ಸೌದಿ ಅರೆಬಿಯಾದಲ್ಲಿ ಬಿದ್ದ ಇಬ್ಬನಿಗೆ ಜಗತ್ತೇ ತತ್ತರ

0
1205

ಸೌದಿ ಅರೆಬಿಯಾ ಅಂದರೆ ಗೊತ್ತಲ್ಲ. ಅದೊಂದು ಮರುಭೂಮಿ. ಪೆಟ್ರೋಲ್, ಡಿಸೇಲ್ ಬಿಟ್ಟರೆ ಅಲ್ಲೇನೂ ಸಿಗೊಲ್ಲ. ತರಕಾರಿ ಇರಲಿ ಕುಡಿಯುವ ನೀರನ್ನೂ ಕೂಡ ಕೋಟಿಗಟ್ಟಲೆ ಖರ್ಚು ಮಾಡಿ ವಿದೇಶಗಳಿಂದ ಆಮದು ಮಾಡಿಕೊಳ್ಳುವ ದೇಶ. ಅಂತಹ ಮರಭೂಮಿಯಲ್ಲಿ ಮಳೆ ಬಿದ್ದರೆ ಮೂಗಿನ ಮೇಲೆ ಬೆರಳಿಡುವ ಪರಿಸ್ಥಿತಿ ಅಂತಹದ್ದರಲ್ಲಿ ಎರಡು ದಿನಗಳ ಹಿಂದೆ ಇಬ್ಬನಿ ಸುರಿದಿದ್ದು, ಇಡೀ ಜಗತ್ತಿನ ಗಮನ ಸೆಳೆಯುತ್ತಿದೆ. ಪರಿಸರವಾದಿಗಳ ತಂಡ ಅಧ್ಯಯನದಲ್ಲಿ ತೊಡಗಿದ್ದು, ಇದು ಆತಂಕ ಉಂಟುಮಾಡುವ ಬೆಳವಣಿಗೆ ಎಂದು ಮುನ್ಸೂಚನೆ ನೀಡಿದೆ.

123-1

ಹೌದು, ಸೌದಿ ಅರೆಬಿಯಾದಲ್ಲಿ ಇಬ್ಬನಿ ಸುರಿದಿದೆ. ಇದು ನಂಬಲಸಾಧ್ಯವಾದರೂ ಸತ್ಯ. ಹಾಗಂತ ಇದು ಕಪೋಲಕಲ್ಪಿತ ಚಿತ್ರವೂ ಅಲ್ಲ. ಅಲ್ಲಿನ ಚಿತ್ರಗಳನ್ನು ನೋಡಿದರೆ ಮರಭೂಮಿಯದ್ದಲ್ಲ, ಹಿಮಾಲಯ ಪರ್ವತದ ತಪ್ಪಲಲ್ಲಿ ತೆಗೆದಿರುವ ಚಿತ್ರ ಎಂದು ಭಾವಿಸುವಂತಿದೆ. ಸ್ಥಳೀಯರಂತೂ ಸ್ವಿಜರ್‌ಲೆಂಡ್‌ನಲ್ಲಿ ಇರುವವರಂತೆ ಎಂಜಾಯ್ ಮಾಡುತ್ತಿದ್ದರೆ, ಪರಿಸರವಾದಿಗಳು ಇಂತಹ ಅಪರೂಪದ ಘಟನೆಯಿಂದ ತಲ್ಲಣಿಸಿದ್ದು, ಹವಾಮಾನ ವೈಪರಿತ್ಯಗಳ ಕುರಿತು ಅಧ್ಯಯನಕ್ಕೆ ಮುಂದಾಗಿದ್ದಾರೆ.

123

ಸೌದಿ ಅರೆಬಿಯಾ ಇತಿಹಾಸದಲ್ಲೇ ಇದೇ ಮೊದಲ ಬಾರಿ ಈ ರೀತಿಯ ಇಬ್ಬನಿ ಬಿದ್ದಿದೆ.  ನಂಬಲು ಅಸಾಧ್ಯವಾದರೂ ಸತ್ಯ