ಶಾಲಾ ಶೈಕ್ಷಣಿಕ ದಾಖಲಾತಿ ಪ್ರವೇಶಕ್ಕೆ ಹೊಸ ನಿಯಮ

0
719

ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆ ಹೊರಡಿಸಿರುವ ಪೂರ್ವ ಪ್ರಥಾಮಿಕ ತರಗತಿಗೆ ದಾಖಲಾಗುವ ಮಕ್ಕಳಿಗೆ 3 ವರ್ಷ 10 ತಿಂಗಳು  ತುಂಬಿರಬೇಕೆಂದು ಸಾರ್ವ ಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹರಡಿಸಿದೆ.

ಶೈಕ್ಷಣಿಕ ವರ್ಷದಿನದ ಒಂದನೇ ತರಗತಿಗೆ ದಾಖಾಲಗುವ ಮಕ್ಕಳ ವಯಸ್ಸು ಜೂನ್ ವೇಳೆಗೆ 5 ವರ್ಷ 10 ತಿಂಗಳು ಪೂರ್ಣಗೊಂಡಿರ ಬೇಕು ಹಾಗೇಯೆ ಪೂರ್ವ ಪ್ರಥಾಮಿಕ ತರಗತಿಗೆ ದಾಖಲಾಗುವ ಮಕ್ಕಳಿಗೆ 3 ವರ್ಷ 10 ತಿನಗಳು ತುಬಿರಬೇಕೆಂದು ಸಾರ್ವ ಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹರಡಿಸಿದೆ.

ಮಕ್ಕಳು ಈ ವಯಸ್ಸಿಗೆ ಕಲಿಯಲು ಇನ್ನೂ ಶಕ್ತರಾಗಿರುವುದಿಲ್ಲ ಆದರೆ ಹೊಸ ನಿಯಮದ ಪ್ರಕಾರ 5 ವರ್ಷ 10 ತಿಂಗಳು ಪೂರ್ಣ ಗೊಂಡಿದ್ದರೆ ಮಾತ್ರ ಸಾಲೆಗೆ ದಾಖಲಾತಿ ಸಾಧ್ಯ ಎಂದು ಪ್ರಾಥಮಿಕ ಶಿಕ್ಷಣ ಇಲಾಖೆ ನಿರ್ದೇಶಕ ಎಂ.ಆನಂದ್ ತಿಳಿಸಿದ್ದಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆ ಹೊರಡಿಸಿರುವ ಈ ಆದೇಶ ಜೂನ್ 2017 ರಿಂದ ಕಟ್ಟು ನಿಟ್ಟಾಗಿ ಜಾರಿಗೆ ಬರಲಿದೆ. 2016 – 17ನೇ ಸಾಲಿನಲ್ಲಿ ಈಗಾಗಲೇ ದಾಖಲಾಗಿರುವ ಮಕ್ಕಳಿಗೆ ಈ ನಿಯಮ ಅನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

10ನೇ ತರಗತಿ ಪೂರ್ಣಗೊಳಿಸುವ ವೇಳೆಗೆ ವಿದ್ಯಾರ್ಥಿ ವಯಸ್ಸ 16 ವರ್ಷ ತುಂಬಿರಬೇಕು. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿಯಮದ ಪ್ರಕಾರ, 16 ವರ್ಷದ ಪೂರ್ಣಗೊಂಡಿದ್ದರೆ ಮಾತ್ರ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯಲು ಸಾಧ್ಯ, ಅದ್ದರಿಂದ ಮಕ್ಕಳ ದಾಖಲಾತಿ ವಯೋಮಿತಿಯನ್ನು 5 ವರ್ಷ 10 ತಿಂಗಳು ನಿಗದಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.