ಹಣ್ಣುಗಳ ರಾಜ ಮಾವು ಈ ಬಾರಿಯು ಕೂಡ ಮಾರುಕಟ್ಟೆಯಲ್ಲಿ ಬರ್ಜರಿ ದರ್ಬಾರ್ ನೋಡಿ…

0
379

ಮಾವಿನ ಹಣ್ಣಿನ ಸ್ವಾದವೇ ಅಂಥದ್ದು. ದೊಡ್ಡವರಿರಲ್ಲಿ  ಚಿಕ್ಕವರಿರಲ್ಲ್ಲಿ, ಹಣ್ಣಿನ ಹೋಳು ಬಾಯಿಯಲ್ಲಿ ಬಿದ್ದರೆ ಸಾಕು ಲಾಲಾರಸ ಗ್ರಂಥಿಗಳು ತಾವಾಗೇ ಅರಳಿಕೊಳ್ಳುತ್ತವೆ. ಈ ರಸ ಸವಿಯಲು ಯಾವುದೆ ಮಯಸ್ಸು ಅಡ್ಡಿ ಯಾಗುವುದಿಲ್ಲ. ಇದೇ ಕಾರಣಕ್ಕೆ ಎಲ್ಲ ವಯಸ್ಸಿನವರೂ ಮಾವಿನ ರಸಾಸ್ವಾದದಲ್ಲಿ ಮೈಮರೆಯುವರು. ಮತ್ತೆ ಮಾವಿನ ಋತು ಆರಂಭವಾಗಿದೆ. ಮಾವು ಚಪ್ಪರಿಸುವ ಆ ಸುಂದರ ಸವಿಗಾಲ ಮತ್ತೆ ಬಂದಿದೆ.

ಪ್ರತಿ ಬಾರಿಯಂತೆ ಈ ಬಾರಿಯೂ ನಗರದ ಹಲವೆಡೆ ಮಾವು ಮೇಳ ನಡೆಯಲಿದ್ದೆ. ಯಾದರಲ್ಲಿ ಹಲವಾರು ಜನಪ್ರಿಯ ನಟರುಗಳ  ಆಗಮನವಾಗಲಿದ್ದಾರೆ. ಶಿವರಾಜ್ ಕುಮಾರ್, ಸುದೀಪ್, ದರ್ಶನ್ ಹಾಗೂ ಯಶ್ ಸೇರಿದಂತೆ ಹಲವಾರು ರೈತರ ಬಗ್ಗೆ ಕಾಳಜಿ ಹೊಂದಿದ್ದಾರೆ. ಹೀಗಾಗಿ ಅವರನ್ನೇ ಈ ಬಾರಿಯು ಮಾವು ಮೇಳಕ್ಕೆ ಕರೆತಂದು ಪ್ರಚಾರ ನೀಡುವ ಬಗ್ಗೆ ಚಿಂತಿಸಲಾಗಿದೆ ಎನ್ನುತ್ತಾರೆ ಪರಶಿವಮೂರ್ತಿ. ರೈತರಿಗೆ ಹಾಗೂ ಗ್ರಾಹಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ನಗರದ ಮೆಟ್ರೊ ರೈಲು ನಿಲ್ದಾಣದಲ್ಲಿ, ಪ್ರಮುಖ ಬಸ್ ನಿಲ್ದಾಣದಲ್ಲಿ ಹಾಗೂ ಪ್ರಮುಖ ಸಾಫ್ಟ್ ವೇರ್ ಕಂಪೆನಿಗಳ ಬಳಿ ಮಾವಿನ ಮಳಿಗೆಯನ್ನು ತೆರೆಯಲಾಗುತ್ತದೆ ಎಂದು ಮಾಹಿತಿ ನೀಡಿದರು.

ಇನ್ನೂ ಒಂದು ತಿಂಗಳು ಬೇಕು

April ನಿಂದ ಮೂರು ತಿಂಗಳವರೆಗೆ ಮಾವಿನ ಸೀಜನ್. ಸೀಜನ್ ಆರಂಭಕ್ಕೂ ಮುನ್ನ ಸಾಮಾನ್ಯವಾಗಿ ರಾಜ್ಯದಲ್ಲಿ ಮಾವು ಮಾರುಕಟ್ಟೆ ಪ್ರವೇಶಿಸುವುದು ವಾಡಿಕೆ. ಹಾವೇರಿ, ಹುಬ್ಬಳ್ಳಿ, ಬೆಳಗಾವಿ, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ರಾಮನಗರದಲ್ಲಿ ಮಾವನ್ನು ಹೆಚ್ಚಾಗಿ ಬೆಳೆಯುತ್ತಾರೆ. ಅದರಲ್ಲೂ ಮಾವು ಬೆಳೆಗೆ ಕೋಲಾರ ವಿಶೇಷತೆಯನ್ನು ಪಡೆದಿದ್ದೆ.

 

ರಾಜ್ಯದ ಹಲವು ಕಡೆ ಇತ್ತಿಚೆಗೆ ಆಲಿಕಲ್ಲು ಸಹಿತ ಮಳೆ ಸುರಿದು ಸಾಕಷ್ಟು ಪ್ರಮಾಣದಲ್ಲಿ ಮಾವಿನ ಹೂವುಗಳು ಉದುರಿವೆ. ಹೀಗಾಗಿ ಇಳುವರಿಯ ಪ್ರಮಾಣ ಕಡಿಮೆ ಯಾಗಬವುದು ಇಂದು ತೋಟಗಾರಿಕೆ ಇಲಾಖೆಯ ನಿರ್ದೇಶಕ ಪರಶಿವಮೂರ್ತಿ ತಿಳಿಸಿದ್ದಾರೆ.