ಎಸ್ ಬಿ ಐನಲ್ಲಿ ವಿಶೇಷ ಅಧಿಕಾರಿ ಹುದ್ದೆಗಳಿವೆ, ಅರ್ಜಿ ಆಹ್ವಾನ

0
938

ಬೆಂಗಳೂರು: ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ವಿಶೇಷ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಜೂನ್ 06ರಿಂದಲೇ ಆನ್ ಲೈನ್ ನಲ್ಲಿ ಅರ್ಜಿ ಲಭ್ಯವಿದ್ದು, ಜುಲೈ 20 ಅರ್ಜಿ ಸಲ್ಲಿಸಲು ಕೊನೆ ದಿನಾಂಕವಾಗಿದೆ. ಅರ್ಹ ಅಭ್ಯರ್ಥಿಗಳು ಒಂದು ಹುದ್ದೆಗೆ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.

ನೋಂದಣಿ ಕಾರ್ಯವು ಅರ್ಜಿ ಶುಲ್ಕಪಾವತಿ(ಆನ್ ಲೈನ್ ಮೂಲಕ ಅಥವಾ ನೇರ ಶುಲ್ಕ ಪಾವತಿ) ಖಾತ್ರಿ ಆದ ಬಳಿಕ ಪೂರ್ಣಗೊಳ್ಳಲಿದೆ. ಹುದ್ದೆಗಳ ವಿವರ :

* ಉಪಾಧ್ಯಕ್ಷ, ಸಿಆರ್ ಎಂ (ವಯೋಮಿತಿ 45 ವರ್ಷ) (ವಿದ್ಯಾರ್ಹತೆ : ಎಂಬಿಎ ಮಾರ್ಕೆಟಿಂಗ್ ಅಥವಾ ಎಂಸಿಎ), (ಅನುಭವ: 10 ವರ್ಷ)

* ಉಪಾಧ್ಯಕ್ಷ, ಕಸ್ಟಮರ್ ಅನಾಲಿಟಿಕ್ (ವಯೋಮಿತಿ 45 ವರ್ಷ) (ವಿದ್ಯಾರ್ಹತೆ : ಎಂಬಿಎ ಮಾರ್ಕೆಟಿಂಗ್/ಫಿನಾನ್ಸ್/ಅಪರೇಷನ್ಸ್ ಅಥವಾ ಎಂಸಿಎ), (ಅನುಭವ: 10 ವರ್ಷ)

 * ಉಪಾಧ್ಯಕ್ಷ, ಟೆಕ್ನಿಕಲ್ ಆರ್ಕಿಟೆಕ್ಟ್ (ವಯೋಮಿತಿ 45 ವರ್ಷ) (ವಿದ್ಯಾರ್ಹತೆ : ಬಿಇ/ಬಿಟೆಕ್/ಎಂಎಸ್ಸಿ/ಎಂಟೆಕ್), (ಅನುಭವ: 10 ವರ್ಷ) ಅರ್ಜಿ ಸಲ್ಲಿಸಲು : https://www.sbi.co.in/careers ಗೆ ಭೇಟಿ ನೀಡಿ Latest Announcements ನಲ್ಲಿ ಸಂಬಂಧಪಟ್ಟ ಒಂದು ಹುದ್ದೆಯ ಅರ್ಜಿಯನ್ನು ಭರ್ತಿ ಮಾಡಿ ರಸೀತಿಯನ್ನು ಪ್ರಿಂಟ್ ಔಟ್ ತೆಗೆದುಕೊಳ್ಳಿ. ಅರ್ಜಿ ಶುಲ್ಕ 600 ರು ಗಳನ್ನು ಆನ್ ಲೈನ್ ನಲ್ಲೇ ಪಾವತಿಸಬಹುದು.

* ಅರ್ಜಿ ಸಲ್ಲಿಸಲು ಆನ್ ಲೈನ್ ನೋಂದಣಿ ಆರಂಭ : 06/07/2016

 * ಆನ್ ಲೈನ್ ಮೂಲಕ ನೋಂದಣಿ ಹಾಗೂ ಅರ್ಜಿ ಶುಲ್ಕ ಸಲ್ಲಿಸಲು ಕೊನೆ ದಿನಾಂಕ : 20/07/2016

 * ಅರ್ಜಿ ಸಲ್ಲಿಸಲು ಪೋಸ್ಟ್ ಮೂಲಕ ಕೊನೆ ದಿನಾಂಕ : 270/07/2016

ಅರ್ಜಿ ವಿಳಾಸ: Central Recruitment & Promotion Department, Corporate Centre, 3rd Floor, Atlanta Building, Nariman Point, Mumbai – 400 021

Source: kannada.oneindia