ಸಹ್ಯಾದ್ರಿ ಕಾಲೇಜಿನಲ್ಲಿ ‘ಕೇಸರಿ ಕಪ್ಪು’ ಚುಕ್ಕೆ….!

0
851

 ಶಿವಮೊಗ್ಗ ಜಿಲ್ಲೆಯ ಸಹ್ಯಾದ್ರಿ ಕಾಲೇಜಿನಲ್ಲಿ ಉದ್ವಿಗ್ನ ವಾತಾವರಣ ತಲೆದೋರಿದೆ. ಬುರ್ಖಾ V/S ಕೇಸರಿ ಶಾಲು ಎಂಬ ಸ್ಥಿತಿ ನಿರ್ಮಾಣವಾಗಿದೆ.

ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಸಮವಸ್ತ್ರ  ಕಡ್ಡಾಯ ಮಾಡಲಾಗಿದೆ. ಆದ್ರೆ ಒಂದು ಕೋಮಿನ ವಿದ್ಯಾರ್ಥಿನಿಯರು ಮಾತ್ರ ಬುರ್ಖಾ ಧರಿಸಿ ಕಾಲೇಜಿಗೆ ಬರುತ್ತಿದ್ದಾರೆ. ಇದನ್ನು ಖಂಡಿಸಿ ಇನ್ನೊಂದು ಕೋಮಿನ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಕೇಸರಿ ಶಾಲು ಧರಿಸಿ ಕಾಲೇಜಿಗೆ ಬರಲಾರಂಭಿಸಿದ್ದಾರೆ. ಅವರು ಬುರ್ಖಾ ತೆಗೆಯುವವರೆಗೂ ನಾವು ಶಾಲು ತೆಗೆಯುವುದಿಲ್ಲ ಅಂತಾ ಪಟ್ಟು ಹಿಡಿದಿದ್ದಾರೆ.

ಸಹ್ಯಾದ್ರಿ ಕಾಲೇಜಿನ ಕಾರ್ಯಕ್ರಮವೊಂದಕ್ಕೆ ಬುರ್ಖಾ ಧರಿಸಿ ಬರುವುದನ್ನು ಎಬಿವಿಪಿ ಸಂಘಟನೆ ವಿರೋಧಿಸಿತ್ತು. ಕೇಸರಿ ವಸ್ತ್ರ ಧರಿಸಿ ಬರುವುದಾಗಿ ಘೋಷಿಸಿತ್ತು. ಆದರೆ, ಕಾಲೇಜಿನಲ್ಲಿ ಯಾವುದೇ ವಸ್ತ್ರಸಂಹಿತೆ ಅಧಿಕೃತವಾಗಿ ಜಾರಿಯಲ್ಲಿಲ್ಲ. ಈ ಘಟನೆ ನಂತರ ದುಷ್ಕರ್ಮಿಗಳು ಎರಡು ಕೋಮುಗಳ ನಡುವೆ ದ್ವೇಷ ಮೂಡುವಂಥ ಸಂದೇಶಗಳನ್ನು ವಾಟ್ಸಪ್ ಮೂಲಕ ಕಳೆದ ಮೂರು ದಿನಗಳಿಂದ ಹರಡುತ್ತಿದ್ದರು. ಕಾಲೇಜಿನ ಪ್ರಾಚಾರ್ಯರು ಹಾಗೂ ಆಡಳಿತ ಮಂಡಳಿ ಈ ಸಮಸ್ಯೆಯನ್ನು ಹೇಗೆ ಬಗೆಹರಿಸುವುದು ಅನ್ನೋ ಗೊಂದಲದಲ್ಲಿದ್ದಾರೆ.

ಈ ಬಗ್ಗೆ ಪೊಲೀಸರು ಕ್ರಮ ಕೈಗೊಂಡಿದ್ದು, ಸೋಮವಾರದಂದು ಯಾವುದೇ ಪ್ರತಿಭಟನೆಗೆ ಅವಕಾಶ ನೀಡಿಲ್ಲ ಎಂದು ಹೇಳಿದ್ದಾರೆ. ವಾಟ್ಸಪ್ ಗ್ರೂಪ್‌ನಲ್ಲಿ ಸಂದೇಶ ಹಾಕಿದರೆ ಅಡ್ಮಿನ್ ವಿರುದ್ಧ ಕ್ರಮ ಕ್ರಮ ಕೈಗೊಳ್ಳಲಾಗುತ್ತೆ. ದುಬೈನಿಂದ ಧಮ್ಕಿ ಹಾಕಿದ ಯುವಕರಿಗೆ ಲುಕೌಟ್ ನೋಟಿಸ್ ಜಾರಿ ಮಾಡಲಾಗುವುದು, ಬಂಧಿತರ ವಿರುದ್ಧ ಸ್ವಯಂ ಪ್ರೇರಿತರಾಗಿ ಐಪಿಸಿ 153ಎ, 504, 505 ಹಾಗೂ 507 ಅನ್ವಯ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್‌ಪಿ ಅಭಿನವ್ ತಿಳಿಸಿದರು.