“ಖಾರದ ಜೊತೆಗೆ ಆರಂಭ ಮತ್ತು ಸಿಹಿಯ ಜೊತೆಗೆ ಮುಕ್ತಾಯ” ಎಂಬುವುದರ ಹಿಂದಿನ ವೈಜ್ಞಾನಿಕ ಕಾರಣ..!!

0
954

ಪುರಾತನ ಕಾಲದಿಂದಲೂ ನಮ್ಮ ಪೂರ್ವಿಕರು ಆಚರಿಸುತ್ತಿರುವ ಅನೇಕ ಆಚಾರಗಳು, ಸಂಪ್ರದಾಯಗಳು ಇವೆ. ನಮ್ಮ ಸಂಪ್ರದಾಯಗಳಲ್ಲಿ ವೈಜ್ಞಾನಿಕ ಸತ್ಯಗಳಿರುವಂಥವು ಎಷ್ಟೋ ಇವೆ, ಕೆಲವೊಮ್ಮೆ ಸಂಪ್ರದಾಯದಲ್ಲಿ ಅಡಕವಾಗಿರುವ ವೈಜ್ಞಾನಿಕತೆಯನ್ನು ತಿಳಿಯುವ ಗೋಜಿಗೆ ಯಾರು ಹೋಗುವುದಿಲ್ಲ, ಆದರೂ ನಮ್ಮ ಪೂರ್ವಿಕರು ಹೇಳಿರುವ ಅನೇಕ ವಿವರಣೆಗಳಲ್ಲಿ ಬಲವಾದ ವೈಜ್ಞಾನಿಕ ಆಧಾರಗಳನ್ನು ನಾವು ಕಾಣಬಹುದು.

ನಮ್ಮ ಪೂರ್ವಿಕರು ನಮಗೆ ಹೇಳಿರುವುದು ಹೀಗೆ “ಊಟ ಮಾಡುವಾಗ ಖಾರವನ್ನು ಸೇವಿಸಿ ಆರಂಭಿಸಿ, ಮುಕ್ತಾಯ ಮಾಡುವಾಗ ಸಿಹಿಯನ್ನು ಸೇವಿಸಿ” ಎಂದು. ಇದರ ಹಿಂದಿನ ಕಾರಣವೇನೆಂದರೆ, ಖಾರವು ನಮ್ಮ ಹೊಟ್ಟೆಯಲ್ಲಿ ಜೀರ್ಣ ಮಾಡುವಂತಹ ಆಮ್ಲಗಳನ್ನು ಉತ್ಪತ್ತಿ ಮಾಡುತ್ತದೆ ಮತ್ತು ಜೀರ್ಣ ಕ್ರಿಯೆಯನ್ನು ಪ್ರಚೋದಿಸುತ್ತದೆ.

ಇದರಿಂದ ಜೀರ್ಣ ಕ್ರಿಯೆ ಯಾವುದೇ ಅಡೆತಡೆಗಳಿಲ್ಲದೆ ಸಾಗುತ್ತದೆ. ಇನ್ನೂ ಸಿಹಿ ತಿಂಡಿಗಳು ಅಥವಾ ಕಾರ್ಬೋಹೈಡ್ರೇಟ್‍ಗಳು ಜೀರ್ಣ ಕ್ರಿಯೆಯನ್ನು ಕೆಳಗೆ ಎಳೆಯುವ ಸಾಮರ್ಥ್ಯವನ್ನು ಹೊಂದಿವೆ. ಇದರಿಂದಾಗಿ ಜೀರ್ಣವಾದ ಆಹಾರವು ಸರಾಗವಾಗಿ ಕರುಳುಗಳಲ್ಲಿ ಸಾಗಿ ಹೋಗುತ್ತದೆ. ಇದಕ್ಕಾಗಿಯೇ ಸಿಹಿಯನ್ನು ಕಡೆಯಲ್ಲಿ ಸೇವಿಸಿ ಎಂದು ಹೇಳುವುದು.