ಕರ್ನಾಟಕದಲ್ಲಿ ಬಾಹುಬಲಿ -2 ರಿಲೀಸ್ ಮಾಡೋಕ್ಕೆ ಬಿಡಲ್ವಂತೆ ? ಯಾಕೆ ಅಂತ ನೋಡಿ !

0
797

ನೀವೆಲ್ಲ ಈಗಾಗಲೇ ಕಟ್ಟಪ ಅಲಿಯಾಸ್ ಸತ್ಯ ರಾಜ್ ನ ಈ ವಿಡಿಯೋ ನೋಡಿರ್ತೀರಿ

ಸೋಶಿಯಲ್ಹೌ ಮೀಡಿಯಾ ದಲ್ಲಿ ಸಾಮಾನ್ಯ ಕನ್ನಡಿಗ ಶುರುಮಾಡಿದ #SayNoToBahubali ಈಗ ಬರಿ ಆನ್ಲೈನ್ ಹೋರಾಟ ಮಾತ್ರ ಅಲ್ಲ . ಕರ್ನಾಟಕ ರಕ್ಷಣಾ ವೇದಿಕೆ ಬಾಹುಬಲಿ-2 ಕರ್ನಾಟಕದಲ್ಲಿ ರೆಲೀಸ್ ಆಗೋಕೆ ಬಿಡೋಲ್ಲ ಅಂತಿದಾರೆ !!

ಕರ್ನಾಟಕ ರಕ್ಷಣಾ ವೇದಿಕೆ ಈಗ ಬೀದಿಗಿಳಿದು ಯಾವುದೇ ಕಾರಣಕ್ಕೂ ಬಾಹುಬಲಿ-೨ ಕರ್ನಾಟಕ ದಲ್ಲಿ ರಿಲೀಸ್ ಹಾಗೊಕ್ಕೆ ಬಿಡೋಲ್ಲ ಅಂತಿದಾರೆ.

ಸತ್ಯ ರಾಜ್ ಅವರ ಈ ಕನ್ನಡ ವಿರೋಧಿ ಹೇಳಿಕೆ ಕನ್ನಡಿಗರನ್ನ ಕೆರಳಿಸಿದೆ .. ಯಾಕೋ ಈ ಸಾಥಿ ಬಾಹುಬಲಿ ಕರ್ನಾಟಕದಲ್ಲಿ ಮುಖಾಡೆ ಮಲ್ಕೊಳ್ಳೋ ಎಲ್ಲ ಚಾನ್ಸ್ ಜಾಸ್ತಿ..

ನೀವು ಕಟ್ಟಾ ಕನ್ನಡ ಆಗಿದ್ದರೆ ಈ ವಿಡಿಯೋ ನ ಶೇರ್ ಮಾಡಿ ಮತ್ತು ಬಾಹುಬಲಿ ಫಿಲಿಮ್ ನ ವಿರೋಧಿಸಿ

ಈ ವಿಡಿಯೋ ಈಗ ಎಲ್ಲ ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿದೆ .

ಕನ್ನಡಿಗರ ಸ್ವಾಭಿಮಾನವನ್ನ ಕೆಣಕಿ ಇಡೀ ನಾಡಿಗೆ ಒಂದು ಸವಾಲೆಸೆದಿದ್ದಾನೆ ಆದ ಕಾರಣ ಯಾವುದೇ ಸ್ವಾಭಿಮಾನಿ ಕನ್ನಡಿಗನು ಆ ನಾಡ ವಿರೋಧಿ ಅಭಿನಯಿಸಿರುವ ಚಲನಚಿತ್ರವನ್ನ ವೀಕ್ಷಿಸಲು ಬಯಸುವುದಿಲ್ಲ ಹಾಗೂ ಆ ಚಿತ್ರವನ್ನ ಕನ್ನಡನಾಡಿನ ಯಾವುದೇ ವಿತರಕರು ಆ ಚಿತ್ರದ ವಿತರಣೆಗೆ ಮುಂದಾಗಬಾರದು, ಒಂದು ವೇಳೆ ಈ ಚಿತ್ರವನ್ನ ಖರೀದಿಸಿದರೆ ಅಂತವರನ್ನ ಕನ್ನಡವಿರೋಧಿಗಳು ಎಂದು ಭಾವಿಸಬೇಕಾಗುತ್ತದೆ ಮತ್ತು ಯಾವುದೇ ಕಾರಣಕ್ಕೂ ಬಾಹುಬಲಿ-2 ಚಿತ್ರ ಕರ್ನಾಟಕದಲ್ಲಿ ಬಿಡುಗಡೆಗೆ ಕರ್ನಾಟಕ ರಕ್ಷಣಾ ವೇದಿಕೆ ಅವವಕಾಶ ನೀಡುವುದಿಲ್ಲ. ಎಂತಹ ಹೋರಾಟಕ್ಕೂ ಕರ್ನಾಟಕ ರಕ್ಷಣಾ ವೇದಿಕೆ ಸಿದ್ಧವಾಗಿದ್ದು, ಈ ಚಿತ್ರವನ್ನ ಕರ್ನಾಟಕದಲ್ಲಿ ಯಾವುದೇ ಚಿತ್ರಮಂದಿರದವರು ಕೂಡ ಪ್ರದರ್ಶನಕ್ಕೆ ಮುಂದಾಗಬಾರದು. ಇದನ್ನ ಮೀರಿ ಯಾರೆ ಮುಂದಾದರು ಆಗುವ ಅನಾಹುತಕ್ಕೆ ಅವರೇ ನೇರ ಕಾರಣರಾಗಿರುತ್ತಾರೆ ಅಂತಹ ದುಸ್ಸಾಹಸಕ್ಕೆ ಯಾರು ಮುಂದಾಗಬಾರದು ಎಂಬ ಎಚ್ಚರಿಕೆ.

–ಶಿವಾನಂದ್, ಅಧ್ಯಕ್ಷರು ಬೆಂ.ನಗರ  ಕರ್ನಾಟಕ ರಕ್ಷಣಾ ವೇದಿಕೆ

ವ್ಯವಸ್ಥಿತವಾಗಿ ಅವರ ಭಾಷೆಯನ್ನು ಕನ್ನಡಿಗರ ಮೇಲೆ ಬಲವಂತವಾಗಿ ಹೇರುವ ಪ್ರಯತ್ನಗಳು ದಿನೇ ದಿನೇ ಹೆಚ್ಚುತ್ತಿದೆ. ಕನ್ನಡಿಗರ ಮೇಲೆ ಮೌಖಿಕ ಹಲ್ಲೆಗಳು ನಿರಂತರವಾಗಿ ನಡೆಸುತ್ತಾ ತಮ್ಮ ಬೇಳೆಯನ್ನು ಬೇಯಿಸಿಕೊಂಡು ಇಲ್ಲಿ ಏನನ್ನೂ ಬೇಕಾದರೂ ಮಾಡಬಹುದೆಂಬ ತೀರ್ಮಾನಕ್ಕೆ ಬಂದಿದ್ದಾರೆ. ಇಷ್ಟು ವರ್ಷಗಳ ಸಹನೆಗೆ ತೆರೆ ಎಳೆಯದಿದ್ದರೆ ಮುಂದಿನ ದಿನಗಳಲ್ಲಿ ನಮ್ಮ ಭಾಷೆ ಹಾಗೂ ಇಲ್ಲಿನ ಪರಿಸ್ಥಿತಿ ಶೋಚನೀಯವಾಗುವ ಎಲ್ಲ ಲಕ್ಷಣಗಳೂ ಸ್ಪಷ್ಟವಾಗಿ ಗೋಚರಿಸುತ್ತಿದೆ. ನಾಡಿನ ವಿವಿಧ ಕ್ಷೇತ್ರ ಹಾಗೂ ವರ್ಗಗಳ ಜನ ಒಕ್ಕೋರಲಿನಿಂದ ಪರಭಾಷಿಕರ ಇಂತಹ ಧೋರಣೆಯನ್ನು ಖಂಡಿಸುದರೊಂದಿಗೆ ಬಾಹುಬಲಿ -2 ಚಿತ್ರದ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತೇವೆ.

–ಪ್ರವೀಣ್‍ಕುಮಾರ್ ಶೆಟ್ಟಿ , ರಾಜ್ಯಾಧ್ಯಕ್ಷರು ಕರ್ನಾಟಕ ರಕ್ಷಣಾ ವೇದಿಕೆ