ಬೆಳ್ಳಂದೂರು ಕೆರೆಗೆ ಸರ್ಕಾರದಿಂದ ವಿಶೇಷ ಅನುಧಾನ, “ಅಭಿವೃದ್ಧಿ ಭಾಗ್ಯ” ಸಿಗಲಿದ್ಯಾ?

0
434

Kannada News | Karnataka News

ಕೆಲ ವರ್ಷಗಳಿಂದ ಸಾಕಷ್ಟು ಸುದ್ದಿಯಲ್ಲಿರುವ ಬೆಂಗಳೂರಿನ ಬೆಳ್ಳಂದೂರು ಕೆರೆಗೆ ಅಭಿವೃದ್ಧಿ ಭಾಗ್ಯ ಸಿಗುವ ಸಾಧ್ಯತೆಗಳಿವೆ. ಮಾಲಿನ್ಯ ಅಥವಾ ಪ್ರದೂಷಣೆಯಿಂದ ಕೂಡಿದ ಈ ಕೆರೆಯ ಅಭಿವೃದ್ದಿಗಾಗಿ ಸಾಕಷ್ಟು ಬಾರಿ ಒತ್ತಾಯಿಸಿದರು ಏನು ಪ್ರಯೋಜನೆ ಆಗಿರಲಿಲ್ಲ. ಈಗ ಇದರ ಅಭಿವೃದ್ದಿಗೆಂದೇ ಸರ್ಕಾರ ಒಂದು ವಿಶೇಷ ಅನುದಾನ ನೀಡಿದೆ.

ಹೌದು, ಬೆಳ್ಳಂದೂರು ಕೆರೆ ಅಭಿವೃದ್ಧಿಗೆ ಸರ್ಕಾರ 50 ಕೋಟಿ.ರೂ ಅನುದಾನ ಒದಗಿಸಿದೆ. ಈ ಅನುದಾನವನ್ನು ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಹಾಗೂ ತಜ್ಞರ ಸಮಿತಿಯ ಸದಸ್ಯರು ತುಂಬಾ ಹೊಗಳಿದ್ದಾರೆ. ಸರ್ಕಾರ ಮೊದಲಿನಿಂದ ನೀರಿನ ಮೂಲಗಳ ಅಭಿವೃದ್ಧಿಗೆ ಅನುದಾನ ನೀಡುತ್ತಾ ಬಂದಿದೆ. ಆದರೆ, ಈ ಕೆರೆಗೆಂದೇ ವಿಶೇಷ ಅನುದಾನ ನೀಡಿರುವುದು ವಿಶೇಷ.

ಇನ್ನು ಬೆಳ್ಳಂದೂರು ಕೆರೆಯ ಮಾಲಿನ್ಯ ಎಷ್ಟಿದೆ ಎಂದರೆ ಕೇವಲ ಎರಡು ತಿಂಗಳ ಅವಧಿಯಲ್ಲಿ ಕೆರೆಗೆ ಎರಡು ಬಾರಿ ಬೆಂಕಿ ಬಿದ್ದಿತ್ತು. ಈ ಕೆರೆಯ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಅಭಿವೃದ್ಧಿ ಪಡಿಸಬೇಕು ಎಂದು ಸ್ಥಳೀಯ ಜನ ಸರ್ಕಾರವನ್ನು ಸಾಕಷ್ಟು ಬಾರಿ ಒತ್ತಾಯಿಸಿದ್ದರು. ಆದರೆ, ಅನುದಾನದ ಕೊರೆತೆಯಿಂದ ಇದು ಹಾಗೆಯೇ ಉಳಿದಿತ್ತು.

BDA ಜಲಮೂಲವನ್ನು ಸ್ವಚ್ಛಗೊಳಿಸುವ ಜತೆಗೆ ನೀರಿನ ಗುಣಮಟ್ಟವನ್ನು ನಿರ್ವಹಣೆ ಮಾಡಲು ಇತರೆ ಸಂಸ್ಥೆಗಳೊಂದಿಗೆ ಕೈಜೋಡಿಸಲಿದೆ. ಕೆರೆಯಲ್ಲಿ ಸ್ಲೂಯಿಸ್‌ ಗೇಟ್‌ ಹಾಗೂ ಬೇಲಿ ಅಳವಡಿಕೆ, ಕಳೆ ಕೀಳುವುದು, ದಂಡೆಯಲ್ಲಿ ಸುರಿದಿರುವ ಕಳೆಯನ್ನು ತೆರವುಗೊಳಿಸುವುದು ಮತ್ತು ಕಳೆಯನ್ನು ತೆಗೆಯುವ ಯಂತ್ರಗಳನ್ನು ಖರೀದಿಸುವ ಪ್ರಕ್ರಿಯೆಯನ್ನು ತ್ವರಿತಗೊಳಿಸಲು BDA ಯೋಜಿಸಿದೆ. ಅಗ್ನಿ ಅವಘಡ ಮರುಕಳಿಸದಂತೆ ನೋಡಿಕೊಳ್ಳುವ ಉದ್ದೇಶದಿಂದ ಕೆರೆಯ ಸುತ್ತಲೂ ಭದ್ರತಾ ವ್ಯವಸ್ಥೆ ಮಾಡಲಾಗುತ್ತಿದೆ.

ಇನ್ನು ತಜ್ಞರ ಸಮಿತಿಯ ಕೆಲ ಸದಸ್ಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಕೆರೆ ಅಭಿವೃದ್ಧಿಗೆ ಹೆಚ್ಚುವರಿ ಅನುದಾನ ನೀಡುವ ಅಗತ್ಯವಿರಲಿಲ್ಲ, ಈ ಹಣ ಗುತ್ತಿಗೆದಾರರು ಹಾಗೂ ಎಂಜಿನಿಯರ್‌ಗಳ ಪಾಲಾಗುತ್ತದೆ. 900 ಎಕರೆ ಹೊಂದಿರುವ ಜಲಮೂಲದ ಅಭಿವೃದ್ಧಿಯನ್ನು ಎಲ್ಲ ಇಲಾಖೆಗಳು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಒಟ್ಟಿನಲ್ಲಿ ಸರ್ಕಾರ ನೀಡಿದ ಅನುದಾನವನ್ನು BDA ಕೆರೆಯ ಅಭಿವೃದ್ದಿಗಾಗಿ ಯಾವ ರೀತಿ ಉಪಯೋಗಿಸಲಿದೆ ಕಾದು ನೋಡಬೇಕು.

Also Read: ಭುಪಾಲ್ ಅನಿಲ ದುರಂತ ನಡೆದು 33 ವರ್ಷವಾದರೂ ಸಂತ್ರಸ್ತರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ.. ಸರ್ಕಾರಕ್ಕೆ ಸಾಮಾನ್ಯ ಜನರ ಜೀವಕ್ಕೆ ಬೆಲೆಯೇ ಇಲ್ಲವಾ??