ಈ ಬ್ಯಾಂಕುಗಳ ಚೆಕ್ ಬುಕ್ಸ್ ಡಿ.31 ರಂದು ಅಮಾನ್ಯಗೊಳ್ಳಲಿವೆ, ಈ ಬ್ಯಾಂಕುಗಳಲ್ಲಿ ನಿಮ್ಮ ಖಾತೆಯಿದ್ದರೆ ತಕ್ಷಣ ಬ್ಯಾಂಕ್-ಗೆ ಭೇಟಿ ನೀಡಿ..

0
2790

ಎಸ್ಬಿಐ ಸಹಾಯಕ ಬ್ಯಾಂಕ್ಗಳ ಚೆಕ್ ಪುಸ್ತಕಗಳು ಡಿಸೆಂಬರ್ 31ರಂದು ತಮ್ಮ ಮೌಲ್ಯವನ್ನು ಕಳೆದುಕೊಳ್ಳಲಿದೆ. ಎಸ್ಬಿಐ ಸಹಾಯಕ ಬ್ಯಾಂಕ್ಗಳಾಗಿರುವ ಭಾರತೀಯ ಮಹಿಳಾ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸ್ಟೇಟ್ ಬ್ಯಾಂಕ್ ಆಫ್ ಬಿಕಾನೆರ್ ಹಾಗೂ ಜೈಪುರ್, ಸ್ಟೇಟ್ ಬ್ಯಾಂಕ್ ಆಫ್ ರಾಯ್ಪುರ್, ಸ್ಟೇಟ್ ಬ್ಯಾಂಕ್ ಆಫ್ ಟ್ರಾವಂಕೂರ್, ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ನ ಚೆಕ್ಬುಕ್ಗಳು ಡಿಸೆಂಬರ್ 31ರಿಂದ ಕಾರ್ಯನಿರ್ವಹಿಸುವುದಿಲ್ಲ.

ಈ ಬ್ಯಾಂಕ್ಗಳು ಎಸ್ಬಿಐನಲ್ಲಿ ವಿಲೀನಗೊಂಡ ಪರಿಣಾಮ ಎಸ್ಬಿಐ ತನ್ನ ಸುಮಾರು 1,300 ಶಾಖೆಗಳ ಹೆಸರು ಹಾಗೂ ಐಎಫ್ಎಸ್ಸಿ ಕೋಡ ಅನ್ನು ಬದಲಾಯಿಸಿತ್ತು. ಮುಂಬೈ, ದೆಹಲಿ, ಬೆಂಗಳೂರು, ಚೆನ್ನೈ, ಹೈದರಾಬಾದ್, ಕೊಲ್ಕತ್ತಾ , ಲಕ್ನೋ ನಗರಗಳಲ್ಲಿರುವ ಬ್ಯಾಂಕ್ ಶಾಖೆಯ ಹೆಸರನ್ನು ಬದಲಾಯಿಸಲಾಗಿದೆ.

ಈ ಎಲ್ಲಾ ಬ್ಯಾಂಕ್ಗಳ ಗ್ರಾಹಕರು ಹೊಸ ವರ್ಷಕ್ಕೆ ಹೊಸ ಐಎಫ್ಎಸ್ಸಿ ಕೋಡ್ ಜೊತೆಗೆ ಹೊಸ ಚೆಕ್ಬುಕ್ ಅನ್ನು ಪಡೆಯಬೇಕು. ಈ ಹಿಂದೆಯೆ ಬ್ಯಾಂಕ್ಗಳು ಎಸ್ಬಿಐನಲ್ಲಿ ವಿಲೀನಗೊಂಡ ಪರಿಣಾಮ ಸೆಪ್ಟೆಂಬರ್ 30ರಿಂದ ಹಳೆಯ ಚೆಕ್ ಪುಸ್ತಕಕ್ಕೆ ಮಾನ್ಯತೆ ಇಲ್ಲ ಎಂದು ತಿಳಿಸಿತ್ತು. ಆದರೆ ಗ್ರಾಹಕರ ಅನುಕೂಲದ ದೃಷ್ಟಿಯಿಂದ ಹೊಸ ಚೆಕ್ ಬುಕ್ ಪಡೆಯಲು ಡಿ. 31ರ ವರೆಗೆ ಗಡುವು ವಿಸ್ತರಿಸಬೇಕೆಂದು ಆರ್ಬಿಐ ಸೂಚನೆ ನೀಡಿತ್ತು. ಇದರಂತೆ ಬ್ಯಾಂಕ್ ಡಿ.31ರ ವರೆಗೆ ಹೊಸ ಚೆಕ್ ಬುಕ್ಗಳನ್ನು ಪಡೆಯಲು ಅವಕಾಶ ಕಲ್ಪಿಸಿತ್ತು.

ಇನ್ನು ಹೊಸ ಚೆಕ್ ಬುಕ್ ದೊರೆಯುವವರೆಗೆ ಎಟಿಎಂ ಅಥವಾ ಮೊಬೈಲ್ ಬ್ಯಾಂಕಿಂಗ್ ಬಳಸಬಹುದಾಗಿದೆ. ಎಸ್ಬಿಐನ ಸಹಾಯಕ ಬ್ಯಾಂಕ್ನಲ್ಲಿ ಖಾತೆ ಹೊಂದಿದ್ದರೆ, ಹೊಸದಾಗಿ ರಿಜಿಸ್ಟರ್ ಮಾಡುವ ಅಗತ್ಯವಿಲ್ಲ. ವೆಬ್ಸೈಟ್ನಲ್ಲಿ ಲಾಗಿನ್ ಹೆಸರು ಹಾಗೂ ಪಾಸ್ವರ್ಡ್ ಅದೇ ಉಳಿದಿರುತ್ತದೆ ಎಂದು ತಿಳಿಸಲಾಗಿದೆ.