ನವಿ ಮುಂಬೈನ ಪ್ಲೇ ಸ್ಕೂಲ್ ನಲ್ಲಿ ಆಯಾಳ ರಾಕ್ಷಸಿ ರೂಪ

0
893

ನವಿ ಮುಂಬೈನ ಖರ್ಗಾರ್‌ ಎಂಬಲ್ಲಿ ಇರುವ ಪೂರ್ವಾ ಪ್ಲೇ ಸ್ಕೂಲ್‌ ಮತ್ತು ನರ್ಸರಿಯಲ್ಲಿನ ಶಿಶು ಆರೈಕೆ ಕೆಲಸಗಾತಿ ಅಫ್ಸಾನಾ ಶೇಖ್‌(30)ಎಂಬಾಕೆ ಶಿಶು ಕೇಂದ್ರದಲ್ಲಿನ 10ತಿಂಗಳ ಮಗುವನ್ನು ಕಾಲಿನಿಂದ ಒದ್ದು ಹಿಂಸಿಸಿ ಗಂಭೀರವಾಗಿ ಕಣ್ಣು ಮತ್ತು ತಲೆಗೆ ಗಾಯಗೊಳಿಸಿದ ಅತ್ಯಂತ ಆಘಾತಕಾರಿ ಘಟನೆ ವರದಿಯಾಗಿದೆ.

ಆಯಾಳ ಈ ಹೇಯ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಇದನ್ನು ದಾಖಲಾಗಿ ಪರಿಗಣಿಸಿ ತನಿಖೆ ನಡೆಸಿದ್ದಾರೆ. ಪೊಲೀಸ್ ಐಪಿಸಿ ಮತ್ತು ಜುವೆನೈಲ್ ಜಸ್ಟೀಸ್ (ಮಕ್ಕಳ ರಕ್ಷಣೆ) ಸೆಕ್ಷನ್ 23 (ಸ್ವಯಂಪ್ರೇರಣೆಯಿಂದ ಪರಮ ಗಾಯ ಉಂಟು) ಕಾಯಿದೆ -2000 ಶೇಖ್ ಮತ್ತು ವಿಭಾಗ 325 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆಯಾ ಹಾಗೂ ಪ್ಲೇ ಸ್ಕೂಲ್ ಮಾಲೀಕರನ್ನು ಪೊಲೀಸರು ಬಂಧಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್ ಸ್ಕೂಲ್ ಮಾಲೀಕರಿಗೆ ಜಾಮೀನು ನೀಡಿದೆ. ಆಯಾ ಮಾತ್ರ ಜೈಲಿನಲ್ಲಿದ್ದಾರೆ.

ನಡೆದ ಘಟನೆ:

ಹೆತ್ತವರು ತಮ್ಮ ಹತ್ತು ತಿಂಗಳ ಮಗುವನ್ನು ಎಂದಿನಂತೆ ಪ್ರಿಯಾಂಕಾ ನಿಕಮ್‌ ಅವರ ಪ್ಲೇ ಸ್ಕೂಲ್‌ ಮತ್ತು ನರ್ಸರಿ ಕೇಂದ್ರದಲ್ಲಿ ಬಿಟ್ಟು ತಮ್ಮ ಉದ್ಯೋಗಕ್ಕೆ ತೆರಳಿದ್ದರು. ಮಗುವಿಗೆ ಗಂಭೀರವಾಗಿ ಗಾಯವಾಗಿರುವ ಬಗ್ಗೆ ಪ್ರಿಯಾಂಕಾ ನಿಕಮ್‌ ಮಗುವಿನ ಹೆತ್ತವರಿಗೆ ತಿಳಿಸಿದ್ದಾರೆ. ಪ್ಲೇ ಸ್ಕೂಲ್‌ಗೆ ತಕ್ಷಣವೇ ಧಾವಿಸಿ ವಿಚಾರಿಸಲಾಗಿದೆ ಮಗುವಿಗೆ ಹೇಗೆ ಗಾಯವಾಯಿತೆಂದು ಕೇಳಿದಾಗ ಪ್ರಿಯಾಂಕಾ ಉತ್ತರಿಸಲು ತಡವರಿಸಿದಳು. ಕೂಡಲೇ ಅನುಮಾನಗೊಂಡ ಹೆತ್ತವರು ಪೊಲೀಸ್‌ ಠಾಣೆಗೆ ದೂರು ನೀಡಿದರು.

ಪೊಲೀಸರು ನರ್ಸರಿ ಕೇಂದ್ರದಲ್ಲಿನ ಸಿಸಿಟಿವಿ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಸಿಸಿಟಿವಿ ಯಲ್ಲಿ ಶಿಶು ಆರೈಕೆ ಸಹಾಯಕಿ ಅಫ್ಸಾನಾ ಮಗುವನ್ನು ಕಾಲಿನಿಂದ ಒದ್ದು ಗಂಭೀರವಾಗಿ ಗಾಯಗೊಳಿಸಿದ ಅತ್ಯಮಾನುಷ ಕೃತ್ಯ ದಾಖಲಾಗಿತ್ತು. ಒಡನೆಯೇ ಪೊಲೀಸರು ನರ್ಸರಿ ಕೇಂದ್ರ ಮಾಲಕಿ ಪ್ರಿಯಾಂಕಾ ಮತ್ತು ಕೆಲಸದಾಕೆ ಅಫ್ಸಾನಾಳನ್ನು ಬಂಧಿಸಿದರು. ಮಗು ವಿಪರೀತವಾಗಿ ಮತ್ತು ನಿರಂತರವಾಗಿ ಅಳುತ್ತಿದ್ದುದೇ ಅಫ್ಸಾನಾ ಳ ಸಿಟ್ಟಿಗೆ ಕಾರಣವಾಗಿತ್ತು. ಸಹನೆ ಕಳೆದುಕೊಂಡ ಆಕೆ ಹತ್ತು ತಿಂಗಳ ಮಗುವನ್ನು ಒದ್ದು, ನೆಲದಲ್ಲಿ ಅತ್ತಿತ್ತ ಬಿಸಾಡಿ, ತೀವ್ರವಾಗಿ ಗಾಯಗೊಳಿಸಿದ್ದಳು.

ಘಟನೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಪಂಕಜಾ ಮುಂಡೆ ಸ್ಪಂದಿಸಿದ್ದಾರೆ. ಇಂತಹ ಸ್ಕೂಲ್‌ಗಳಲ್ಲಿ ಸಿಸಿಟಿವಿ ಅಳವಡಿಸುವುದು ಅವಶ್ಯಕವಾಗಿದೆ ಎಂದಿದ್ದಾರೆ.