SBI ನಿಂದ ಗ್ರಾಹಕರಿಗೆ ಎಚ್ಚರಿಕೆ; ಹಣ ವಂಚನೆಯಾದರೆ ಬ್ಯಾಂಕ್-ನಿಂದ ನೇರವಾಗಿ ಮೂರೇ ದಿನಗಳಲ್ಲಿ ಹಣ ವಾಪಸ್..

0
761

ನಗದು ರಹಿತ ವ್ಯವಹಾರಗಳಿಗೆ ಜನರು ಹೆಚ್ಚು ಅಂಟಿಕೊಂಡಿದ್ದಾರೆ. ಇದರಿಂದ ಎಷ್ಟೊಂದು ಉಪಯೋಗ ವಿದೆಯೋ ಅಷ್ಟೊಂದು ಮೋಸಗಳು ಕೂಡ ನಡೆಯುತ್ತಿವೆ. ವಂಚಕರು ಹಣ ಕಳ್ಳತನ ಮಾಡಲು ಆನ್ಲೈನ್ ವ್ಯವಹಾರಗಳು ಹೇಳಿ ಮಾಡಿಸಿದ ಹಾಗೆ ಆಗಿದೆ ಇದಕ್ಕೆ RBI ಎಷ್ಟೇ ಕ್ರಮಗಳನ್ನು ಮತ್ತು ಬದಲಾವಣೆಗಳನ್ನು ತಂದರು ಕೂಡ ಅದಕ್ಕೆ ಸರಿಯಾಗಿ ಮತ್ತೊಂದು ದಾರಿಯಲ್ಲಿ ವಂಚನೆ ಮಾಡುತ್ತಿದ್ದಾರೆ. ಇಂತಹ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇದಕ್ಕೆ ಜನ ಸಾಮಾನ್ಯರು ಎಷ್ಟೇ ಜಾಗೃತಿವಹಿಸಿದರು ಕಡಿಮೆಯಾಗಿದೆ. ಇನ್ನೂ ಹಣ ಕಳೆದುಕೊಂಡವರು ಬ್ಯಾಂಕ್ ಮತ್ತು ಸ್ಟೇಷನ್ ಮೆಟ್ಟಿಲೇರುತ್ತಿರುವುದು ನಡಿತ್ತಾನೆ ಇದೆ. ಈ ವಿಷಯವಾಗಿ SBI ತನ್ನ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ.

Also read: ಕಳ್ಳರು ಈಗ ATM ಕಾರ್ಡ್ ನಿಮ್ಮ ಜೇಬಿನಲ್ಲಿ ಇರುವಾಗಲೇ ಅದರ ಮಾಹಿತಿ ಪಡೆದು ವಂಚನೆ ಮಾಡುತ್ತಿದ್ದಾರೆ, ಅದನ್ನು ತಪ್ಪಿಸುವ ಮಾಹಿತಿ ಹೇಳ್ತೀವಿ ಓದಿ!!

ಹೌದು ಡಿಜಿಟಲೀಕರಣ, ಇ-ಕಾಮರ್ಸ್ ಮತ್ತು ಸ್ಮಾರ್ಟ್ ಫೋನ್ ಪ್ರಭಾವದಿಂದಾಗಿ ಆನ್ಲೈನ್ ಬ್ಯಾಂಕಿಂಗ್ ವ್ಯವಹಾರ ಸುಲಭವಾಗಿರುವಂತೆ, ಆನ್ಲೈನ್ ವಂಚನೆ ಪ್ರಕರಣಗಳು ಕೂಡ ಹೆಚ್ಚಾಗುತ್ತಿರುವುದು ಆತಂಕಕಾರಿಯಾಗಿದ್ದು. ಬ್ಯಾಂಕಿಂಗ್ ವಲಯದಲ್ಲಿ ವಂಚನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗ್ರಾಹಕರಿಗೆ ಜಾಗರೂಕರಾಗಿರಲು ಎಚ್ಚರಿಕೆ ನೀಡಿದೆ. ಅದರಂತೆ ಹಣ ಕಳೆದು ಕೊಂಡವರಿಗೆ 3 ದಿನಗಳಲ್ಲಿ ವಾಪಾಸು ಮಾಡಲಾಗುತ್ತೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತಿಳಿಸಿದೆ.

ಕಾರ್ಡ್ ಸ್ಕಿಮ್ಮಿಂಗ್ ವಂಚನೆ:

ರೆಸ್ಟೋರೆಂಟ್, ಬಾರ್, ಕೌಂಟರ್, ಗ್ಯಾಸ್ ಕೇಂದ್ರ, ರಿಟೇಲ್ ಕೌಂಟರ್ ಗಳಲ್ಲಿ ATM card ಅಥವಾ Debit/Credit card -ಗಳ ಡೇಟಾ ಕದಿಯುವ ಮೂಲಕ ವಂಚಕರು ಗ್ರಾಹಕರ ಹಣ ಲಪಟಾಯಿಸುತ್ತಿದ್ದಾರೆ. ಇದಕ್ಕಾಗಿ ಸ್ಕಿಮ್ಮಿಂಗ್ ವಂಚನೆ ಬಗ್ಗೆ SBI ಎಚ್ಚರಿಕೆ ನೀಡಿದೆ. ಎಟಿಎಂ ಕಾರ್ಡ್‌ಗಳ ಸ್ಕಿಮ್ಮಿಂಗ್‌ನಿಂದ(ಎಟಿಎಂ ಯಂತ್ರ ಅಥವಾ ಪಾಯಿಂಟ್‌ ಆಫ್‌ ಸೇಲ್‌ ಯಂತ್ರಗಳಲ್ಲಿ ಗುಪ್ತವಾಗಿ ಸಾಧನಗಳನ್ನು ಅಳವಡಿಸಿ, ಗ್ರಾಹಕರ ಮಾಹಿತಿ ಕಳವು ಮಾಡುತ್ತಿದ್ದಾರೆ. ಈ ಬಗ್ಗೆ ಸರಿಯಾಗಿ ಎಚ್ಚರದಿಂದಿರಬೇಕು. ಒಂದು ವೇಳೆ ಮೂರು ದಿನಗಳಲ್ಲಿ ರಿಪೋರ್ಟ್‌ ಮಾಡಿದರೆ ಹಣ ವಾಪಸ್‌ ಮಾಡಲಾಗುತ್ತದೆ

ದೂರು ನೀಡಿದರೆ ಹಣ ವಾಪಸ್

ತನ್ನ ಗ್ರಾಹಕರಿಗೆ ಮಹತ್ವದ ಸೂಚನೆ ನಿಡಿರುವ SBI, ಎಟಿಎಂ ಸ್ಕಿಮ್ಮಿಂಗ್ ನಿಂದಾಗಿ ಗ್ರಾಹಕರು ಹಣ ಕಳೆದುಕೊಂಡರೆ ಈ ಬಗ್ಗೆ ದೂರು ನೀಡಿದ ಮೂರು ದಿನಗಳಲ್ಲಿ ಹಣ ವಾಪಸ್ ಮಾಡಲಾಗುತ್ತದೆ ಎಂದು ಹೇಳಿದೆ. ಎಟಿಎಂ ಕಾರಣಕ್ಕಾಗಿ ಹಣ ಕಳೆದುಕೊಂಡರೆ SBI ಪೂರ್ಣ ಹಣ ಪಾವತಿಸಲಿದೆ. ಗ್ರಾಹಕರ ನಿರ್ಲಕ್ಷದಿಂದ ಹಣ ಕಳುವಾದರೆ ಬ್ಯಾಂಕ್ ಹೊಣೆಯಲ್ಲ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ.

ಹಣ ಕಳೆದುಕೊಂಡರೆ ಏನು ಮಾಡಬೇಕು?

ವಂಚಕರಿಂದ ಹಣ ಕಳೆದುಕೊಂಡ ಗ್ರಾಹಕರು ನೇರವಾಗಿ, ಫೋನ್‌ ಮೂಲಕ ಅಥವಾ ಎಸ್‌ಎಂಎಸ್‌, ಟ್ವಿಟ್ಟರ್‌ ಮೂಲಕವೂ ದೂರು ದಾಖಲಿಸಲು ಅವಕಾಶವಿದೆ. “Problem’ ಎಂದು ಟೈಪ್‌ ಮಾಡಿ 9212500888 ಸಂಖ್ಯೆಗೆ ಎಸ್‌ಂಎಸ್‌ ಕಳಿಸಬೇಕು. ಇಲ್ಲವೇ, ಟ್ವಿಟರ್‌ ಪುಟವನ್ನು ತೆರೆದು Twitter@SBICard_Connect ಖಾತೆಗೆ ತೆರಳಿ ದೂರನ್ನು ದಾಖಲಿಸಬಹುದು. ಈ ಕಾಲ್ ಸೆಂಟರ್ ದಿನದ 24 ಗಂಟೆಗಳು ಕಾರ್ಯನಿರತವಾಗಿರುತ್ತದೆ. ಇದರಲ್ಲಿ ಏನಾದರು ಎಸ್‌ಬಿಐನ ಎಟಿಎಂನಲ್ಲಿಯೇ ತೊಡಕಿದ್ದರೆ, ವಂಚನೆ ಬಗೆಗೆ ಗ್ರಾಹಕರು ದೂರು ನೀಡದೇ ಹೋದರೂ, ಪೂರ್ಣ ಹಣವನ್ನು ಬ್ಯಾಂಕ್‌ ವಿತರಿಸುತ್ತದೆ. ಗ್ರಾಹಕರ ನಿರ್ಲಕ್ಷ್ಯದಿಂದ ಹಣ ಕಳವಾದರೆ, ಬ್ಯಾಂಕ್‌ ಹೊಣೆಗಾರ ಆಗುವುದಿಲ್ಲ ತಿಳಿಸಿದೆ.

Also read: ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ ವಂಚನೆ ತಡೆಯಲು, RBI ನಿಂದ ಹೊಸ ಡಿಜಿಟಲ್ ಟೋಕನ್ ಪದ್ಧತಿ ಜಾರಿಗೆ..