ಲಕ್ಷಾಂತರ ರುಪಾಯಿ ಸಂಬಳ ನೀಡುವ ಸ್ಟೇಟ್​ ಬ್ಯಾಂಕ್ ಆಫ್​ ಇಂಡಿಯಾ ಸ್ಪೆಷಲಿಸ್ಟ್​ ಕ್ಯಾಡರ್​ ಆಫೀಸರ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆಯಾಗಿದೆ!!

0
602

ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ. ಸ್ಟೇಟ್​ ಬ್ಯಾಂಕ್ ಆಫ್​ ಇಂಡಿಯಾ ಸ್ಪೆಷಲಿಸ್ಟ್​ ಕ್ಯಾಡರ್​ ಆಫೀಸರ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಜನವರಿ 30 ರ ಒಳಗಾಗಿ ಅರ್ಜಿ ಸಲ್ಲಿಸಬೇಕು. ಅಭ್ಯರ್ಥಿಗಳನ್ನು ನೇರ ನೇಮಕಾತಿ ಮೂಲಕ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ 15 ಲಕ್ಷದಿಂದ 52 ಲಕ್ಷದವರೆಗೆ ವಾರ್ಷೀಕ ವೇತನ ಪ್ಯಾಕೇಜು ನೀಡಲಾಗುತ್ತದೆ.

Also read: SSLC ಪಾಸಾದ ಅಭ್ಯರ್ಥಿಗಳಿಗೆ ಇಂಡಿಯನ್ ರೈಲ್ವೆ ಇಲಾಖೆಯಲ್ಲಿ ಕಾನ್ಸ್​ಸ್ಟೇಬಲ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

ಹುದ್ದೆಗೆ ಸಂಬಂಧಪಟ್ಟ ಮಾಹಿತಿ:

ಸಂಸ್ಥೆ: ಸ್ಟೇಟ್​ ಬ್ಯಾಂಕ್ ಆಫ್​ ಇಂಡಿಯಾ

ಹುದ್ದೆಯ ಹೆಸರು: ಸ್ಪೆಷಲಿಸ್ಟ್​ ಕ್ಯಾಡರ್​ ಆಫೀಸರ್

ವಿದ್ಯಾರ್ಹತೆ: ಆಯಾ ಹುದ್ದೆಗಳಿಗೆ ಸಂಬಂಧಪಟ್ಟಂತೆ

ಅರ್ಜಿ ಶುಲ್ಕ: ಸಾಮಾನ್ಯ ವರ್ಗಕ್ಕೆ- 600 ರೂ. ಮೀಸಲಾತಿ ವರ್ಗಕ್ಕೆ-100 ರೂ.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಜನವರಿ 30

ಆಯ್ಕೆ ಪ್ರಕ್ರಿಯೆ:

ಸಂದರ್ಶನದಲ್ಲಿ ಪಾಲ್ಗೊಂಡ ಅಭ್ಯರ್ಥಿಗಳ ಕಾರ್ಯಕ್ಷಮತೆ ಮತ್ತು ತಿಳುವಳಿಕೆಯ ಆಧಾರದಲ್ಲಿ ಆಯ್ಕೆ ನಡೆಯಲಿದೆ. ಈ ಇಂಟರ್​​ವ್ಯೂನಲ್ಲಿ ಒಂದೇ ರೀತಿಯಾಗಿ ಅಭ್ಯರ್ಥಿಗಳು ಯಶಸ್ವಿಯಾದರೆ, ವಯಸ್ಸಿನ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ:

ಸ್ಟೇಟ್ ಬ್ಯಾಂಕ್ ಅಧಿಕೃತ ವೆಬ್​ಸೈಟ್​ www.sbi.co.in.ಗೆ ಭೇಟಿ ನೀಡಿ.

ಇಲ್ಲಿ ನಿಮ್ಮ ವೈಯಕ್ತಿಕ ವಿವರಗಳನ್ನು ನಮೂದಿಸಿ ನೋಂದಣಿ ಮಾಡಿಕೊಳ್ಳಿ. ಹಾಗೆಯೇ ನಿಮ್ಮ ಪಾಸ್​ಪೋರ್ಟ್​ ಸೈಜಿನ ಫೋಟೋವನ್ನು ಮತ್ತು ಸಹಿಯನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ. ಅಗತ್ಯವಿರುವ ವಿವರಗಳನ್ನು ಅರ್ಜಿಯಲ್ಲಿ ಭರ್ತಿ ಮಾಡಿ. ಅಪ್ಲಿಕೇಶನ್ ಶುಲ್ಕವನ್ನು ಪಾವತಿಸುವ ಮೂಲಕ ಅಪ್ಲಿಕೇಶನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.

ಹೆಚ್ಚಿನ ಮಾಹಿತಿಗಾಗಿ: ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ವೆಬ್​ಸೈಟ್​ www.sbi.co.in ಗೆ ಭೇಟಿ ನೀಡಿ.