ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ CRPF ಯೋಧರ ಸಾಲ ಮನ್ನಾ ಮಾಡಿದ ಭಾರತೀಯ ಸ್ಟೇಟ್‌ ಬ್ಯಾಂಕ್‌..

0
535

ಜಮ್ಮುಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ಆತ್ಮಹತ್ಯಾ ದಾಳಿಯಲ್ಲಿ ಭಾರತದ ವೀರ ಯೋಧರು ಹುತಾತ್ಮರಾಗಿದ್ದ ಸುದ್ದಿ ಇಡಿ ದೇಶದವನ್ನು ನಡುಗಿಸಿ ಪಾಪಿಗಳ ವಿರುದ್ದ ಕೆಚ್ಚೆಯದೆ ಇದ ಹೋರಾಡಲು ದೇಶವೇ ಒಂದಾಗಿದೆ. ಪಾಪಿಗಳ ಮೋಸದ ದಾಳಿಯಲ್ಲಿ ದೇಶಕ್ಕೆ ಪ್ರಾಣವನ್ನು ತ್ಯಾಗಮಾಡಿದ ಯೋಧರ ಕುಟುಂಬಕ್ಕೆ ಧನ ಸಹಾಯ ಮಾಡಲು ಹಲವರು ಮುಂದೆ ಬಂದರು ಮತ್ತು ಮತ್ತು ಮೂಲ ರಾಜ್ಯಗಳಿಂದ ಕೂಡ ಸಹಾಯ ದೊರೆತ್ತಿದೆ. ಹಾಗೆಯೇ ವಿವಿಧ ಚಿತ್ರ ನಟರು ಮತ್ತು ಸಂಘ ಸಂಸ್ಥೆಗಳು ಕೂಡ ಸಹಾಯ ಧನವನ್ನು ನೀಡಿ ಮಾನವಿತೆ ಮೆರೆದಿವೆ. ಇದೆಲ್ಲದರ ನಡುವೆ SBI ಮೃತಪಟ್ಟ ಯೋಧರಿಗೆ ದೊಡ್ಡ ಮಟ್ಟದಲ್ಲಿ ಸಹಾಯ ಮಾಡಲು ಮುಂದೆ ಬಂದಿದೆ.

Also read: ಯಾವುದೇ ದಾಖಲೆ ಇಲ್ಲದೆ ಮಂಡ್ಯ ಯೋಧ ಹುತಾತ್ಮ; ಕುಟುಂಬಕ್ಕೆ ವಿಮೆ ಹಣ ನೀಡಿ ಮಾನವೀಯತೆ ಮೆರೆದ LIC

ಹೌದು ದೇಶದಲ್ಲೇ ಹೆಚ್ಚು ಘಟಕಗಳನ್ನು ಹೊಂದಿರುವ ಭಾರತೀಯ ನೆಚ್ಚಿನ ಬ್ಯಾಂಕ್-ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪುಲ್ವಾಮಾ ಉಗ್ರ ದಾಳಿ ವೇಳೆ ಹುತಾತ್ಮರಾದ 23 ಸಿಆರ್ ಪಿಎಫ್ ಸಿಬ್ಬಂದಿಯ ಬಾಕಿ ಸಾಲ ಮನ್ನಾಗೆ ಪ್ರಕ್ರಿಯೆ ಆರಂಭಿಸಿದೆ. ಹುತಾತ್ಮರಾದವರ ಪೈಕಿ 23 ಸಿಆರ್ ಪಿಎಫ್ ಸಿಬ್ಬಂದಿ ಬ್ಯಾಂಕ್ ನಿಂದ ಸಾಲ ಪಡೆದಿದ್ದರು. ಅವರಿಂದ ಬಾಕಿ ಇದ್ದ ಎಲ್ಲ ಸಾಲವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮನ್ನಾ ಮಾಡಲಾಗಿದೆ ಎಂದು ಬ್ಯಾಂಕ್ ನ ಹೇಳಿಕೆಯಲ್ಲಿ ತಿಳಿಸಲಾಗಿದೆ. ಎಲ್ಲ ಸಿಆರ್ ಪಿಎಫ್ ಸಿಬ್ಬಂದಿಯೂ ರಕ್ಷಣಾ ವೇತನ ಪ್ಯಾಕೇಜ್ ಅಡಿಯಲ್ಲಿ ಬ್ಯಾಂಕ್ ನ ಗ್ರಾಹಕರು. ಅವರಿಗೆ ತಲಾ 30 ಲಕ್ಷ ರುಪಾಯಿ ವಿಮೆಯನ್ನು ಕೂಡ ಒದಗಿಸುತ್ತದೆ. ಎಂದು ತಿಳಿಸಿದೆ.
ಈ ವೇಳೆ ಮಾತನಾಡಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧ್ಯಕ್ಷ ರಜನೀಶ್ ಕುಮಾರ್. ನಮ್ಮ ದೇಶವನ್ನು ರಕ್ಷಿಸುವ ಸೈನಿಕರು ಹುತಾತ್ಮರಾಗಿರುವುದು ತೀವ್ರ ದುಃಖಕರ ಸಂಗತಿ. ಈಗಾಗಲೇ ತುಂಬಲಾರದ ನಷ್ಟ ಅನುಭವಿಸಿರುವ ಸೈನಿಕರ ಕುಟುಂಬಕ್ಕೆ ಗೌರವ ನೀಡಲು ಸಿಆರ್ ಪಿಎಫ್ ಸಿಬ್ಬಂದಿಯ ಬಾಕಿ ಸಾಲ ಮನ್ನಾ ನಮ್ಮ ಬ್ಯಾಂಕ್ ಕಡೆಯಿಂದ ಮಾಡಲಾಗಿದೆ. ಇದು ನಮ್ಮ ಕಡೆಯಿಂದ ಸಲ್ಲಿಸಿದ ಒಂದು ಗೌರವ ಎಂದು ಹೇಳಿದ್ದಾರೆ.

Also read: ನಿಮಗೂ ಹುತಾತ್ಮ ಸೈನಿಕರ ಕುಟುಂಬಗಳಿಗೆ ಧನ ಸಹಾಯ ಮಾಡುವ ಇಚ್ಛೆ ಇದ್ರೆ ಈ ಆ್ಯಪ್​ ಮೂಲಕ ಹುತಾತ್ಮ ಸೈನಿಕರ ಕುಟುಂಬಕ್ಕೆ ನೆರವಾಗಿ..

ಇದೆ ರೀತಿ ವೀರಮರಣವಪ್ಪಿದ ಮಂಡ್ಯದ ಯೋಧ ಗುರು ಅವರ ಕುಟುಂಬಕ್ಕೆ ಭಾರತೀಯ ಜೀವ ವಿಮಾ ನಿಗಮ ತಕ್ಷಣ ವಿಮಾ ಮೊತ್ತವನ್ನು ತಲುಪಿಸಿತ್ತು. ಯಾವುದೇ ದಾಖಲೆ, ಮರಣ ಪ್ರಮಾಣ ಪತ್ರವನ್ನೂ ಕೇಳದೆ LIC ಮಂಡ್ಯ ಬ್ರಾಂಚ್ ನಿಂದ ನಾಮಿನಿ ಖಾತೆಗೆ 3,82,199 ರೂ ವಿಮೆ ಮರಣದಾವೆ ಮೊತ್ತವನ್ನು ನೀಡಿದೆ. ಪಾಲಿಸಿ ನಂ 725974544ನಲ್ಲಿ ಯೋಧ ಗುರು ವಿಮೆ ಮಾಡಿಸಿದ್ದು, ಅವರು ಹುತಾತ್ಮರಾಗಿದ್ದ ವಿಚಾರ ತಿಳಿಯುತ್ತಿದ್ದಂತೆ ನಾಮಿನಿ ಖಾತೆಗೆ ಹಣ ವರ್ಗಾವಣೆ ಮಾಡಿತ್ತು. ಎಲ್‌ಐಸಿ ಕಾರ್ಯಕ್ಕೆ ಸಾರ್ವಜನಿಕರು ಕೃತಜ್ಞತೆ ಸಲ್ಲಿಸಿದ್ದರು ಮತ್ತು ದೇಶದಲ್ಲೆಡೆ ವ್ಯಾಪಕ ಮೆಚ್ಚುಗೆ ಪಡೆದಿತ್ತು. ಇದೆ ಸಾಲಿನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವೀರ ಹುತಾತ್ಮ ಯೋಧರ ಬಾಕಿ ಸಾಲವನ್ನು ಮನ್ನಾ ಮಾಡಿ ದುಃಖದಲ್ಲಿರುವ ಯೋಧರ ಕುಟುಂಬಕ್ಕೆ ಸ್ವಲ್ಪು ನೆಮ್ಮದಿ ನೀಡಿದೆ.

Also read: ಹೇಡಿಗಳಂತೆ ನಮ್ಮ ಸಿ.ಆರ್.ಪಿ.ಎಫ್. ಮೇಲೆ ದಾಳಿ ಮಾಡಿದ ಜೈಶ್-ಎ-ಮಹಮ್ಮದ್-ನ ನಾಯಕನನ್ನು ಭಾರತ ಸೆರೆ ಹಿಡಿದು ಬಿಟ್ಟು ಕಳುಸಿದ ರೋಚಕ ಕಥೆ ಇಲ್ಲಿದೆ ಓದಿ!!

ಇದೆ ರೀತಿ ಪ್ರತಿಯೊಬ್ಬ ಯೋಧನು ದೇಶಕ್ಕಾಗಿ ಪ್ರಾಣವನ್ನು ತ್ಯಾಗಮಾಡಿದ್ದಾಗ ವಿವಿಧ ಹಣಕಾಸು ಸಂಸ್ಥೆಗಳು ಮತ್ತು ಬ್ಯಾಂಕ್-ಗಳು ಮುಂದೆ ಬಂದು ಅವರ ಕುಟುಂಬಕ್ಕೆ ಸಾಲ ನೀಡುವುದು ಮತ್ತು ಯೋಧರು ಪಡೆದ ಸಾಲವನ್ನು ಮನ್ನಾ ಮಾಡುವುದು ಮಾಡಿದರೆ ಹುತಾತ್ಮ ಸೈನಿಕರ ಆತ್ಮಕ್ಕೆ ಶಾಂತಿ ಸಿಕ್ಕಂತಾಗುತ್ತೆ.