“ಡೋಂಟ್ ಯೂಸ್ ಯುವರ್ ಡರ್ಟಿ ಕನ್ನಡ ವಿತ್ ಮಿ” ಎಂದ ಮ್ಯಾನೇಜರ್ ಅಂದರ್…!

0
578

ಹೌದು ಇವತ್ತಿನ ದಿನಗಲ್ಲಿ ಕರ್ನಾಟಕದಲ್ಲಿ ಕನ್ನಡದ ಬಗ್ಗೆ ಹೆಚ್ಚು ಕಾಳಜಿ ಇಲ್ಲದವರು ಮತ್ತು ಕನ್ನಡಕ್ಕೆ ಅಪಮಾನ ಮಾಡುವರ ಸಂಖ್ಯೆ ಹೆಚ್ಚಾಗಿದೆ.

ಆರ್ಡರ್ ಮಾಡಿದ್ದ ಊಟ ತಡವಾಗಿದ್ದಕ್ಕೆ ದೆಹಲಿ ಮೂಲದ ವ್ಯಕ್ತಿಯೊಬ್ಬ ಡೆಲಿವರಿ ಬಾಯ್‍ನನ್ನು ನಿಂದನೆ ಮಾಡಿದ್ದಲ್ಲದೆ ಡರ್ಟಿ ಕನ್ನಡ ಎಂದು ಅವಹೇಳನ ಮಾಡಿರೋ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ದೆಹಲಿ ಮೂಲದ ಸಾತ್ವಿಕ್ ಸಚ್ಚಾರ್ ಎಂಬಾತ ಕನ್ನಡ ಭಾಷೆಗೆ ನಿಂದನೆ ಮಾಡಿದ್ದಾನೆ. ಬೆಂಗಳೂರಿನ ಸಂಜಯನಗರದ ಪೋಸ್ಟಲ್ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಬೆಂಗಳೂರಿನಲ್ಲಿ ಸಾಫ್ಟವೇರ್ ಕಂಪನಿಯಲ್ಲಿ ಎಚ್‍ಆರ್ ಮ್ಯಾನೇಜರ್ ಆಗಿ ಕೆಲಸ ಮಾಡೋ ಸಾತ್ವಿಕ್, ಕೆಫೆ ರೆಸ್ಟೋರೆಂಟ್‍ನಲ್ಲಿ ಜೂ.18ರ ರಾತ್ರಿ ಆನ್‍ಲೈನಲ್ಲಿ ಚೈನೀಸ್ ಊಟ ಆರ್ಡರ್ ಮಾಡಿದ್ದ. ಡೆಲಿವರಿ ಬಾಯ್ ಆತನಿಗೆ ಊಟ ತಲುಪಿಸಿದ್ದು ಸ್ವಲ್ಪ ತಡವಾಗಿದೆ. ಈ ಹಿನ್ನೆಲೆಯಲ್ಲಿ ಡೆಲಿವರಿ ಬಾಯ್ ಅನಿಲ್‍ಗೆ ಸಾತ್ವಿಕ್ ಬೈದಿದ್ದಾನೆ.

 

ನಾನು ಹೋಟೆಲ್‍ನವರು ಕೊಟ್ಟ ಸಮಯಕ್ಕೆ ಸರಿಯಾಗಿ ತಂದಿದ್ದೇನೆ. ಕನ್ನಡದಲ್ಲಿ ಮಾತನಾಡಿ ಅಂತಾ ಅನಿಲ್ ಹೇಳಿದ್ದಾರೆ. ಇದರಿಂದ ಮತ್ತಷ್ಟು ಸಿಟ್ಟುಗೊಂಡ ಸಾತ್ವಿಕ್ “ಡೋಂಟ್ ಯೂಸ್ ಯುವರ್ ಡರ್ಟಿ ಕನ್ನಡ ವಿತ್ ಮಿ” ಎಂದು ನಿಂದನೆ ಮಾಡಿದ್ದಾನೆ.

ಹೀಗಾಗಿ ಅನಿಲ್ ಸಾತ್ವಿಕ್ ವಿರುದ್ಧ ಸಂಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಐಪಿಸಿ ಸೆಕ್ಷನ್ 153 ಎ, 504 ಅಡಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಸಾತ್ವಿಕ್‍ನನ್ನ ಬಂಧಿಸಿದ್ದಾರೆ. ಬಂಧನದ ನಂತರ ಠಾಣೆ ಬೇಲ್ ಮೇಲೆ ಸಾತ್ವಿಕ್‍ನನ್ನು ಬಿಡುಗಡೆ ಮಾಡಲಾಗಿದೆ.