ಪ್ರತಿಯೊಬ್ಬ ಸ್ವಾಭಿಮಾನಿ ಭಾರತೀಯನಿಗೂ ಪ್ರೇರಣೆ ಸುಭಾಷ್ ಚಂದ್ರ ಬೋಸ್!!

0
1169

ಸುಭಾಷ್ ಚಂದ್ರ ಭೋಸ್

ಸುಭಾಷಚಂದ್ರ ಭೋಸ್ 1887 ಜನವರಿ 23 ರಂದು ಒರಿಸ್ಸಾದ ಕಟಕನಲ್ಲಿ ಜನಿಸಿದರು. ವಕೀಲರಾಗಿದ್ದ ಅವರ ತಂದೆ ಜಾನಕಿನಾಥ ಬೋಸ್ ಬಂಗಾಳದಿಂದ ಒರಿಸ್ಸಾಕ್ಕೆ Àಲಸೆ ಬಂದಿದ್ದರು. ಅವರು ಪರಿಶ್ರಮದ ದುಡಿಮೆಯ ಮೂಲP ಕುಟುಂಬದ ಆರ್ಥಿಕ ಸ್ಥಿತಿಗತಿ ಸುಧಾರಿಸಿದರು. ಅಮ್ಮ ಪ್ರಭಾವತಿ ದೇವಿ ಹಟಖೋಲಾದ ಸುಪರಿಚಿತ ದತ್ತ ಮನೆತನಕ್ಕೆ ಸೇರಿದವರಾಗಿದ್ದರು. ಆಕೆ ಪುಟ್ಟ ಸುಭಾಷರಲ್ಲಿ ಭಾರತೀಯ ಪರಂಪರೆ ಮತ್ತು ಸಂಸ್ಕೃತಿಯ ಭಾವನೆಗಳನ್ನು ಅರಳಿಸಿದರು. ಸ್ವಾಮಿ ವಿವೇಕಾನಂದ ಮತ್ತು ಶ್ರೀ ರಾಮಕೃಷ್ಣರ ಬೋಧನೆಗಳು ಸುಭಾಷರ ಪಾಲಿಗೆ ಸ್ಪೋರ್ತಿಯಾಗಿದ್ದವು. ಅವರ ತಂದೆ ತಮ್ಮ ಎಲ್ಲಾ ಎಂಟ ಮಕ್ಕಳಿಗೆ ಸಂಭಾವ್ಯ ಅತ್ಯುತ್ತಮ ಶಿಕ್ಷಣ ಕೊಡಿಸಿದ್ದರು. ಅವರು ಪಾಶ್ಚಾತ್ಯ ಸಂಸ್ಕೃತೀಕರಣವನ್ನು ವಿದ್ಯಾಭ್ಯಾಸದಲ್ಲಿ ಮಾತ್ರ ಉತ್ತೇಜಿಸುತ್ತಿದ್ದರು.

ಸುಭಾಷ ತಮ್ಮ ರಾವೆನಷಾ ಕಾಲೇಜಿಯೇಟ ಸ್ಕೊಲನ ಮುಖ್ಯೋಪಾಧ್ಯಾಯ ಬೇಣಿ ಮಾಧವ ದಾಸರನ್ನು ಆz-Àರ್ಶ ಎಂದು ಪರಿಗಣಿಸಿದ್ದರು. ಸುಭಾಷ ತಮ್ಮ ಪ್ರಾಂತ್ಯಕ್ಕೆ 2 ನೇ ರ್?ಯಾಂಕ. ಪಡೆದು ಮೆಟ್ರಿಕ್ಯುಲೇಶನ್ ತೇರ್ಗಡೆ ಹೊಂದಿದರು. ನಂತರ ಅವರು 1913ರಲ್ಲಿ ಪ್ರೆಸಿಡೆನ್ಸಿ ಕಾಲೇ- ಜಿಗೆ ಸೇರಿದರು. ಆ ಕಾಲೇಜಿನ ಬ್ರಿಟಿಷ್ ಪ್ರಾಂಶುಪಾಲ ತನ್ನ ಭಾಷಣವೊಂದರಲ್ಲಿ ಭಾರತೀಯರ ಬಗ್ಗೆ ಅವಹೇಳನಕಾರಿ ಟೀಕೆಗಳನ್ನು ಮಾಡಿದ್ದರಿಂದ ಕುಪಿತಗೊಂಡು ಸುಭಾಷ್ ಅವರ ಮೇಲೆ ಹಲ್ಲೆ ನಡೆಯಲು ತಂತ್ರ ರೂಪಿಸಿದರು. ಇದ-ರಿಂದ ಅವರನ್ನು ಕಾಲೇಜಿನಿಂದ ಉಚ್ಛಾಟಿಸಲಾಯಿತು.

ಬಿಎ ಮುಗಿಸಿದ ಬಳಿಕ ಸುಭಾಷ್ 1919 ಸೆಪ್ಟೆಂಬರ್‍ನಲ್ಲಿ ಐಸಿಎಸ್ ಪರೀಕ್ಷೆಗಾಗಿ ಕೇಂಬ್ರಿಡ್ಜ್ ತೆರಳಿದರು. ಅವರು ಇಂಗ್ಲಿಷ್, ಯುರೋಪಿನ ಇತಿಹಾಸ, ಎಕನಾಮಿಕ್ಷ್, ಜಿಯಾಗ್ರಪಿ, ಪೆÇಲಿಟಿಕಲ್, ಲಾ ಪಿಲಾಸಫಿ ಮತ್ತು ಸಂಸ್ಕೃತ ಓದಿದರು. ಸುಭಾಷ್ 1921 ಜುಲೈನಲ್ಲಿ ಭಾರತಕ್ಕೆ ಮರಳಿದರು. ಅವರು ಬಾಂಬೆಯಲ್ಲಿ ಗಾಂಧೀಜಿ ಮತ್ತು ಸಿ.ಆರ್. ದಾಸರನ್ನು ಭೇಟಿ ಮಾಡಿದ ಬಳಿಕ ಕಾಂಗ್ರೆಸ್Àಗೆ ಸೇರ್ಪಡೆಗೊಳ್ಳಲು ನಿರ್ಧರಿಸಿದರು.