ನಶಿಸಿ ಹೋಗುತ್ತಿರುವ ನಮ್ಮ ಸಾಂಪ್ರದಾಯಿಕ ಕಲೆ ಕುಂಬಾರಿಕೆಯನ್ನು ಪ್ರೋತ್ಸಾಹಿಸುತ್ತ.. SAY NO TO CHINA CRACKERS ಎನ್ನುತ್ತಿರುವ ಈ ಭಾರತೀಯ ಹೆಣ್ಣು ಮಗಳಿಗೊಂದು ಹ್ಯಾಟ್ಸ್ ಆಫ್..

0
500

ಒಂದು ಕಾಲದಲ್ಲಿ ಕುಂಬಾರಿಕೆ ಬದುಕಿನ ಭಾಗವಾಗಿತ್ತು.. ಆದರೆ ಇಂದು ವಿನಾಶದ ಅಂಚಿಗೆ ತಲುಪಿದೆ.. ಮಣ್ಣಿನ ಮಡಿಕೆ ಇಂದು ಕೇವಲ ನೆನಪು ಮಾತ್ರ.. ಮಕ್ಕಳಿಗೆ ಮಡಿಕೆ ಎಂದರೇನು ಎಂಬುದೇ ತಿಳಿದಿಲ್ಲ.. ಆಧುನಿಕತೆಯ ಹೆಸರಲ್ಲಿ ನಮ್ಮ ಸಾಂಪ್ರದಾಯಿಕ ಕಲೆ ಮರೆಯಾಗುತ್ತಿದೆ.. ಮಡಿಕೆಯ ಬದಲಾಗಿ ಸ್ಟೀಲ್, ಅಲ್ಯುಮಿನಿಯಮ್ ಬಂದು ಯಾವುದೊ ಕಾಲವೇ ಆಯಿತು.. ನಮ್ಮ ಜಗತ್ತು ಬದಲಾಗುತ್ತಿರುವ ಹಾಗೆ ಮನುಷ್ಯನ ಬೇಡಿಕೆಗಳು ಬದಲಾಗುತ್ತಿವೆ ಎಂದರೆ ತಪ್ಪಾಗಲಾರದು..

ಆದರೆ ಇಲ್ಲೊಬ್ಬ ಹೆಣ್ಣು ಮಗಳಿದ್ದಾರೆ.. ನಮ್ಮ ಸಾಂಪ್ರದಾಯಿಕ ಕಲೆ ಅಳಿಸಿ ಹೋಗಬಾರದೆಂದು ಕುಂಬಾರಿಕೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ.. ಹೌದು ಇವರ ಹೆಸರು ಸುನಿತಾ ಮಂಜುನಾಥ್.. ಓದಿದ್ದು M.Tec.. ಸಿಕ್ಕ ಸರ್ಕಾರಿ ಕೆಲಸವನ್ನೂ ತ್ಯಜಿಸಿ ತಮ್ಮದೇ ಎಜುಕೇಶನಲ್ ಟ್ರಸ್ಟ್ ಹಾಗೂ ವಯಕ್ತಿಕವಾಗಿ ಸಮಾಜ ಸೇವೆ ಮಾಡುತ್ತಿರುವ ಇವರು ಇದೀಗ ಕುಂಬಾರಿಕೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಹಾಗೂ ಒಬ್ಬ ವಿದ್ಯಾವಂತ ಮಹಿಳೆಯಾಗಿ, ನಮ್ಮ ಶತ್ರು ದೇಶವಾದ ಚೀನಾಗೆ ಆರ್ಥಿಕ ಹಿನ್ನಡೆ ತರುವ ಕಾರ್ಯದಲ್ಲಿ ನಮ್ಮ ಜವಬ್ದಾರಿಯು ಕೂಡ ಇದೆ ಎಂದು ಭಾವಿಸಿ, ಈ ದೀಪಾವಳಿಯಲ್ಲಿ ಹೆಚ್ಚು ವ್ಯಾಪಾರವಾಗುವ ಚೀನಾ ಪಟಾಕಿಯ ವಿರುದ್ಧ ತಮ್ಮದೇ ರೀತಿಯಲ್ಲಿ ಅಭಿಯಾನವನ್ನು ಶುರು ಮಾಡಿದ್ದಾರೆ..

ಹೌದು ತಮ್ಮ ಎಜುಕೇಶನಲ್ ಟ್ರಸ್ಟ್ ಗೆ ಒಳ ಪಡುವ ಶಾಲೆಗಳಲ್ಲೇ ಕುಂಬಾರರನ್ನು ಕರೆಸಿ ಅಲ್ಲಿಯೇ ಅವರಿಗೆ ಮಡಿಕೆ ಮಾಡಲು ಜಾಗವನ್ನು ನೀಡಿ ಆರ್ಥಿಕ ಸಹಾಯವನ್ನು ಮಾಡುವುದರ ಜೊತೆಗೆ ಸಾವಿರಾರು ಮಣ್ಣಿನ ದೀಪಗಳನ್ನು ತಯಾರಿಸಿ ಅದನ್ನು ಉಚಿತವಾಗಿ ಸಾರ್ವಜನಿಕರಿಗೆ ನೀಡುವುದರ ಮೂಲಕ ನಮ್ಮ ಸಾಂಪ್ರದಾಯಿಕ ಕಲೆಗೆ ಪ್ರೋತ್ಸಾಹಿಸುತಿದ್ದಾರೆ..

ಸರ್ಕಾರದಿಂದ ಯಾವುದೇ ಸೌಲಭ್ಯ ಸಿಗದೆ ಇನ್ನೂ ಕುಂಬಾರಿಕೆಯನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿರುವ ಹಲವಾರು ಕುಟುಂಬಗಳಿವೆ.. ಅವರ ಕಷ್ಟ ಕೇಳಿದರೆ ಕಲ್ಲು ಕೂಡ ಕರಗವುದಂತೂ ಸತ್ಯ.. ಕಷ್ಟವಾದರೂ ನಮ್ಮ ಸಾಂಪ್ರದಾಯಿಕ ಕಲೆ ನಶಿಸಿ ಹೋಗಲು ಬಿಡದೇ ಆ ವೃತ್ತಿಯನ್ನೇ ಮುಂದುವರೆಸುತ್ತಿರುವ ಕುಂಬಾರರಿಗೆ ಆರ್ಥಿಕ ನೆರವು ನೀಡುತ್ತಿರುವ ಸುನಿತಾ ಮಂಜುನಾಥ್ ರವರಿಗೆ ನಮ್ಮ ಕಡೆಯಿಂದ ಧನ್ಯವಾದಗಳು..

ನಿಮ್ಮ ಕೆಲಸಕ್ಕೆ ಯಶಸ್ಸು ಸಿಗಲಿ.. ಸರ್ಕಾರದಿಂದ ಆ ಬಡ ಜೀವಗಳಿಗೆ ನೆರವು ಸಿಗುವಂತಾಗಲಿ.. ಚೀನಾ ಪಟಾಕಿಯ ವಿರುದ್ಧದ ನಿಮ್ಮ ಅಭಿಯಾನಕ್ಕೆ ಕನ್ನಡಿಗರಾದ ನಾವುಗಳು ಬೆಂಬಲ ಸೂಚಿಸುತ್ತೇವೆ.. ಈ ಭಾರಿ ದೀಪಗಳ ಮೂಲಕ ನಮ್ಮ ಹಬ್ಬ.. ನಾವು ಹಚ್ಚುವ ಒಂದು ಮಣ್ಣಿನ ದೀಪದಿಂದ ಒಬ್ಬ ಕುಂಬಾರನ ಜೀವನ ಬೆಳಕಾಗುವುದಾದರೆ ನಿಮ್ಮ ಈ ಪ್ರಯತ್ನಕ್ಕೆ ನಮ್ಮ ಬೆಂಬಲ ಸದಾ ಇರುತ್ತದೆ.. ಆಲ್ ದಿ ಬೆಸ್ಟ್ ಮೇಡಮ್..

ಒಂದು ಡಿಗ್ರಿ ಮುಗಿಸಿ ಹಾಗೊ ಹೀಗೊ ಕೆಲಸ ಗಿಟ್ಟಿಸಿಕೊಂಡು.. ಕೈಗೆ ದುಡ್ಡು ಬಂದರೇ ಸಾಕು ವೀಕೆಂಡ್ ನಲ್ಲಿ ಪಬ್ಬು ಬಾರು ಎಂದು ಸುತ್ತುವ “ಕೆಲವು” ಹೆಣ್ಣು ಮಕ್ಕಳು ನಿಮ್ಮನ್ನು ನೋಡಿ ಕಲಿಯುವುದು ಬಹಳಷ್ಟಿದೆ.