ಮೆಸೆಜ್ ಮಾಡಿ ೧೧೨ ಮರಗಳನ್ನು ಉಳಿಸಿ!!!

0
767

ಉದ್ಯಾನ ನಗರಿ, ಗ್ರೀನ್ ಸಿಟಿ ಎಂದು ಹೆಸರು ವಾಸಿಯಾಗಿದ್ದ ಬೆಂಗಳೂರು ಈಗ ಕಾಂಕ್ರೆಟ್ ಸಿಟಿ, ಐಟಿ ಸಿಟಿ ಎಂದು ಕರೆಸಿಕೊಳ್ಳುತ್ತಿದೆ. ಬೆಳೆಯುತ್ತಿರುವ ಜನಸಂಖ್ಯೆಗೆ ಮರಗಳ ಮಾರಣ ಹೋಮ ಮಾಡಿಯೇ ನಾವು ಬದುಕು ಕಟ್ಟಿಕೊಳ್ಳಬೇಕಾ ಎಂಬ ಪ್ರಶ್ನೆ ಪ್ರಜ್ಞಾವಂತ ನಾಗರಿಕರನ್ನು ಕಾಡುತ್ತಿದೆ.

ಮೆಟ್ರೋ, ರಸ್ತೆ ಅಗಲಿಕರಣ, ಕಟ್ಟಡ ನವೀಕರಣ ಹೀಗೆ ಯಾವುದೇ ಕೆಲಸ ಮಾಡಲು ಹೋರಟರು, ಮರಗಳಿಗೆ ಬ್ರೇಕ್ ಹಾಕದೆ ಮಾಡುವುದು ಅಸಾಧ್ಯ. ಸದ್ಯ ಬೆಂಗಳೂರಿನಲ್ಲಿ ಇಂತಹ ಕೆಲಸ ನಡೆಯಲು ಯೋಜನೆ ಸಿದ್ಧವಾಗುತ್ತದೆ. ಇದರ ನೀಲಿ ನಕ್ಷೆಯನ್ನು ಕಾರ್ಯರೂಪ ಮಾಡುವ ಮುನ್ನ ಜನ ಎಚ್ಚೆತ್ತುಕೊಳ್ಳಬೇಕು.

ಜಯಮಹಲ್ ಸುತ್ತ ಒಟ್ಟು ೧೧೨ ಮರಗಳನ್ನು ತೆರವುಗೊಳಿಸುವ ಸಂಬಂಧ ಅನುಮತಿ ಕೋರಿದ್ದಾರೆ. ಅಲ್ಲದೆ ಸಾರ್ವಜನಿಕರು, ಸಂಘ ಸಂಸ್ಥೆಗಳು, ಜನ ಪ್ರತಿನಿಧಿಗಳು ಮರಗಳ ತೆರವುಗೊಳಿಸಲು ಆಕ್ಷೇಪಣೆ ಸಲ್ಲಿಸಬಹುದಾಗಿದೆ. ಸೂಕ್ತ ದಾಖಲೆಗಳೊಂದಿಗೆ ಇ-ಮೇಲ್ ಅಥವಾ ಪತ್ರ ಮುಖೇನ ಆಕ್ಷೇಪಣೆ ಸಲ್ಲಿಸುತ್ತವಂತೆ ಕೋರಲಾಗಿದೆ.

ಈಗಗಾಲೇ ಮೇಕ್ರಿ ಸರ್ಕಲ್‌ನಿಂದ ದಂಡು ರೈಲು ನಿಲ್ದಾಣದ ವರೆಗೆ ಮರಗಳನ್ನು ಕಡೆಯದಂತೆ ಪರಿಸರವಾದಿಗಳು ಧ್ವನಿ ಎತ್ತಿದ್ದಾರೆ. ಅಲ್ಲದೆ ಆಕ್ಷೇಪಣೆ ಸಲ್ಲಿಸುವಂತೆ ಕರೆ ನೀಡಿದ್ದು ಜನರು ಬೆಂಬಲಿಸಬೇಕಿದೆ.

೫೦ಕ್ಕಿಂತ ಹೆಚ್ಚು ಮರಗಳನ್ನು ಕಡಿಯುವ ಅಗತ್ಯವಿದ್ದರೆ ಸಾರ್ವಜನಿಕರ ಅಭಿಪ್ರಾಯ ಅಗತ್ಯ ಎಂದು ‘ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆ ೧೯೭೬’ ಕಲಂ ೮(೩)ರ ತಿಳಿಸುತ್ತದೆ.

ಹಾಗಿದ್ದರೆ ಜಯಮಹಲ್ ಅಕ್ಕಪಕ್ಕದ ನಿವಾಸಿಗಳೆ ನಿಮಗೆ ಕಾರ್ಯೊನ್ಮುಖರಾಗಲು ಇದು ಸಕಾಲವಾಗಿದೆ. ಮರಗಳ ಕಡಿಯುವುದನ್ನು ನಿಲ್ಲಸಲು ನಿಮ್ಮ ಅನಿಸಿಕೆಯನ್ನು ಸೂಕ್ತ ದಾಖಲೆ ಗಳೊಂದಿಗೆ ಈ ವಿಳಾಸಕ್ಕೆ ಕಳುಹಿಸಿ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ವೃಕ್ಷಾಧಿಕಾರಿರವರ ಕಚೇರಿ ಉಪ ವಿಭಾಗ-೧ ೧೭ನೇ ಮಹಡಿ ಪಿ.ಯು ಬಿಲ್ಡಿಂಗ್ ಎಂ.ಜಿ ರಸ್ತೆ ಬೆಂಗಳೂರು.