ಸದ್ಯದಲ್ಲೇ ಬಂದ್ ಆಗಲಿವೆ ATM ಕಾರ್ಡ್; ಸಂಪೂರ್ಣ ಡೆಬಿಟ್ ಕಾರ್ಡ್ ಸೇವೆ ಸ್ಥಗಿತಕ್ಕೆ ಮುಂದಾದ ಎಸ್ ಬಿ ಐ, ಹಾಗಾದ್ರೆ ಮುಂದೇನು? ಇಲ್ಲಿದೆ ಮಾಹಿತಿ..

0
683

ದೇಶದಲ್ಲೇ ಹೆಚ್ಚು ಗ್ರಾಹಕರನ್ನು ಹೊಂದಿರುವ ಹೆಗ್ಗಳಿಕೆ ಪಡೆದು ಅತೀ ದೊಡ್ಡ ಬ್ಯಾಂಕಿಂಗ್ ಸಂಸ್ಥೆಯಾಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ. ಸದ್ಯದಲ್ಲೇ ತನ್ನ ATM ಕಾರ್ಡ್ ಸೇವೆಗಳನ್ನು ಸ್ಥಗಿತಗೊಳಿಸುವುದಾಗಿ ಹೇಳಿದ್ದು, ಪ್ಲಾಸ್ಟಿಕ್ ಡೆಬಿಟ್ ಕಾರ್ಡ್ ಗಳನ್ನು ನಿಲ್ಲಿಸುವ ನಿಟ್ಟಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ಡಿಜಿಟಲ್ ಪಾವತಿ ಸೇವೆಯನ್ನು ಉತ್ತೇಜಿಸಲು ಎಸ್‍ಬಿಐ ಮುಂದಾಗಿದೆ. ಈ ಎಲ್ಲ ಯೋಜನೆಯಲ್ಲಿ ಬ್ಯಾಂಕ್ ವೇಗವಾಗಿ ಕಾರ್ಯನಿರ್ವಹಿಸುತ್ತಿದೆ. ಜೊತೆಗೆ ಎಸ್‍ಬಿಐ ಎಲ್ಲಾ ಎಟಿಎಂ ಕಾರ್ಡ್ ಗಳನ್ನು 18 ತಿಂಗಳ ನಂತರ ಸಂಪೂರ್ಣವಾಗಿ ಮುಚ್ಚುವ ಗುರಿಯನ್ನು ಹೊಂದಿದೆ.

Also read: ಫೇಸ್ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಿಗೆ ಆಧಾರ್‌ ಜೋಡಣೆ ಕಡ್ಡಾಯ? ಕೇಂದ್ರಕ್ಕೆ ಸುಪ್ರೀಂನಿಂದ ನೋಟಿಸ್ ಜಾರಿ.!

ATM ಕಾರ್ಡ್ ಸೇವೆಗಳನ್ನು ಸ್ಥಗಿತ?

ಹೌದು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ ಬಿಐ) ಶೀಘ್ರದಲ್ಲೇ ತನ್ನ ಎಲ್ಲ ಡೆಬಿಟ್ ಕಾರ್ಡ್ ಸೇವೆಗಳನ್ನು ಸ್ಥಗಿತಗೊಳಿಸುವುದಾಗಿ ಹೇಳಿದೆ. ಮುಂಬರುವ ದಿನಗಳಲ್ಲಿ ಡೆಬಿಟ್‌ ಕಾರ್ಡ್‌ಗಳ ಬಳಕೆಯನ್ನು ಕ್ರಮೇಣ ಸ್ಥಗಿತಗೊಳಿಸಲು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ಉದ್ದೇಶಿಸಿದ್ದು, ಎಟಿಎಂಗಳಿಂದ ನಗದು ಪಡೆಯಲು, ವ್ಯಾಪಾರ ವಹಿವಾಟಿಗೆ ಹಣ ಪಾವತಿಸಲು ಬ್ಯಾಂಕ್‌ ನ ಅಸಂಖ್ಯ ಗ್ರಾಹಕರು ಡೆಬಿಟ್‌ ಕಾರ್ಡ್‌ ಗಳನ್ನೇ ನೆಚ್ಚಿಕೊಂಡಿದ್ದರೂ, ನಗದುರಹಿತ (ಡಿಜಿಟಲ್‌) ಪಾವತಿ ಸೇವೆ ಉತ್ತೇಜಿಸಲು ಮತ್ತು ಪ್ಲಾಸ್ಟಿಕ್‌ (ಡೆಬಿಟ್‌) ಕಾರ್ಡ್‌ಗಳನ್ನು ಬಳಕೆಯಿಂದ ಕೈಬಿಡಲು ಎಸ್ ಬಿಐ ಈ ನಿರ್ಧಾರ ಕೈಗೊಂಡಿದೆ.

Also read: ಇನ್ಮುಂದೆ ಅಂಚೆ ಕಚೇರಿಯಲ್ಲಿ ಸಿಗಲಿದೆ ಸಾಲ; ಬ್ಯಾಂಕ್ ನ ಎಲ್ಲ ಸೇವೆಗಳು ಈಗ ಅಂಚೆ ಕಚೇರಿಯಲ್ಲಿ ಲಭ್ಯ!!

ಅದರಂತೆ ದೇಶದಲ್ಲಿ 90 ಕೋಟಿ ಡೆಬಿಟ್ ಕಾರ್ಡ್‍ಗಳು ಮತ್ತು 3 ಕೋಟಿ ಕ್ರೆಡಿಟ್ ಕಾರ್ಡ್‍ಗಳಿವೆ. ಒಂದೂವರೆ ವರ್ಷದ ನಂತರ ಈ ಕಾರ್ಡ್ ಗಳು ಕಾರ್ಯನಿರ್ವಹಿಸುವುದನ್ನು
ನಿಲ್ಲಿಸಲಿವೆ. ಈ ಮೂಲಕ ಡಿಜಿಟಲ್ ಪಾವತಿ ಸೇವೆ ಮಾತ್ರ ಕಾರ್ಯನಿರ್ವಹಿಸಲಿದೆ ಎಂದು ಎಸ್‍ಬಿಐ ಅಧ್ಯಕ್ಷ ರಜನೀಶ್ ಕುಮಾರ್ ತಿಳಿಸಿದ್ದಾರೆ. ಡೆಬಿಟ್ ಕಾರ್ಡ್ ಮುಕ್ತ ದೇಶವನ್ನಾಗಿ ಮಾಡುವಲ್ಲಿ ಯೋನೊ ಆ್ಯಪ್ (You Only Need one -YONO) ಪ್ರಮುಖ ಪಾತ್ರ ವಹಿಸಲಿದೆ. ಯೋನೊ ಮೂಲಕ ಎಟಿಎಂ ಯಂತ್ರಗಳಿಂದ ಹಣವನ್ನು ಡ್ರಾ ಮಾಡಬಹುದು ಹಾಗೂ ಶಾಪಿಂಗ್ ಕೂಡ ಮಾಡಬಹುದಾಗಿದೆ. ಬ್ಯಾಂಕ್ ಈಗಾಗಲೇ 68,000 ಯೋನೊ ಕ್ಯಾಶ್ ಪಾಯಿಂಟ್‍ಗಳನ್ನು ತೆರೆದಿದೆ ಎಂದು ಮಾಹಿತಿ ನೀಡಿದ್ದಾರೆ.

ಏನಿದು ಯೋನೊ ಕ್ಯಾಶ್?

Also read: ಆಧಾರ್ ಕಾರ್ಡ್-ನಲ್ಲಿ ವಿಳಾಸ ಬದಲಿಸಲು ಆಧಾರ್ ಕೇಂದ್ರಕ್ಕೇ ಹೋಗಿ ಗಂಟೆಗಟ್ಟಲೆ ಕಾದು ನಿಲ್ಲಬೇಕಿಲ್ಲ; ನೀವೇ ಆನ್ಲೈನ್ ಮೂಲಕ ಬದಲಾಯಿಸಬಹುದು!

ಎಸ್‍ಬಿಐ 2019 ಮಾರ್ಚ್ ನಿಂದಲೇ ಯೋನೊ ಕ್ಯಾಶ್ ಸೇವೆಯನ್ನು ಪ್ರಾರಂಭಿಸಿದೆ. ಇದು ಗ್ರಾಹಕರಿಗೆ ಡೆಬಿಟ್ ಕಾರ್ಡ್ ಇಲ್ಲದೆ ಹಣವನ್ನು ಹಿಂಪಡೆಯಲು ಅನುವು
ಮಾಡಿಕೊಡುತ್ತದೆ. ಇದು ಸುಲಭ ಮತ್ತು ಸುರಕ್ಷಿತವಾಗಿದೆ. ಆರಂಭದಲ್ಲಿ ಈ ಸೌಲಭ್ಯವು 16,500 ಎಟಿಎಂಗಳಲ್ಲಿ ಲಭ್ಯವಿತ್ತು. ಇದನ್ನು SBI ಗ್ರಾಹಕರು ತಮ್ಮ ಮೊಬೈಲ್‍ನಲ್ಲಿ
ಯೋನೊ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಬೇಕು. ಬಳಿಕ ಅದರಲ್ಲಿರುವ You Only Need one -YONO ನಲ್ಲಿರುವ ಕ್ವಿಕ್ ಲಿಂಕ್ ವಿಭಾಗದಲ್ಲಿ ಯೋನೊ ಕ್ಯಾಷ್ ವಿಭಾಗಕ್ಕೆ ಹೋಗಿ ಹಣ ಪಡೆಯುವ ಪ್ರಕ್ರಿಯೆ ಆರಂಭಿಸಬೇಕು. ಬಳಿಕ 6 ಅಂಕಿಯ ರಹಸ್ಯ ಸಂಖ್ಯೆ(ಯೋನೊ ಕ್ಯಾಷ್ ಪಿನ್) ನಮೂದಿಸಬೇಕು. ಇದಕ್ಕೆ ಪ್ರತಿಯಾಗಿ ಗ್ರಾಹಕರ ಮೊಬೈಲ್‍ಗೆ 6 ಅಂಕಿಯ ಇನ್ನೊಂದು ಸಂದೇಶ (OTP) ಎಸ್‍ಎಂಎಸ್ ಮೂಲಕ ಬರುತ್ತದೆ. ಹತ್ತಿರದಲ್ಲಿರುವ ಯೋನೊ ಕ್ಯಾಷ್ ಪಾಯಿಂಟ್ ಎಟಿಎಂನಲ್ಲಿ ಕ್ಯಾಷ್ ಪಿನ್ ಹಾಗೂ ಎಸ್‍ಎಂಎಸ್ ಮೂಲಕ ಬಂದಿರುವ ಸಂಖ್ಯೆಯನ್ನು ನಮೂದಿಸಿ ಹಣ ಪಡೆಯಬಹುದು. ಇದರಿಂದ ATM ಬಳಕೆಗಿಂತ ಸುಗಮವಾಗಲಿದೆ ಎಂದು ಹೇಳಿದ್ದಾರೆ.