ಎಸ್‏ಬಿಐ ಗ್ರಾಹಕರಿಗೆ ಸಂತಸದ ಸುದ್ದಿ, ಇಂದಿನಿಂದಲೇ SBI ಎಫ್ ಡಿ ಬಡ್ಡಿ ದರ ಏರಿಕೆ;

0
315

ದೇಶದ ಅತಿ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ದೀರ್ಘಾವಧಿ ನಿಶ್ಚಿತ ಠೇವಣಿಯ (ಎಫ್ ಡಿ) ಬಡ್ಡಿ ದರಗಳನ್ನು ಪರಿಷ್ಕರಿಸಿದೆ. ಚಿಲ್ಲರೆ ದೇಶೀಯ ಠೇವಣಿ(ಒಂದು ಕೋಟಿ ರೂ.ಗಿಂತ ಕಡಿಮೆ) ಯ ಮೇಲೆ ಬಡ್ಡಿದರಗಳನ್ನು ಬ್ಯಾಂಕ್ ಪರಿಷ್ಕರಿಸಿದ್ದು ಇಂದು ಇಂದಿನಿಂದಲೇ ಈ ಹೊಸ ದರ ಜಾರಿಗೆ ಬರಲಿದೆ. ಒಂದು ಕೋಟಿ ರೂ. ಗಿಂತ ಕಡಿಮೆ ದೀರ್ಘಾವಧಿ ನಿಶ್ಚಿತ ಠೇವಣಿಗಳಿಗೆ ಈ ಹಿಂದೆ ಶೇ. 6.25 ಬಡ್ಡಿ ನೀಡಲಾಗುತ್ತಿತ್ತು. ಆದರೆ ಇನ್ನು ಹೊಸ ದರದಂತೆ ಒಂದು ವರ್ಷದ ಠೇವಣಿಗೆ ಶೇ. 0.05 ರಿಂದ ಶೇ. 0.10ರ ವರೆಗೆ ಅಥವಾ 5 ರಿಂದ 10 ಪಾಯಿಂಟ್ಸ್ ಗಳ ವರೆಗೆ ಬಡ್ಡಿದರದಲ್ಲಿ ಏರಿಕೆಯಾಗಿದೆ. ಇನ್ನು ಹಿರಿಯ ನಾಗರಿಕರು ಸಹ ನಿಶ್ಚಿತ ಠೇವಣಿ ಬಡ್ಡಿ ದರಗಳ ಏರಿಕೆ ಖುಷಿಯನ್ನು ಪಡೆಯಬಹುದಾಗಿದೆ.

ಎರಡರಿಂದ ಹತ್ತು ವರ್ಷಗಳ ಅವಧಿಗೆ ಠೇವಣಿ ಇಟ್ಟ ಹಿರಿಯ ನಾಗರಿಕರು ಈ ಹಿಂದೆ ಶೇ.6.50 ಬಡ್ಡಿ ಪಡೆಯುತ್ತಿದ್ದರು ಆದರೆ ನೂತನ ಬಡ್ಡಿ ದರದ ಅನುಸಾರ ಅವರು ಮುಂದಿನ ದಿನಗಳಲ್ಲಿ ಶೇ.7 ಬಡ್ಡಿ ಪಡೆಯಲಿದ್ದಾರೆ. ಹಾಗೆಯೇ ಒಂದು ವರ್ಷ ಅವಧಿಯ ಠೇವಣಿ ಇರಿಸಿದ ಹಿರಿಯ ನಾಗರಿಕರು ಈ ಹಿಂದೆ ಪಡೆಯುತ್ತಿದ್ದ ಶೇ. 6.75ರ ಬಡ್ಡಿಯ ಹೊರತಾಗಿ ಶೇ.6.9 ಬಡ್ಡಿ ಪಡೆಯುತ್ತಾರೆ.

ಒಂದು ಕೋಟಿಯಿಂದ ಹತ್ತು ಕೋಟಿ ರೂ. ದೇಶೀಯ ಬೃಹತ್ ಅವಧಿಯ ಠೇವಣಿಗಳ ಮೇಲೆ ಒಂದು ವರ್ಷದಿಂದ 455 ದಿನಗಳ ಅವಧಿಗೆ ಶೇ.6.7-6.8 ಬಡ್ಡಿ ಸಿಗಲಿದೆ. ಐದರಿಂದ ಹತ್ತು ವರ್ಷಗಳ ಅವಧಿಗೆ ಈ ಬೃಹತ್ ಠೇವಣಿಗೆ ಶೇ. 7.35-7.35 ಬಡ್ಡಿ ದೊರೆಯಲಿದೆ. ಒಂದರಿಂದ ಹತ್ತು ಕೋಟಿಯವರೆಗೆ ಠೇವಣಿ ಇಡುವ ಹಿರಿಯ ನಾಗರಿಕರಿಗೆ ಕ್ರಮವಾಗಿ ಬಡ್ಡಿ ಪಡೆಯಲಿದ್ದಾರೆ. ಇದರಿಂದ ಗ್ರಾಹಕರು SBI ನಿಯಮವನ್ನು ಸ್ವಾಗತಿಸಿ ತಮ್ಮ ನಂಬಿಕೆಯ ನೆಚ್ಚಿನ ಬ್ಯಾಂಕ್ ಎನ್ನುವಲ್ಲಿ ಯಾವುದೇ ಅನುಮಾನವಿಲ್ಲ. ಇನ್ನೂ sbi ತಂದ ಹೊಸ ಬಡ್ಡಿದರದ ಕ್ರಮಗಳು ಹೀಗಿವೆ.

ಸಾಮಾನ್ಯ ನಾಗರಿಕರ ಠೇವಣಿಗಳ ಹೊಸ ಬಡ್ಡಿದರ:

7 ರಿಂದ 45 ದಿನಗಳು-5.75-5.75
46 ರಿಂದ 179 ದಿನಗಳು-6.25-6.25
180 ರಿಂದ 210 ದಿನಗಳು-6.35-6.35
211 ರಿಂದ 1 ವರ್ಷದ ಒಳಗೆ-6.4-6.4
1 ವರ್ಷದಿಂದ 2 ವರ್ಷದ ಒಳಗೆ-6.7-6.8
2 ವರ್ಷದಿಂದ 3 ವರ್ಷಗಳ ಒಳಗೆ-6.75 -6.8
3 ರಿಂದ 5 ವರ್ಷಗಳ ಒಳಗೆ-6.8-6.8
5 ವರ್ಷದಿಂದ 10 ವರ್ಷಗಳ ಒಳಗೆ-6.85-6.85

ಹಿರಿಯ ನಾಗರಿಕರ ಠೇವಣಿಗಳ ಹೊಸ ಬಡ್ಡಿದರ:

7 ರಿಂದ 45 ದಿನಗಳು-6.25-6.25.
46 ರಿಂದ 179 ದಿನಗಳು-6.75-6.75.
180 ರಿಂದ 210 ದಿನಗಳು-6.85-6.85.
211 ರಿಂದ 1 ವರ್ಷದ ಒಳಗೆ-6.9-6.9.
1 ವರ್ಷದಿಂದ 2 ವರ್ಷದ ಒಳಗೆ-7.2-7.3.
2 ವರ್ಷದಿಂದ 3 ವರ್ಷಗಳ ಒಳಗೆ-7.25-7.3.
3 ರಿಂದ 5 ವರ್ಷಗಳ ಒಳಗೆ-7.3-7.3.
5 ವರ್ಷದಿಂದ 10 ವರ್ಷಗಳ ಒಳಗೆ-7.35-7.35.

ಅಷ್ಟೇಅಲ್ಲದೆ SBI ನೌಕರರಿಗೆ ಮತ್ತು ಪಿಂಚಣಿದಾರರಿಗೆ ಈ ಮೇಲಿನ ಬಡ್ಡಿದರಕ್ಕಿಂತ ಶೇ.1 ರಷ್ಟು ಹೆಚ್ಚಿನ ಬಡ್ಡಿದರ ಅನ್ವಯವಾಗುತ್ತದೆ ಎಂದು ಎಸ್‌ಬಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.