ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಗ್ರಾಹಕರಿಗೆ ಭರ್ಜರಿ ಕೊಡುಗೆ; ಬರಿ 100 ರೂ. ಗೆ 5 ಲೀಟರ್ ಪೆಟ್ರೋಲ್..

0
864

ದೇಶದಲ್ಲಿ ಹೆಚ್ಚು ವಾಸ್ತವ್ಯಹೊಂದಿರುವ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹರನ್ನು ಸೆಳೆಯಲು ವಿವಿಧ ಕೊಡುಗೆಯನ್ನು ನೀಡುತ್ತಿದೆ. ಇದರಿಂದ ಗ್ರಾಹಕರ ಅಚ್ಚುಮೆಚ್ಚಿನ ಬ್ಯಾಂಕ್ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. ಹಾಗೆಯೇ ವಿವಿಧ ತರಹದ ಸಾಲ ಸೌಲಭ್ಯ, ಮತ್ತು ಹಣ ಹೂಡಿಕೆದಾರರ ಬಡಿಯಲ್ಲಿ ಬೇರೆಯಾವ ಬ್ಯಾಂಕ್-ಗಳು ನೀಡದ ಬಡ್ಡಿಯನ್ನು ನೀಡಿ ದೇಶದ ತುಂಬೆಲ್ಲ ಹೆಸರು ಮಾಡಿದೆ. ಈಗ ಮತ್ತೊಂದು ಕೊಡುಗೆಯನ್ನು ನೀಡುವ ಸಲುವಾಗಿ ತನ್ನ ಗ್ರಾಹಕರಿಗೆ 5 ಲೀಟರ್ ವರೆಗೆ ಉಚಿತ ಪಟ್ರೋಲ್ ನೀಡುತ್ತಿದೆ.

ಹೌದು ಈ ಹಿಂದೆ ಗ್ರಾಹಕರನ್ನು ಸೆಳೆಯಲು TEZ, phone pay, paytem ಹೀಗೆ ಹಲವಾರು ಕಂಪನಿಗಳು ತಮ್ಮ app ಬಳಕೆ ಮಾಡಿದರಿಗೆ ಒಂದು ಲೀಟರ್ ಉಚಿತ ಪೆಟ್ರೋಲ್ ನೀಡಿ ಹೆಸರು ಮಾಡುತ್ತಿವೆ. ಅದೇ ರೀತಿಯಲ್ಲಿ ಎಸ್, ಬಿ, ಐ ಕೂಡ ಇದೀಗ ತನ್ನ ಗ್ರಾಹಕರಿಗೆ ಭರ್ಜರಿ ಆಫರ್‌ವೊಂದನ್ನು ನೀಡಿದೆ. ಬೇರೆ ಕಂಪನಿಗಳು 1 ಲೀಟರ್ ಪೆಟ್ರೋಲ್ ನೀಡಿದರೆ. sbi ತನ್ನ ಗ್ರಾಹಕರಿಗೆಲ್ಲಾ ಉಚಿತವಾಗಿ 5 ಲೀಟರ್ ಪೆಟ್ರೋಲ್ ನೀಡಲು ಸಿದ್ಧವಾಗಿದೆ! ಗ್ರಾಹಕರು 100 ರು. ಪೆಟ್ರೋಲ್ ಖರೀದಿಸಿದರೆ 5 ಲೀಟರ್ ಉಚಿತ ಪೆಟ್ರೋಲ್ ಪಡೆಯಬಹುದು.

ಈ ಕೊಡುಗೆಯನ್ನು ತನ್ನ ಟ್ವಿಟ್ಟರ್ ಅಕೌಂಟ್‌ನಲ್ಲಿ ಪ್ರಕಟಿಸಿದ ಎಸ್‌ಬಿಐ ಬೀಮ್ ಪೇ ಆ್ಯಪ್ ಮೂಲಕ ಪೇ ಮಾಡಿ 100 ರು. ಪೆಟ್ರೋಲ್ ಕೊಂಡಲ್ಲಿ ಈ ಆಫರ್ ದೊರೆಯಲಿದೆ. ಡಿಸೆಂಬರ್ 15ರವರೆಗೆ ಈ ಭರ್ಜರಿ ಆಫರ್‌ಗೆ ಸಮಯಾವಕಾಶ ಇರಲಿದೆ. ಈ ಹಿಂದೆ ನವೆಂಬರ್ 23ರವರೆಗೆ ಇದ್ದ ಆಫರ್‌ನ ಸಮಯಾವಕಾಶವನ್ನೂ ವಿಸ್ತರಿಸಲಾಗಿದೆ, ಎಂದು ಹೇಳಿದೆ.

ಉಚಿತ ಪೆಟ್ರೋಲ್ ಹೇಗೆ ಪಡೆಯುವುದು?

ನೀವು ಇಂಡಿಯನ್ ಆಯಿಲ್ ರೀಟೇಲರ್‌ಗಳಿಂದ ಪೆಟ್ರೋಲ್ ಕೊಳ್ಳಬೇಕು. pyatem ನಲ್ಲಿ ಹಣ ಪಾವತಿ ಮಾಡುವ ರೀತಿಯಲ್ಲಿ ಭೀಮ್ ಯುಪಿಐ ಮೂಲಕ ಹಣ ಪೇ ಮಾಡಬೇಕು. ಹಾಗೆಯೇ ಕನಿಷ್ಠ 100 ರೂ. ವರೆಗೆ ಪೆಟ್ರೋಲ್ ಖರೀದಿಸಬೇಕು. ಪೆಟ್ರೋಲ್ ಖರಿಧಿಸಿದ ನಂತರ 9222222084 ಸಂಖ್ಯೆಗೆ <UPI Reference No. (12-Digit)> <DDMM> ಟೈಪ್ ಮಾಡಿ ಸಂದೇಶ ಕಳುಹಿಸಿ. ಈ ಸಂದೇಶಕ್ಕೆ ಚಾರ್ಜ್ ಅನ್ವಯವಾಗುತ್ತದೆ. ನಂತರ ಕಷ್ಟಮರ್ ಕೇರ್ ಸಂಖ್ಯೆ 1800 22 8888ಕ್ಕೆ ಕರೆ ಮಾಡಬಹುದು. ಇದು ಟೋಲ್ ಫ್ರೀಯಾಗಿರುತ್ತದೆ. ಈ ಯೋಜನೆ ಡಿಸೆಂಬರ್ 15ಕ್ಕೆ ಕೊನೆಯಾಗಲಿದೆ. ಡಿಸೆಂಬರ್ 15ರ ಮಧ್ಯರಾತ್ರಿವರೆಗೂ ಆಫರ್ ಮುಂದುವರಿಯಲಿದೆ. ಗ್ರಾಹಕರು ಈ SBI ಕೊಡುಗೆಯನ್ನು ಮಿಸ್ ಮಾಡದೆ ಪಡೆಯರಿ.