಿಲ್ದಾಣದಲ್ಲಿ ಗಗನಯಾತ್ರಿಗಳ ವಾಸ ಹೇಗಿರುತ್ತದೆ…?

0
590

ರಷ್ಯಾದ ಬೈಕನೂರು ಉಡಾವಣಾ ನೆಲೆಯಿಂದ ಮೂವರು ಗಗಯಾತ್ರಿಗಳನ್ನು ಹೊತ್ತೊಯ್ದು ಸೂಯಜ್ ಗಗನೌಕೆ ಗುರುವಾರ ಯಶಸ್ವಿಯಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ(ಐಎಸ್ ಎಸ್) ಪಯಣ ಬೆಳಿಸಿತು ಏನಿದು ಐಎಸ್ ಎಸ್ ತಿಳಿದುಕೊಳ್ಳೋಣ.

ಏನಿದು ಐಎಸ್ ಎಸ್:

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಎಂಬುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿಪಡಿಸಲಾದ ಸಂಶೋಧನಾ ಸೌಲಭ್ಯವಾಗಿದೆ. ಇದನ್ನು ಪೃಥ್ವಿಯ ನಿಕಟವರ್ತಿ ಕಕ್ಷೆಯಲ್ಲಿ 15 ದೇಶಗಳ ಐದು ವಿವಿಧ  ಬಾಹ್ಯಾಕಾಶ ಸಂಸ್ಥೆಗಳು ಒಟ್ಟಿಗೆ ಸೇರಿ ನಿರ್ಮಿಸಿವೆ. 100 ಶತಕೋಟಿ ಡಾಲರ್ ವೆಚ್ಚದ ಐಎಸ್’ಎಸ್ ಅನ್ನು ಬಿಡಿಬಿಡಿಯಾಗಿ ತಂದು ಬಾಹ್ಯಾಕಾಶದಲ್ಲಿ ಜೋಡಿಸಲಾಗಿದೆ. ಐಎಸ್’ಸ್ 1998 ರಿಂದ ಕಾರ್ಯಾರಂಭ ಮಾಡಿದ್ದು, 2000 ಇಸವಿಯ ನವೆಂಬರ್ 2ರಿಂದ ನಿರಂತರವಾಗಿ ಕಾರ್ಯನಿರತವಾಗಿದೆ.

ಹೇಗಿದೆ ಅಂತರಿಕ್ಷ:

ನಿಲ್ದಾಣವು ಅಮೆರಿಕದಲ್ಲಿ ಫುಟ್ಬಾಲ್ ಮೈದಾನಷ್ಟಿದೆ. 391 ಸಾವಿರ ಕೆ.ಜಿ ತೂಕವನ್ನು ಹೊಂದಿರುವ ಐಎಸ್’ಎಸ್ ಭೂಮಿಯಿಂದ ಸರಾಸರಿ 248 ಮೈಲಿ ಎತ್ತರದಲ್ಲಿದೆ. ಇದು ಭೂಮಿಯನ್ನು ಗಂಟೆಗಳ 28 ಸಾವಿರ ಕಿ.ಮೀಟರ್ ವೇಗದಲ್ಲಿ ಪ್ರತಿ 90 ನಿಮಿಷಕೊಮ್ಮೆ ಸುತ್ತುತ್ತದೆ. ಐದು ಮಲಗುವ ಕೊಠಡಿಗಳು, ಎರಡು ಬಾತ್ ರೂಮ್, ಜಿಮ್, 360 ಡಿಗ್ರಿಯಲ್ಲಿ ಭೂಮಿಯತ್ತ ಮುಖ ಮಾಡಿರುವ ಕಿಟಗಳನ್ನು ಹೊಂದಿವೆ. ಗಗನಯಾತ್ರಿಗಳು ಬಾಹ್ಯಾಕಾಶ ನಿಲ್ದಾಣ ವಾಸಯೋಗ್ಯ ಪ್ರದೇಶವನ್ನು ಬೋಯಿಂಗ್ 747 ಜಂಬೋ ಜೆಟ್ ವಿಮಾನಕ್ಕೆ ಹೋಲಿಸಿದ್ದಾರೆ.

ಬರಿಗಣ್ಣಿನಿಂದ ವೀಕ್ಷಣೆ:

ಐಎಸ್’ಎಸ್’ಗೆ ಜೋಡಿಸಲಾಗಿರುವ ಸೌರಫಲಕಗಳ ಪ್ರತಿಫಲಿತದಿಂದಾಗಿ ವೀಕ್ಷಕನು ಸೂಕ್ತ ಸಮಯದಲ್ಲಿ, ಸೂಕ್ತ ಸ್ಥಳದಲ್ಲಿದ್ದರೆ ನಿಲ್ದಾನವನ್ನು ಭೂಮಿಯಿಂದ ಬರಿಕಣ್ಣಿಗೆ ವೀಕ್ಷಿಸಬಹುದಾಗಿದೆ, ಆದರೂ ಇದನ್ನು ಎರಡರಿಂದ ಐದು ನಿಮಿಷಗಳ ಕಾಲಾವಧಿಯವರೆಗೆ ಮಾತ್ರ ನೋಡಬಹುದಾಗಿದೆ.

ಅಂತರಿಕ್ಷಯಾದಲ್ಲಿ ಆಹಾರ, ನಿದ್ದೆ:

ಬಾಹ್ಯಾಕಾಶ ನಿಲ್ದಾಣದ ಸಿಬ್ಬಂದಿ ಸೇವಿಸುವ ಬಹುಪಾಲು ಆಹಾರವನ್ನು ಶೀತ ವಾತಾವರಣದಲ್ಲಿ ಶೀತಕದಲ್ಲಿ (ರೆಫ್ರಿಜರೇಟರ್) ಅಥವಾ ಡಬ್ಬದಲ್ಲಿ ಹಾಕಿಟ್ಟು ಸಂರಕ್ಷಿಸಲಾಗುತ್ತದೆ. ಗಗನಯಾತ್ರಿಗಳು ಬಾಹ್ಯಾಕಾಶ ನಿಲ್ದಾಣದಕ್ಕೆ ಹೋಗುವ ಮುನ್ನ ಆಹಾರ ಶಾಸ್ತ್ರಜ್ಞರ ಸಹಾಯದೊಂದಿಗೆ ಸೇರಿ ಆಹಾರ ಸೂಚಿಯನ್ನು ತಯಾರಿಸುತ್ತಾರೆ. ಘನರೂಪದಲ್ಲಿರುವ ಆಹಾರವನ್ನು  ಚಾಕು ಮತ್ತು ಪೋರ್ಕ್’ನಿಂದ ತಿನ್ನಲಾಗುತ್ತದೆ. ಇವುಗಳು ತೇಲಿಹೊಗದಂತೆ ಆಯಸ್ಕಾಂತದೊಮದಿಗೆ ತಟ್ಟೆಯಲ್ಲಿ ಜೋಡಿಸಲಾಗುತ್ತದೆ. ನಿಲ್ದಾಣವು ಸ್ನಾನದ ವ್ಯವಸ್ಥೆಯನ್ನು ಒಳಗೊಂಡಿಲ್ಲ. ಬದಲಿಗೆ ವಾಟರ್ ಜೆಟ್, ವೆಟ್ ಪೈಟ್ ಮತ್ತು ಟೂತ್ ಪೇಸ್ಟ್ ಕೂಡ ಒದಗಿಸಲಾಗುತ್ತದೆ. ನಿಲ್ದಾಣದಲ್ಲಿ ಎರಡು ಸ್ಪೇಸ್ ಟಾಯ್ಲೆಟ್’ಗಳಿವೆ ಈ ಎರಡೂ ಶೌಚಾಲಯಗಳು ರಷ್ಯನ್ ವಿನ್ಯಾಸದಲ್ಲಿದೆ. ಶೌಚವನ್ನು ಪ್ರತ್ಯೇಕವಾಗಿ ಸಂಗ್ರಹಿಸಿಡುವ ವ್ಯವಸ್ಥೆ ಇದೆ.