ಶೋಷಣೆಗೊಳಗಾದರೂ ಮಹಾನ್ ಸಾಧನೆ ಮೆರೆದೆ ಅದ್ಭುತ ವಿಜ್ಞಾನಿ!!!

0
565

ಪೆರ್ಸಿ ಜೂಲಿಯನ್
ಆಫ್ರಿಕನ್ ಅಮೆರಿಕನ್ ರಾಸಾಯನಶಾಸ್ತ್ರಜ್ಞ ಪರ್ಸಿ ಜೂಲಿಯನ್ ಕೊರ್ಟಿಸಾನ್, ಸ್ಟಿರಾಯ್ಡ್ ಹಾಗೂ ಜನನ ನಿಯಂತ್ರಣ ಮಾತ್ರೆ-ಔಷಧಗಳನ್ನು ಕುರಿತ ರಾಸಾಯನಿಕ ರಾಸಾಯನಿಕ ಸಂಶೋಧಕರಲ್ಲಿ ಮೊದಲಿಗರು.1899ರ ಏಪ್ರಿಲ್ 11ರಂದು ಮಾಂಟಗಮೆರಿಯ ಅಲಬಾಮಾದಲ್ಲಿ ಜನಿಸಿದ ಪೆರ್ಸಿ ಲೆವನ್ ಜೂಲಿಯನ್ ಗುಲಾಮನ ಮೊಮ್ಮಗ. ಎಂಟನೇ ಗ್ರೇಡ್‍ನಲ್ಲಿ ಶಾಲೆಗೆ ಸೇರ್ಪಡೆಯಾದರೂ ಕಪ್ಪು ವರ್ಣದ ವಿದ್ಯಾರ್ಥಿಗಳಿಗೆ ಪ್ರೌಢಶಾಲೆಗೆ ಶಾಲೆಗೆ ಪ್ರವೇಶವಿರಲಿಲ್ಲ. ಹಾಗಾಗಿ ಇಂಡಿಯಾನಾದ ಡಿಫ್ಯಾ ಯುನಿವರ್ಸಿಟಿಯಲ್ಲಿ ಸಂಜೆ ಸಮಯದಲ್ಲಿ ಪ್ರೌಢಶಾಲಾ ಮಟ್ಟದ ತರಗತಿಗೆ ಸೇರಿದರು. ಈ ಮಟ್ಟದ ಸ್ಪರ್ಧೆ, ಜನಾಂಗೀಯ ವರ್ಣಭೇದದ ನಡುವೆಯೂ ಕಲಿಯುವುದರಲ್ಲಿ ಅಪಾರ ಆಸಕ್ತಿ ಹೊಂದಿದದ ಜೂಲಿಯನ್ ಪ್ರಥಮ ದರ್ಜೆಯಲ್ಲಿ ಪದವಿ ಪಡೆದು ಫಿ ಬೆಟಾ ಕಪ್ಪಾ ಗೌರವ ತಮ್ಮದಾಗಿಸಿಕೊಂಡರು.

Image result for percy julian

ಕಾಲೇಜು ಶಿಕ್ಷಣದ ತರುವಾಯ ಜೂಲಿಯನ್ ಫಿಸ್ಕ್ ವಿಶ್ವವಿದ್ಯಾಲಯದಲ್ಲಿ ರಸಾಯನಿಕ ಬೋಧಕನ ಹುದ್ಧೆ ಪಡೆದರು. ಸ್ನಾತಕೋತ್ತರ ಪದವಿಗಾಗಿ 1923ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿವೇತನ ದೊರೆಯಿತು. 1931ರಲ್ಲಿ ಆಸ್ಟ್ರಿಯ ವಿಶ್ವವಿದ್ಯಾಲಯದಿಂದ ಪಿಎಚ್‍ಡಿ ಪದವಿ ಪಡೆದರು. ಡಾಕ್ಟರೇಟ್ ಪದವಿಯೊಂದಿಗೆ ಡೆಫ್ಯೂಗೆ ಹಿಂದಿರುಗಿದ ಜೂಲಿಯನ್ ಮತ್ತೆ ಸಂಶೋಧನೆಯಲ್ಲಿ ತೊಡಗಿದರು. ಕಲಬಾರ್ ಬೀನ್‍ನಿಂದ ಗ್ಲುಕೊಮಾ ಚಿಕಿತ್ಸೆಗಾಗಿ ಫಿಸೋಸ್ಟಿಗ್ಮೈನ್ ಸಂಯೋಜಿಸಿ ಅಂತಾರಾಷ್ಟ್ರೀಯ ಖ್ಯಾತಿ ಪಡೆದಿದ್ದ ಜೂಲಿಯನ್‍ಗೆ ಆತನ ಜಾತಿಯ ಕಾರಣದಿಂದ ಪೂರ್ಣಕಾಲಿಕ ಪ್ರಾಧ್ಯಾಪಕ ಹುದ್ದೆ ನೀಡಲು ನಿರಾಕರಿಸಲಾಯಿತು.

Image result for percy julian

ಇದರಿಂದ ನೊಂದ ಜೂಲಿಯನ್ ಬೋಧಕ ಹುದ್ದೆ ತ್ಯಜಿಸಿಲು ನಿರ್ಧರಿಸಿ ರಾಸಾಯನಿಕ ಸಂಸ್ಥೆಯಲ್ಲಿ ಉದ್ಯೋಗ ಅರಸಿದರೂ ಜಾತಿ-ವರ್ಣದ ಕಾರಣದಿಂದಲೇ ಅಲ್ಲೂ ನಿರಾಕರಿಸಲ್ಪಟ್ಟರು. ಅಂತಿಮವಾಗಿ ಗ್ಲಿಡೆನ್ ಕಂಪೆನಿಯಲ್ಲಿ ಲ್ಯಾಬ್ ನಿರ್ದೇಶಕ ಹುದ್ದೆ ದೊರೆತು, ಅಲ್ಲಿ ಜೂಲಿಯನ್ ಏರೋ-ಫೋಮ್ ಕಂಡುಹಿಡಿದರು. ತೈಲ ಮತ್ತು ತೈಲಬೆಂಕಿ ನಂದಿಸಲು ಬಳಸುವ ಸೋಯಾ ಪ್ರೊಟೀನ್‍ನ್ನು ಎರಡನೇ ಮಹಾಯುದ್ಧ ಮತ್ತು ಮತ್ತಿತರ ಸೋಯಾಬೀನ್ ಮೂಲದ ಅನ್ವೇಷಣೆಯಲ್ಲಿ ವ್ಯಾಪಕವಾಗಿ ಬಳಸಲಾಗಿತ್ತು. ಜೂಲಿಯನ್ ತನ್ನ ಬಯೋಮೆಡಿಕಲ್ ಕೆಲಸ ಮುಂದುವರೆಸಿ, ಸೊಯಾಬೀನ್ ಸ್ಟೆರೋಲ್ಗಳನ್ನು ಹೊರ ತೆಗೆಯುವ, ಹಾರ್ಮೋನ್‍ಗಳು ಮತ್ತು ಪ್ರೊಜೆಸ್ಟರಾನ್ ಮತ್ತು ಟೆಸ್ಟೋಸ್ಟೆರಾನ್ ಉತ್ಪಾದಿಸುವುದನ್ನು ಕಂಡುಹಿಡಿದರು.

ಜೂಲಿಯನ್ ತನ್ನದೇ ಆದ ಪ್ರಯೋಗಾಲಯವನ್ನು ಸ್ಥಾಪಿಸಿದರು. 1953ರಲ್ಲಿ ಗ್ಲಿಡನ್ ತೊರೆದ ಜೂಲಿಯನ್ 1954ರಲ್ಲಿ ಸ್ವಂತ ಪ್ರಯೋಗಾಲಯ ಪ್ರಾರಂಭಿಸಿದ. ಜುಲಿಯನ್ ಸಂಶೋಧನಾ ಸಂಸ್ಥೆ ಎಂಬ ಲಾಭರಹಿತ ಸೇವಾಕೇಂದ್ರವನ್ನು ಸ್ಥಾಪಿಸಿದ ನಂತರ 1961ರಲ್ಲಿ ಪ್ರಯೋಗಾಲಯವನ್ನು ಮಾರಾಟ ಮಾಡುವ ಮೂಲಕ ಪ್ರಪ್ರಥಮ ಕರಿಯ ಕೋಟ್ಯಧೀಶನೆನಿಸಿದ ಜೂಲಿಯನ್ 1975ರಲ್ಲಿ ನಿಧನರಾದರು. ಅವರ ರಾಸಾಯನಿಕ ಸಂಶೋಧನೆಗಳು ಗ್ಲುಕೋಮ ಮತ್ತು ಸಂಧಿವಾತ ಗುಣಪಡಿಸಲು ನೆರವಾದವು. ಅವರ ಕಪ್ಪುವರ್ಣ ಜೀವನದ ಪ್ರತಿಯೊಂದು ಹಂತದಲ್ಲಿಯೂ ಸವಾಲಾಗಿದ್ದರೂ ಅವನ್ನೆಲ್ಲ ಎದುರಿಸಿ ಸಂಶೋಧನಾ ಕ್ಷೇತ್ರದಲ್ಲಿ ಪರಿಶ್ರಮ ಪಟ್ಟಿದ್ದರಿಂದ ಇತಿಹಾಸದಲ್ಲಿ ಅತ್ಯಂತ ಪ್ರಭಾವಶಾಲೆ ರಾಸಾಯನಿಕ ಶಾಸ್ತ್ರಜ್ಞನೆನಿಸಿದ್ದಾರೆ.