ಇತಿಹಾಸ ಸೃಷ್ಟಿಸಿ ಗೆಲುವು ಸಾಧಿಸಿರುವ ಮೋದಿ ಸರ್ಕಾರ ತಕ್ಷಣ ಜಾರಿಗೊಳಿಸುವ ಯೋಜನೆಗಳೇನು? ಎನ್​ಡಿಎ ಸರ್ಕಾರದ ಮುಂದಿರುವ ದೊಡ್ಡ ಸವಾಲುಗಳು ಯಾವವು??

0
254

ದೇಶದಲ್ಲಿ ಹೆಚ್ಚು ಸ್ಥಾನ ಗೆದ್ದಿರುವ ನರೇಂದ್ರ ಮೋದಿ ಸರ್ಕಾರ ಭರ್ಜರಿ ಬಹುಮತ ಪಡೆದುಕೊಳ್ಳುತ್ತಿದೆ. ಬಿಜೆಪಿ ಪಕ್ಷವೇ ಏಕಾಂಗಿಯಾಗಿ ಬಹುಮತ ಗಳಿಸುವಷ್ಟು ಸಂಖ್ಯಾಬಲ ಹೊಂದಿದೆ. 48 ವರ್ಷಗಳ ಬಳಿಕ ಮೊದಲ ಬಾರಿಗೆ ಬಿಜೆಪಿ ಮತ್ತೆ ನೂತನ ಇತಿಹಾಸ ಸೃಷ್ಟಿಸಿದೆ. 1971ರಲ್ಲಿ ಇಂದಿರಾ ಗಾಂಧಿ ಅವರು ಸತತ ಎರಡನೇ ಬಾರಿ ಬಹುಮತದೊಂದಿಗೆ ಪ್ರಧಾನಿಯಾಗಿದ್ದರು. ಈಗ ನರೇಂದ್ರ ಮೋದಿ ಕೂಡ ಅದೇ ಸಾಧನೆ ಮಾಡಿದ್ದಾರೆ. ಈಗ ದೇಶವೇ ಮೋದಿಯವರತ್ತ ನೋಡುತ್ತಿದೆ. ಹಾಗಾದ್ರೆ ಮೋದಿಯವರ ಮುಂದಿರುವ ದೊಡ್ಡ ಸವಾಲುಗಳು ಯಾವವು? ಪ್ರಮಾಣವಚನದ ನಂತರ ದೇಶದ ಜನರಿಗೆ ಏನು ಸಿಹಿ ಸುದ್ದಿ ನೀಡಲಿದ್ದಾರೆ? ಇಲ್ಲಿದೆ ನೋಡಿ ಮಾಹಿತಿ.

Also read: ಭಾರತವನ್ನು ಎದುರು ಹಾಕಿಕೊಂಡ ಪಾಕಿಸ್ಥಾನಕ್ಕೆ ಯಾವ ಗತಿ ಬಂತು? 1 ಲೀ ಹಾಲಿಗೆ 190, ಕೆ.ಜಿ. ಮಟನ್‌ಗೆ 1,100 ರೂ ಬೆಲೆ ಏರಿ ಮಣ್ಣು ತಿನ್ನುವ ಪರಿಸ್ಥಿತಿಯಲ್ಲಿದೆ ಪಾಕ್..

ಹೌದು ನೋಟ್ ಬ್ಯಾನ್, ಜಿಎಸ್​ಟಿ, ನಿರುದ್ಯೋಗ, ಆರ್ಥಿಕ ಹಿನ್ನಡೆ ಇತ್ಯಾದಿ ವೈಫಲ್ಯಗಳನ್ನ ಮುಂದಿಟ್ಟುಕೊಂಡು ವಿಪಕ್ಷಗಳು ಕೇಂದ್ರ ಸರಕಾರವನ್ನು ಹತ್ತಿಕಲು ಮುಂದಾಗಿದವು ಆದರು ಕೂಡ ಮೋದಿ ಅಲೆಯಿಂದ ಎನ್​ಡಿಎ ಮೈತ್ರಿಕೂಟ ಭರ್ಜರಿ ಬಹುಮತವನ್ನು ಪಡೆದುಕೊಂಡಿದೆ. ಈಗ ಗೆದ್ದ ಸಂಭ್ರಮದಲ್ಲಿರುವ ಮೋದಿ ಸರ್ಕಾರ ತಕ್ಷಣ ಮೋದಿ ಜಾರಿಗೊಳಿಸುವ ಯೋಜನೆಗಳನ್ನು ಜಾರಿ ತರಲು ಚಿಂತನೆ ನಡೆಸಿದ್ದು, ಈ ಕುರಿತು ಮಾಧ್ಯಮಗಳಲ್ಲೂ ವರದಿಯಾಗಿತ್ತು. ಇದೀಗ ಆ ಯೋಜನೆಗಳನ್ನು ಅಧಿಕಾರಕ್ಕೇರುತ್ತಿದ್ದಂತೆ ಸರ್ಕಾರ ಜಾರಿಗೆ ತರುವುದು ನಿಶ್ಚಿತವಾಗಿದೆ.

ಏನವು ಹೊಸ ಯೋಜನೆಗಳು ಯಾರಿಗಿದೆ ಸಿಹಿ ಸುದ್ದಿ?

1. ಕೃಷಿಕರ ಖಾತೆಗೆ ಸಬ್ಸಿಡಿ ಹಣ;
ಈ ಹಿಂದೆ ಜಾರಿಗೆ ತಂದ 5 ಎಕರೆವರೆಗೆ ಭೂಮಿ ಹೊಂದಿರುವ ರೈತರ ಬ್ಯಾಂಕ್‌ ಖಾತೆಗೆ ವಾರ್ಷಿಕ 6000 ರು. ಜಮೆ ಮಾಡುವ ಯೋಜನೆಯೊಂದನ್ನು ಕೇಂದ್ರ ಸರ್ಕಾರ ಹಿಂದಿನ ಬಜೆಟ್‌ನಲ್ಲಿ ಘೋಷಿಸಿ, ಅದನ್ನು ಜಾರಿಗೆ ಕೂಡ ತಂದಿತ್ತು. ಈ ಯೋಜನೆಯನ್ನು ಇನ್ನಷ್ಟುವಿಸ್ತರಿಸುವ ಉದ್ದೇಶವೂ ಸರ್ಕಾರಕ್ಕೆ ಇದೆ.
2. ವ್ಯಾಪಾರಿಗಳಿಗೆ ಪಿಂಚಣಿ, ಕ್ರೆಡಿಟ್‌ ಕಾರ್ಡ್‌;
ಮುಪ್ಪಿನ ಕಾಲದಲ್ಲಿ ಸಣ್ಣ ಉದ್ಯಮಿಗಳು ಯಾವುದೇ ಆದಾಯ ಹೊಂದದೇ ಎದುರಿಸುವ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಅವರಿಗೆ ಪಿಂಚಣಿ ಯೋಜನೆಯೊಂದನ್ನು ಮತ್ತು ಸಣ್ಣ ಉದ್ಯಮಿಗಳಿಗೆ ಕ್ರೆಡಿಡ್‌ ಕಾರ್ಡ್‌ ಸೌಲಭ್ಯವನ್ನು ಒದಗಿಸುವ ಗುರಿಯನ್ನೂ ಸರ್ಕಾರ ಹೊಂದಿದೆ.
3. ಸಾರ್ವತ್ರಿಕ ಸಾಲ ಮನ್ನಾ ಯೋಜನೆ;
ಸಾಲದ ಸುಳಿಯಲ್ಲಿ ಸಿಲುಕಿರುವ, ಕಡಿಮೆ ಆದಾಯ ಹೊಂದಿರುವ ಬಡವರ ಮೇಲಿನ ಹೊರೆ ತಗ್ಗಿಸಲು ಕೇಂದ್ರ ಸರ್ಕಾರ ‘ಸಾರ್ವತ್ರಿಕ ಸಾಲ ಮನ್ನಾ’ ಯೋಜನೆ ಜಾರಿಗೊಳಿಸುವ ಸಾಧ್ಯತೆ ಇದೆ. ವಾರ್ಷಿಕ 60 ಸಾವಿರ ರೂ. 35 ಸಾವಿರ ರೂ ಅದಕ್ಕಿಂತ ಕಡಿಮೆ ಸಾಲ ಹೊಂದಿರುವರು ಈ ಯೋಜನೆಯ ಫಲಾನುಭವಿಗಳಾಗುತ್ತಾರೆ.
4. ಸಣ್ಣ ಉದ್ಯಮಿಗಳಿಗೆ ಖಾತ್ರಿ ರಹಿತ ಸಾಲ;
ಸಣ್ಣ ಉದ್ಯಮಿಗಳು ಸಾಲ ಪಡೆಯಲು ಎದುರಿಸುತ್ತಿರುವ ಸಮಸ್ಯೆಯನ್ನು ಹೋಗಲಾಡಿಸಲು, ಅವರಿಗೆ 50 ಲಕ್ಷ ರು.ವರೆಗೆ ಖಾತ್ರಿರಹಿತ ಸಾಲ ಒದಗಿಸುವ ಯೋಜನೆಯೊಂದನ್ನು ಹೊಸ ಸರ್ಕಾರ, ಅಧಿಕಾರಕ್ಕೆ ಬಂದ ಕೂಡಲೇ ಘೋಷಿಸುವ ಸಾಧ್ಯತೆ ಇದೆ.
5. ಆದಾಯ ತೆರಿಗೆ ವಿನಾಯ್ತಿ ಮಿತಿ ಹೆಚ್ಚಳ;

ಮಧ್ಯಮ ವರ್ಗದ ಬಹುದಿನದ ಬೇಡಿಕೆಯಾಗಿರುವ ಆದಾಯ ತೆರಿಗೆ ವಿನಾಯ್ತಿ ಮಿತಿ ಹೆಚ್ಚಳ ಬಗ್ಗೆ ಸರ್ಕಾರ ಗಮನ ಹರಿಸಬಹುದು ಎಂಬುವ ವಿಶ್ವಾಸವಿದೆ.

Also read: ರಾಜ್ಯ ಸರ್ಕಾರಿ ನೌಕರರಿಗೆ ಮತ್ತೊಂದು ಸಿಹಿ ಸುದ್ದಿ; ವೈದ್ಯಕೀಯ ವೆಚ್ಚ ಮರುಪಾವತಿ ಮಿತಿ 3 ಲಕ್ಷ ರೂ. ಗೆ ಹೆಚ್ಚಳ ಮಾಡಿ ಹಲವು ಬದಲಾವಣೆ ತಂದ ಸರ್ಕಾರ..

ಯಾವವು ಮೋದಿಯವರ ಮುಂದಿರುವ ಸವಾಲುಗಳು?

1. ರಾಮಮಂದಿರ ನಿರ್ಮಾಣ,
2. ಬೆಲೆಯೇರಿಕೆಗೆ ಕಡಿವಾಣ, ಆರ್ಥಿಕತೆಗೆ ಚೇತರಿಕೆಗೆ ಹೊಸ ಕ್ರಮ
3. ನಿರುದ್ಯೋಗದ ಸಮಸ್ಯೆಗೆ ಮದ್ದು
4. 2023ಕ್ಕೆ ಸ್ಮಾರ್ಟ್‌ಸಿಟಿ ಕನಸು ನನಸು
5. 2022ರೊಳಗೆ ರೈತರ ಆದಾಯ ದ್ವಿಗುಣ
6. ಬುಲೆಟ್‌ ರೈಲು ಯೋಜನೆ
7. ರಾಷ್ಟ್ರೀಯ ನಾಗರಿಕ ನೋಂದಣಿ
8. ಏಕರೂಪದ ನಾಗರಿಕ ಸಂಹಿತೆ
9. ಸಂವಿಧಾನ 370ನೇ ವಿಧಿ ರದ್ದು