ವಿಮಾನ ನಿಲ್ದಾಣದಲ್ಲಿ ಮರೆತು ಮಗುವನ್ನೇ ಬಿಟ್ಟು ವಿಮಾನ ಏರಿದ ಮಹಾ ತಾಯಿ..

0
567

ಜಗತ್ತಿನಲ್ಲಿ ಹಲವು ವಿಚಿತ್ರ ಘಟನೆಗಳು ನಗೆ ಪಾಟಿಕೆಗಳು ನಡೆದಿವೆ ನಡೆಯುತ್ತಾನೆ ಇವೆ. ಇವುಗಳು ವಿಶೇಷವಾಗಿ ಕಂಡು ಬರುವುದು ಹೆಚ್ಚು ಮರುವಿರುವರಲ್ಲಿ. ಇನ್ನೂ ಹೆಚ್ಚು ಆತುರವಿರುವ ಜನರಲ್ಲಿ ಈ ತರಹದ ಘಟನೆಗಳು ಕಂಡು ಬರುವುದು ಸಾಮಾನ್ಯವಾಗಿದೆ. ಅದರಲ್ಲಿ ಮರುವಿರುವರು ಸೊಂಟದಲ್ಲಿ ಮಗು ಇಟ್ಟುಕೊಂಡು ಊರೆಲ್ಲ ಹುಡುಕಿದರು ಎನ್ನುವ ಗಾಧೆಯನ್ನು ಚಿಕ್ಕವರಿದ್ದಾಗಿನಿಂದ ಕೆಳುತ್ತಿದೆವು ಅದಕ್ಕೆ ಸಾಟಿ ಎನ್ನುವ ಘಟನೆಯೊಂದು ನಡೆದಿದ್ದು ಸದ್ಯ ಇದು ನಡೆದಿದ್ದು ಭಾರತದಲ್ಲಿ ಅಲ್ಲ.

ಹೌದು ಪ್ರಯಾಣ ಮಾಡುವ ವೇಳೆ ಗಡಿಬಿಡಿ, ಆತುರದಲ್ಲಿ ಕೆಲವೊಬ್ಬರು ಲಗೇಜ್ ಮರೆತು ಹೋಗಿರುವ ಘಟನೆ, ಟಿಕೆಟ್ ಇಲ್ಲದೆ ಪ್ರಯಾಣ ಮಾಡಿದ, ಮತ್ತು ತಾವು ಇಳಿಯುವ ಸ್ಟಾಪ್ ಬಿಟ್ಟು ಬೇರೆಲ್ಲೋ ಇಳಿದ ಕೆಲವು ವಿಷಯಗಳು ಹೊಸವೆನೆಲ್ಲ. ಆದರೆ ಇಲ್ಲೊಬ್ಬ ಮಹಿಳೆಯೊಬ್ಬರು ವಿಮಾನ ಹತ್ತುವ ಭರದಲ್ಲಿ ತನ್ನ ಮಗುವನ್ನೇ ಏರ್​ಪೋರ್ಟ್ ನಲ್ಲಿ ಮರೆತು ಹೋದ ಘಟನೆ ಸೌದಿ ಅರೇಬಿಯಾದಲ್ಲಿ ನಡೆದಿದೆ.

ಏನಿದು ಘಟನೆ?

ಹೌದು, ಸೌದಿ ಅರೇಬಿಯಾದ ಜೆಡ್ಡಾದ ಕಿಂಗ್ ಅಬ್ದುಲ್ಲ ಅಜೀಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂತಹ ಘಟನೆ ಜರುಗಿದೆ. ಮಹಿಳೆಯೊಬ್ಬಳು ವಿಮಾನದಲ್ಲಿ ಹೋಗಲು ವಿಮಾನ ನಿಲ್ದಾಣಕ್ಕೆ ಹೋಗಿದ್ದಾರೆ. ಪ್ಲೈಟ್ ಬರುವುದು ಇನ್ನೂ ಸಮಯವಿದ್ದ ಕಾರಣ ವಿಶ್ರಾಂತಿ ಕೊಠಡಿಯಲ್ಲಿ ಕೂತು ತನ್ನ ಮಗುವಿನೊಂದಿಗೆ ವಿಮಾನಕ್ಕಾಗಿ ಕಾಯುತ್ತಿದ್ದಾಳೆ ಈ ಸಮಯದಲ್ಲಿ ಯಾವುದೋ ಗಾಡವಾದ ಯೋಚನೆಯಲ್ಲಿ ಮುಳಗಿದ ಮಹಿಳೆ, ವಿಮಾನ ಬಂದ ಪ್ರಕಟಣೆ ಕೇಳಿದ ಕೂಡಲೇ ಗಲಿಬಿಲಿಗೊಂಡು ಮಗುವನ್ನು ಅಲ್ಲಿಯೇ ಬಿಟ್ಟು ವಿಮಾನ ಏರಿದ್ದಾಳೆ.

ಅಲ್ಲಿಯವರೆಗೂ ಮಹಿಳೆಗೆ ಅರಿವಿಲ್ಲದೆ ಕುಳಿತ್ತಿದ್ದಾಳೆ. ವಿಮಾನ ಟೇಕಾಫ್ ಆಗಿ ಸ್ವಲ್ಪ ದೂರ ಹೋದ ಬಳಿಕ ಮಹಿಳೆಗೆ ತನ್ನ ಮಗುವಿನ ನೆನಪಾಗಿದೆ. ನಂತರ ಗಾಬರಿಯಿಂದ ವಿಮಾನದ ಅಳಲು ಶುರುಮಾಡಿದ ಮಹಿಳೆ ಸಿಬ್ಬಂದಿಗೆ ವಿಷಯ ತಿಳಿಸಿ. ಜೆಡ್ಡಾ ವಿಮಾನ ನಿಲ್ದಾಣಕ್ಕೆ ತಿರುಗಿಸುವಂತೆ ವಿನಂತಿ ಮಾಡಿಕೊಂಡಿದ್ದಾರೆ. ಕೊನೆಗೆ ಮಹಿಳೆಯ ಮನವಿಗೆ ಮಣಿದ ಸಿಬ್ಬಂದಿ ವಿಮಾನವನ್ನು ವಾಪಸ್ ವಿಮಾನ ನಿಲ್ದಾಣಕ್ಕೆ ತಿರುಗಿಸಿದ್ದು, ಮಹಿಳೆ ಮಗುವನ್ನು ಕರೆದುಕೊಂದು ವಾಪಸ್ ಅದೇ ವಿಮಾನದಲ್ಲಿ ತಾನು ಹೋಗಬೇಕಿದ್ದ ಊರಿಗೆ ಪ್ರಯಾಣಿಸಿದ್ದಾರೆ.

ಮಗು ಒಂದೇ ವಿಮಾನ ನಿಲ್ದಾಣದಲ್ಲಿ ಇರುವ ಕಾರಣ ಮತ್ತೆ ವಿಮಾನ ನಿಲ್ದಾಣಕ್ಕೆ ಹಿಂತಿರುಗಿ ಹೋದೆವು ಎಂದು ವಿಮಾನ ಸಿಬ್ಬಂದಿ ಹೇಳಿದ್ದಾರೆ. ಈ ರೀತಿಯ ಘಟನೆಗಳು ನಡೆದಿದ್ದು ಇದೇ ಮೊದಲ ಬಾರಿ ನಡೆದಿದೆ. ಎಂದು ಪೈಲಟ್ ತಿಳಿಸಿದ್ದಾರೆ.

Also read: ಗಂಡು ಮಗುವಿಗೆ ಜನ್ಮ ನೀಡಿದ ತೃತೀಯ ಲಿಂಗಿ; ತಾಯ್ತನ ಅನ್ನೋದು ಕೇವಲ ಹೆಣ್ಣಿಗೆ ಮಾತ್ರ ಸೀಮಿತವಲ್ಲ ಎನ್ನುವ ಕಾಲ ಬಂದಾಯಿತು..