ಗುಜರಿ ವ್ಯಾಪಾರ ಮಾಡುತ್ತಿದ್ದ ವ್ಯಕ್ತಿ ಕೆಲವೇ ವರ್ಷಗಳಲ್ಲಿ 7000 ಕೋಟಿಯ ಒಡೆಯನಾಗಿ ಜೈಲು ಸೇರಿದ..

0
599

ಕೆಲವು ವ್ಯಕ್ತಿಗಳು ಅದೆಷ್ಟು ಬೇಗ ಸಾವಿರಾರು ಕೋಟಿ ಒಡೆಯರಾಗುತ್ತಾರೆ, ಎನ್ನುವುದು ಯಾರ ಅಳೆತೆಗೂ ಸಿಗದ ವಿಚಾರವಾಗಿದೆ. ಅದೇ ಸಾಲಿನಲ್ಲಿ ಬರುವ ಬೆಂಗಳೂರಿನ ಒಬ್ಬ ವ್ಯಕ್ತಿ ಗುಜರಿ ವ್ಯಾಪಾರಿಯಾಗಿದ್ದು ಬರಿ ಏಳುಎಂಟು ವರ್ಷಗಳಲ್ಲಿ ಮಾಡಿದ ಆಸ್ತಿ ಕೇಳಿದರೆ ಎಲ್ಲರಿಗೂ ದಂಗಾಗಿ ಹೋಗುತ್ತೆ. ಸದ್ಯ ಈತನ ಬಳಿ ಇರುವ ಆಸ್ತಿ ಎಂದರೆ ಬರೋಬರಿ 7000 ಸಾವಿರ ಕೋಟಿಯಂತೆ, ಈತನಿಗೆ 131 ಕೋಟಿ ತೆರಿಗೆ ಕಟ್ಟಲು ಐಟಿ ನೋಟೀಸ್ ನೀಡಿದೆ ಅಂತೆ.

ಹೌದು ಗುಜರಿ ವ್ಯಾಪಾರದಲ್ಲಿ ಇಷ್ಟೊಂದು ಹಣ ಗಳಿಸಲು ಹೇಗೆ ಸಾಧ್ಯ? ಎನ್ನುವ ಪ್ರಶ್ನೆ ಮೂಡುವುದು ಸಾಮಾನ್ಯ. ಅದರಂತೆ ಈತ ಬರಿ ಗುಜರಿ ವ್ಯಾಪಾರ ಮಾಡದೆ. ಜೊತೆಗೆ ಸರಕಾರಿ ಭೂಮಿಯನ್ನು ಹರಾಜಿನಲ್ಲಿ ಖರೀದಿಸುವುದು, ಸಾಲ ಪಾವತಿಸದ ಆಸ್ತಿಗಳನ್ನು ಹರಾಜು ಹಿಡಿಯವುದು ಶುರುಮಾಡಿದ. ಇದರಿಂದ ಇಷ್ಟೊಂದು ಹಣ ಗಳಿಸಿದ ಅದಲ್ಲದೆ. ಈ ವ್ಯವಹಾರದಲ್ಲೇ ವಂಚನೆ ಬೆರೆಸಲು ಆರಂಭಿಸಿದ್ದರಿಂದ ಕ್ರಿಮಿನಲ್‌ ಕೇಸ್‌-ಗಳು ಕೂಡ ಕೇಳಿ ಬಂದಿವೆ. ಈ ಹಿನ್ನಲೆಯಲ್ಲಿ ಸಿಸಿಬಿಯ ತಂಡ ಈತನ ವಂಚನೆ ಹಾಗೂ ಆದಾಯದ ಮೂಲವನ್ನು ತನಿಖೆ ನಡೆಸಲು ಮುಂದಾಗಿತ್ತು.

7 ಕೋಟಿಯ ವಂಚನೆ ಆರೋಪ;

ಕಡಿಮೆ ದಿನಗಳಲ್ಲಿ ಸಾವಿರಾರು ಕೋಟಿ ಹಣ ಗಳಿಸಿದ ಈ ವ್ಯಕ್ತಿ ಕೆಲವು ದಿನಗಳ ಹಿಂದೆ ವಸತಿ ಸಮುಚ್ಛಯ ನಿರ್ಮಾಣಕ್ಕೆ ಭೂಮಿ ನೀಡುವುದಾಗಿ ವಂಚನೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಉಮ್ರಾ ಡೆವಲಪರ್ಸ್ ಮಾಲೀಕ ಯೂಸೂಫ್ ಷರೀಫ್ ಅಲಿಯಾಸ್ ಸ್ಕ್ರಾಪ್ ಬಾಬು ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದರು . ಇಂದ್ರಪ್ರಸ್ಥ ‌ಶೆಲ್ಟರ್ಸ್ ಕಂಪನಿಗೆ ಏಳು ಕೋಟಿ ರೂಪಾಯಿ ಮೋಸ‌ ಮಾಡಿದ ಆರೋಪ ಬಾಬು ಮೇಲಿತ್ತು. ವಸತಿ ಸಮುಚ್ಚಯ ನಿರ್ಮಾಣಕ್ಕೆ ಭೂಮಿ ನೀಡುವುದಾಗಿ ಹಣ ಪಡೆದು ಭೂಮಿ‌ ಬೇರೆಯವರಿಗೆ ನೀಡಿದ್ದ. ಈ ಕುರಿತು ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಅಷ್ಟೇ ಅಲ್ಲದೆ ವಂಚನೆಗೆ ಸಂಬಂಧಪಟ್ಟಂತೆ ಈತನ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಪ್ರಕರಣಗಳೂ ದಾಖಲಾಗಿವೆ. ಈ ಹಿನ್ನಲೆ ಯೂಸೂಪ್ ಷರೀಪ್ ಮನೆ ಹಾಗೂ ಕಚೇರಿ
ಮೇಲೆ ದಾಳಿ ಮಾಡಿದ್ದ ಸಿಸಿಬಿ ದಾಳಿ ವೇಳೆ ಕೋಟ್ಯಂತರ ರೂ ಬೆಲೆ ಬಾಳುವ ಸರ್ಕಾರಿ ಸ್ವತ್ತುಗಳಿಗೆ ಸಂಬಂಧಪಟ್ಟ ದಾಖಲಾತಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ವೇಳೆ ಕೋಟ್ಯಾಂತರ ರೂಪಾಯಿ ಬೆಲೆಯ ಭೂ ದಾಖಲೆ ವಶಕ್ಕೆ ಪಡಿಸಲಾಗಿದೆ. ಕೆಲ ದಿನಗಳ ಹಿಂದೆ ಐಟಿ ಅಧಿಕಾರಿಗಳು ಆರೋಪಿಯ ಮನೆ ಮೇಲೆ ದಾಳಿ ಮಾಡಿದ್ದರು ಎಂದು ತಿಳಿದು ಬಂದಿದೆ.

ಅಮಿತಾಬ್‌ ಬಚ್ಚನ್‌ ಕಾರ್ ಖರೀದಿ?

ನ್ಯಾಯಾಲಯದಲ್ಲೇ ಬಿಲ್ಡಪ್‌ ಕೊಟ್ಟಿದ್ದ ವಂಚನೆ ಪ್ರಕರಣದ ಆರೋಪಿಯು ಬಾಲಿವುಡ್‌ ನಟ ಅಮಿತಾಬ್‌ ಬಚ್ಚನ್‌ರ ರೋಲ್ಸ್‌ರಾಯ್‌ ಕಾರನ್ನು ಕೋಟಿಗಳ ಬೆಲೆಗೆ ಖರೀದಿಸಿ ಹವಾ ಸೃಷ್ಟಿ ಮಾಡಿದ, ನಂತರ ವಂಚನೆ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಸ್ಕ್ರಾಪ್‌ ಬಾಬುನ್ನು ಸಿಸಿಬಿಯವರು ತನಿಖೆಗೆ ಒಳಪಡಿಸಿದಾಗ ಐಟಿ ಇಲಾಖೆ 131 ಕೋಟಿ ತೆರಿಗೆ ಪಾವತಿಸುವಂತೆ ನೋಟಿಸ್‌ ಜಾರಿ ಮಾಡಿತ್ತು, ಇದುವರೆಗೂ ಬಾಬು ವಿರುದ್ಧದ ಐದು ಪ್ರಕರಣಗಳು ಸಿಸಿಬಿ ಮುಂದಿವೆ. ಒಂದು ಪ್ರಕರಣದ ಹೊರತುಪಡಿಸಿ ಉಳಿದೆಲ್ಲ ಪ್ರಕರಣದಲ್ಲಿ ಜಾಮೀನು ಪಡೆದುಕೊಂಡಿದ್ದು, ಈಗ ಪರಪ್ಪನ ಅಗ್ರಹಾರ ಕಾರಾಗೃಹದಲ್ಲೇ ಇದ್ದಾನೆ.

ಮಗಳ ಮದುವೆಗೇ 35 ಕೋಟಿ ಖರ್ಚು;

ನಾನು ಮಗಳ ಮದುವೆಗೇ 35 ಕೋಟಿ ಖರ್ಚು ಮಾಡಿದ್ದೇನೆ. ನನ್ನ ಮೇಲೆ ದಾಖಲಾಗಿರುವ ಕೇಸ್‌ಗಳೆಲ್ಲಾ ಯಾವ ಲೆಕ್ಕ. ಇಷ್ಟು ಸಣ್ಣ ಪುಟ್ಟ ಹಣಕ್ಕೆ ನಾನೇಕೆ ಮೋಸ ಮಾಡಲಿ” ಎಂದೇ ಸಿಸಿಬಿ ತನಿಖೆ ವೇಳೆ ಬಾಬು ಬಿಲ್ಡಪ್‌ ಕೊಟ್ಟಿದ್ದಾನೆ. ಈಗ ಮೂರು ತಿಂಗಳ ಹಿಂದಷ್ಟೇ ಬಾಲಿವುಡ್‌ನ ಬಿಗ್‌ ‘ಬಿ’ ಅಮಿತಾಬ್‌ ಬಚ್ಚನ್‌ ಅವರ ಬಳಿ ಇದ್ದ ರೋಲ್ಸ್‌ ರಾಯ್‌ ಕಾರಿಗೆ ಕೋಟಿಗಳ ಮೌಲ್ಯ ಕಟ್ಟಿ ಖರೀದಿಸಿದ್ದಾನೆ ಎನ್ನುವುದೂ ಸಿಸಿಬಿ ತನಿಖೆ ವೇಳೆ ಬೆಳಕಿಗೆ ಬಂದಿದೆ. ಇದೂ ಸೇರಿ ಒಟ್ಟು ಐದು ಐಷಾರಾಮಿ ಕಾರುಗಳು ಆರೋಪಿ ಬಳಿ ಇವೆ. ಎಲ್ಲವೂ ಹೈ ಎಂಡ್‌ ಕಾರುಗಳಾಗಿದ್ದು ಕೋಟಿ ಕೋಟಿ ಬೆಲೆಯಲ್ಲಿವೆ.

ಕೋಟಿ ಆಸ್ತಿ ಆಗಿದ್ದು ಹೇಗೆ?

ಮೊದಲು ಗುಜರಿ ವ್ಯಾಪಾರ ಮಾಡುತ್ತಿದ್ದ ಬಾಬು 2008ರಲ್ಲಿ ಸರಕಾರಿ ಭೂಮಿಯನ್ನು ಈತ 2.5 ಕೋಟಿಗೆ ಹರಾಜಿನಲ್ಲಿ ಖರೀದಿಸಿದ್ದ. ಬಳಿಕ ಇದೇ ಭೂಮಿಯನ್ನು 2011 ರಲ್ಲಿ ಪ್ರತಿಷ್ಠಿತ ಬಿಲ್ಡರ್‌ ಒಬ್ಬರಿಗೆ 11 ಕೋಟಿಗೆ ಮಾರಿದ್ದ. ಜತೆಗೆ ಜಂಟಿ ಸಹಭಾಗಿತ್ವದಲ್ಲಿ ಅಪಾರ್ಟ್‌ಮೆಂಟ್‌ ಯೋಜನೆಗೆ ಒಳಪಡುವ ಮಾತುಕತೆ ಆಗಿತ್ತು. ಬಳಿಕ ಬಿಲ್ಡರ್‌ ಈತನಿಗೆ 7 ಕೋಟಿ ಕೊಟ್ಟಿದ್ದರು. ಬಳಿಕ ವ್ಯವಹಾರ ಮುಂದುವರೆಯಲಿಲ್ಲ. 7 ಕೋಟಿ ಕೂಡ ಬಿಲ್ಡರ್‌ಗೆ ವಾಪಾಸ್‌ ಹೋಗಲಿಲ್ಲ. ಈಗ 2019ರಲ್ಲಿ ಅದೇ ಭೂಮಿ ಬೆಲೆ 125 ಕೋಟಿಗೂ ಅಧಿಕ ಇದೆ. ಹೀಗೆ ಬಾಬು ಬಳಿ ಇರುವ ಭೂಮಿ ಬೆಲೆ ಸಾವಿರ ಕೋಟಿ ವರೆಗೂ ತಲುಪಿದೆ ಎಂದು ತನಿಖೆಯ ವೇಳೆ ತಿಳಿದಿದೆ.

Also read: ವಧುವಿಲ್ಲದೆ ನಡೆಯಿತು ಅದ್ಧೂರಿ ಮದುವೆ; ಎಂದು ನೋಡಲಾರದ ಕೆಳಲಾರದ ವಿಶೇಷ ಮದುವೆಗೆ ನೂರಾರು ಜನರ ಆಶೀರ್ವಾದ, ಬಾರಿ ವೈರಲ್ ಆಯಿತು ಮದುವೆಯ ಫೋಟೋಸ್..