ಮತ್ತೆ ದೇಶದ್ರೋಹಿಗಳ ಅಟ್ಟಹಾಸ; ಪಾಕಿಸ್ತಾನಕ್ಕೆ ಜಿಂದಾಬಾದ್ ಅನ್ನದಿದ್ರೆ, ಹುಬ್ಬಳ್ಳಿಯಲ್ಲಿ ಬಾಂಬ್ ಸ್ಫೋಟಿಸ್ತೇವೆ ಎನ್ನುವ ವಿಡಿಯೋ ವೈರಲ್..

0
870

ಜಮ್ಮುವಿನ ಪುಲ್ವಾಮದಲ್ಲಿ ಉಗ್ರರಿಂದ ನಡೆದ ದಾಳಿಯ ನಂತರ ದೇಶದ ತುಂಬೆಲ್ಲ ಬೆಂಕಿ ಹತ್ತಿಕೊಂಡು ಉಗ್ರರಿಗೆ ಬೆಂಬಲ ನೀಡುತ್ತಿರುವ ಪಾಕಿಸ್ತಾನದ ವಿರುದ್ದ ಮಾತುಗಳು ಕೇಳಿಬಂದು ಪಾಪಿ ದೇಶವನ್ನು ನಿರ್ನಾಮ ಮಾಡಬೇಕು ಎಂದು ದೇಶದ ತುಂಬೆಲ್ಲ ಹೋರಾಟಗಳು ನಡೆದವು, ಆದರೆ ಕೆಲವೊಂದು ದೇಶ ವಿರೋಧಿಗಳು ಪಾಕಿಸ್ತಾನದ ವಿರುದ್ದ ಜೈಕಾರ ಹಾಕಿ ಸಾರ್ವಜನಿಕರಿಂದ ತಳಿತಕ್ಕೆ ಒಳಗಾಗಿ ದೇಶ ವಿರೋಧಿ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ, ಇಷ್ಟೊಂದು ಘಟನೆಗಳು ನಡೆದರೂ ಪಾಪಿಗಳು ದೇಶದ ಅನ್ನವನ್ನು ತಿಂದು ದೇಶಕ್ಕೆ ದ್ರೋಹ ಬಗೆಯಲು ಹೊರಟ್ಟಿದ್ದಾರೆ.

@ publictv.in

ಏನಿದು ಪ್ರಕರಣ?

ನಾಲ್ವರು ದೇಶದ್ರೋಹಿಗಳು ಪಾಕಿಸ್ತಾನಕ್ಕೆ ಜಿಂದಾಬಾದ್ ಅನ್ನಿ, ಇಲ್ಲದಿದ್ರೆ ಹುಬ್ಬಳ್ಳಿಯಲ್ಲಿ ಬಾಂಬ್ ಸ್ಫೋಟಿಸ್ತೇವೆ ಎಂದು ಯುವಕರು ಬೆದರಿಕೆ ಹಾಕಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ವೀಡಿಯೊ ಹರಿದಾಡುತ್ತಿದ್ದು ದೇಶದಲ್ಲಿ ಮತ್ತಷ್ಟು ದಂಗೆಗೆ ಕಾರಣವಾಗುತ್ತಿದೆ. ಈ ಹಿಂದೆ ಈ ರೀತಿಯ ಹೇಳಿಕೆ ನೀಡಿದ ಕೆಲವರಿಗೆ ಸರಿಯಾದ ಶಿಕ್ಷೆ ನೀಡಿದರು ಮತ್ತೆ ಮತ್ತೆ ಈ ಪಾಪಿಗಳು ಹುಟ್ಟುತ್ತಿರುವುದು ದೇಶದ ಜನರ ತಾಳ್ಮೆ ಕಳೆದು ಕೊಳ್ಳಲು ಕಾರಣವಾಗುತ್ತಿದೆ.

ವಿಡಿಯೋದಲ್ಲಿ ಏನಿದೆ?

Also read: ರಾಹುಲ್ ಗಾಂಧಿ ಈ ದೇಶದ ಮುಂದಿನ ಪ್ರಧಾನಿ: ಸಿದ್ದರಾಮಯ್ಯ!! ಇವರ ನಂಬಿಕೆ ನಿಜವಾಗುತ್ತೆ ಅಂತೀರಾ?

ಪಾಕಿಸ್ತಾನ್ ಜಿಂದಾಬಾದ್ ಜಿಂದಾಬಾದ್. ಹಿಂದೂಸ್ತಾನದವರ ಗುಂಡು ಹೊಡೆಯುತ್ತೇವೆ. ನಮ್ಮ ಟಾರ್ಗೆಟ್ ಭಾರತವನ್ನು ಬರ್ಬಾದ್ ಮಾಡುವುದು, ಹುಬ್ಬಳ್ಳಿಯಲ್ಲಿ ದೊಡ್ಡ ಬಾಂಬ್ ಬ್ಲಾಸ್ಟ್ ಆಗುತ್ತೆ, ಇಂಡಿಯಾಗೆ ಹೊಡೆಯುತ್ತೇವೆ. 2-3 ದಿನಗಳಲ್ಲಿ ನಾವು ದಾಳಿ ನಡೆಸ್ತೇವೆ ನಿಮಗೇನು ಗೊತ್ತಾಗುತ್ತೆ, ನೀವೇನೂ ಮಾಡಿಕೊಳ್ಳುವುದಕ್ಕೆ ಆಗುವುದಿಲ್ಲ. ನೀವು ಹೋಗಿ ಸುಮ್ಮನೆ ಮಲಗಿಕೊಳ್ಳಿ. ನೀವು ಉಳಿದು ನೋಡಿ. ಒಂದು ಕೆಲಸ ಮಾಡಿ ಪಾಕಿಸ್ತಾನ ಜಿಂದಾಬಾದ್ ಬೋಲ್. ಎಂದು ವಿಡಿಯೋದಲ್ಲಿ ಹೇಳಿಕೆ ನೀಡಿದ್ದಾರೆ.

ರಾಷ್ಟ್ರದ್ರೋಹಿ ಹೇಳಿಕೆಗೆ ಎಂ.ಬಿ ಪಾಟೀಲ್ ಪ್ರತಿಕ್ರಿಯೇ;

ದೇಶದ್ರೋಹಿ ಹೇಳಿಕೆ ನೀಡಿದ ಪಾಪಿಗಳ ವಿರುದ್ದ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಎಂ.ಬಿ ಪಾಟೀಲ್ “ರಾಷ್ಟ್ರದ್ರೋಹಿ ಹೇಳಿಕೆ, ಸಂದೇಶಗಳನ್ನು ಕಳಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಸಾಮಾಜಿಕ ಜಾಲತಾಣಗಳ ಮೇಲೆ ನೀಗ ಇರಿಸಲಾಗುತ್ತಿದೆ. ಈ ಕುರಿತು ಡಿಜಿ-ಐಜಿಗಳಿಗೆ ಕಟ್ಟುನಿಟ್ಟಿನ ಕ್ರಮಜರುಗಿಸಲು ಸೂಚನೆ ನೀಡಿದ್ದೇನೆ” ದೇಶ ದ್ರೋಹಿ ಹೇಳಿಕೆ ನೀಡುವವರ ವಿರುದ್ಧ ಭಾರತ ಸರ್ಕಾರ ತಡೆಯ ಕಾಯ್ದೆ ರೂಪಿಸಬೇಕು. ಫೇಸ್ ಬುಕ್, ವಾಟ್ಸಪ್ ನಲ್ಲಿ ಸಂದೇಶ ಹರಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಹುಬ್ಬಳ್ಳಿ ಸ್ಪೋಟಿಸುವುದಾಗಿ ಹೇಳಿದ ವಿಡಿಯೋ ವೈರಲ್ ಆಗಿದ್ದು ಗಮನಕ್ಕೆ ಬಂದಿಲ್ಲ. ಪೊಲೀಸರು ಆ ಬಗ್ಗೆ ಕ್ರಮಕೈಗೊಳ್ತಾರೆ. ಜನರು ಆತಂಕ ಪಡುವ ಅಗತ್ಯವಿಲ್ಲ. ವಿಶ್ವದ ಎಲ್ಲ ರಾಷ್ಟ್ರಗಳು ಪಾಕಿಸ್ತಾನವನ್ನು ಮೂಲೆ ಗುಂಪು ಮಾಡಬೇಕು. ವ್ಯಾಪಾರ ವಹಿವಾಟುಗಳಿಗೆ ವಿಶ್ವದಲ್ಲಿ ನಿಷೇಧ ಹೇರಬೇಕು. ಪಾಕಿಸ್ತಾನ ಭಯೋತ್ಪಾದಕರ ಬಿತ್ತುವ ರೋಗಗ್ರಸ್ಥ ರಾಷ್ಟ್ರ ಎಂದು ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ತಿಳಿಸಿದ್ದಾರೆ.

ಪೊಲೀಸ್ ಆಯುಕ್ತರ ಪ್ರತಿಕ್ರಿಯೆ:

Also read: ಇನ್ಮುಂದೆ ಯೋಧರು ತಮಗೆ ಇಷ್ಟ ಬಂದ ಫ್ಲೈಟ್​ನಲ್ಲಿ ಫ್ರೀಯಾಗಿ ಪ್ರಯಾಣಿಸಬಹುದು..

ದೇಶದ ವಿರುದ್ದ ಕೇಳಿಕೆ ನೀಡಿ ಪಾಕಿಸ್ತಾನಕ್ಕೆ ಬೆಂಬಲಿಸಿ ಎಂದು ಹೇಳುತ್ತಿರುವ ಪಾಪಿಗಳ ಕ್ರಮ ತೆಗೆದುಕೊಳ್ಳಲು ಗೃಹ ಸಚಿವರ ಆದೇಶದ ಮೇರೆಗೆ ತನಿಖೆ ಆರಂಭ ಮಾಡಿದ್ದೇವೆ. ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಕಿಡಿಗೇಡಿಗಳು ಯಾರೇ ಇರಲಿ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಪಾಪಿಗಳು ವಿಡಿಯೋದಲ್ಲಿ ಪಾಕಿಸ್ತಾನಕ್ಕೆ ಜೈ ಎಂದಿದ್ದಾರೆ. ಅಲ್ಲದೇ ಹುಬ್ಬಳ್ಳಿಯಲ್ಲಿ ಬಾಂಬ್ ಇಟ್ಟು ಉಡಾಯಿಸುವುದಾಗೆ ಬೆದರಿಕೆ ಒಡಿದ್ದಾರೆ. ಈ ವಿಡಿಯೋವನ್ನು ಸೈಬರ್ ಕ್ರೈಂಗೆ ಕೊಡಲಾಗುವುದು. ಪ್ರಾಥಮಿಕವಾಗಿ ತನಿಖೆಯಲ್ಲಿ ಅದು ಮಹಾರಾಷ್ಟ್ರದ ವಿಡಿಯೋ ಎನ್ನುವುದು ತಿಳಿದು ಬಂದಿದೆ” ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎಂ. ಎನ್ ನಾಗರಾಜ್ ಹೇಳಿದ್ದಾರೆ.