EVM-ಗಳಲ್ಲಿ ಮೋಸ ನಡೆಯುತ್ತಿದೆ ಎಂಬ ಕೇಸ್ ಹಾಕಿದ್ದ ಕಾಂಗ್ರೆಸ್ಗೆ ಛಿಮಾರಿ ಹಾಕಿದ ಸುಪ್ರೀಮ್ ಕೋರ್ಟ್…

0
414

ಗುಜರಾತ್ ಚುನಾವಣೆಯಲ್ಲಿ ಬಳಸಿದ ಇವಿಎಂಗಳನ್ನು ಮತ ಎಣಿಕೆ ವೇಳೆ ಪರಿಶೀಲಿಸುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಬೇಕೆಂದು ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಸಾರಾಸಗಟಾಗಿ ತಿರಸ್ಕರಿಸಿದೆ. ಇದರಿಂದ ಪಕ್ಷಕ್ಕೆ ಮುಖಭಂಗವಾಗಿದೆ.

ಶೇ.25ರಷ್ಟು ವಿವಿಪ್ಯಾಟ್‌ ಕಾಗದ ದಾಖಲೆಯನ್ನು ಎವಿಎಂ ವೋಟ್‌ಗಳ ಜತೆಗೆ ಪರಾಂಬರಿಸಿ ಮತ ಎಣಿಕೆ ಮಾಡುವಂತೆ ಚನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಕಾಂಗ್ರೆಸ್‌ ಪಕ್ಷ ಸುಪ್ರೀಂ ಕೋರ್ಟ್‌ ಮೆಟ್ಟಲೇರಿತ್ತು. ಕಾಂಗ್ರೆಸ್‌ ಪಕ್ಷ ಸಲ್ಲಿಸಿರುವ ಈ ಮನವಿಯಲ್ಲಿ ಯಾವುದೇ ಹುರುಳಿಲ್ಲ ಮತ್ತು ಇದು ವಿಚಾರಣೆಗೆ ಯೋಗ್ಯವಾಗಿಲ್ಲ ಎಂದು ಹೇಳಿ ಮನವಿಯನ್ನು ಸುಪ್ರೀಂ ಕೋರ್ಟ್‌ ವಜಾ ಮಾಡಿದೆ. ಗುಜರಾತ್‌ ಕಾಂಗ್ರೆಸ್‌ ಈ ಬಗ್ಗೆ ಚುನಾವಣಾ ಸುಧಾರಣೆಗಳನ್ನು ಕೋರಿ ರಿಟ್‌ ಅರ್ಜಿ ಸಲ್ಲಿಸಿ ಸರ್ವೋಚ್ಚ ನ್ಯಾಯಾಲಯಕ್ಕೆ ಬರಬೇಕು ಎಂದು ಹೇಳಿದೆ.

ಇವಿಎಂಗಳನ್ನು ತಿರುಚಲಾಗುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್‌ ಪಕ್ಷದ ಗುಜರಾತ್‌ ಘಟಕ ತನ್ನ ಕಳವಳವನ್ನು ವ್ಯಕ್ತಪಡಿಸಿತ್ತು. ಇವಿಎಂ ಗೆ ಬ್ಲೂ ಟೂತ್‌ ಉಪಕರಣವನ್ನು ಜೋಡಿಸಲಾಗಿದೆ ಎಂದೂ ಅದು ದೂರಿತ್ತು. ಇವಿಎಂ ತಿರುಚುವಿಕೆ ಕುರಿತಾದ ಕಾಂಗ್ರೆಸ್‌ ಪಕ್ಷದ ಆರೋಪವನ್ನು ಸಾರಾಸಗಟು ತಿರಸ್ಕರಿಸಿದ ಬಿಜೆಪಿ, ಚುನಾವಣೆಯಲ್ಲಿ ಸೋತು ಮಣ್ಣುಪಾಲಾಗುವ ಭೀತಿಯಲ್ಲಿ ಕಾಂಗ್ರೆಸ್‌ ಕಂಡುಕೊಂಡಿರುವ ನೆಪವಿದು ಎಂದಿತ್ತು.