ಪುಸ್ತಕ ಪ್ರಿಯರ ಅವೆನ್ಯೂ ರಸ್ತೆ; ಇಲ್ಲಿ ಸೆಕೆಂಡ್ ಹ್ಯಾಂಡ್ ಪುಸ್ತಕಗಳದ್ದೇ ಕಾರುಬಾರು..!

0
581

ಸೆಕೆಂಡ್ ಹ್ಯಾಂಡ್ ಪುಸ್ತಕ ಮಳಿಗೆಗಳನ್ನು ಪ್ರೀತಿಸಿದವರಾರು..?

ಅವೆನ್ಯೂ ರಸ್ತೆ ಬೆಂಗಳೂರು ನಗರದ ಪ್ರತಿಷ್ಠಿತ ರಸ್ತೆ. ಬ್ರಿಟಿಷರ ಆಡಳಿತ ಬಂದ ಮೇಲೆ ಈ ರಸ್ತೆಗೆ ಈ ಹೆಸರು ಬಂತು. ಈ ರಸ್ತೆ ಮಹತ್ತರ ವ್ಯಾಪಾರದ ಜೀವನಾಡಿ. ಮೈಸೂರು ಬ್ಯಾಂಕ್‌ನಿಂದ ಕೃಷ್ಣರಾಜ ಮಾರುಕಟ್ಟೆವರೆಗೆ ಈ ರಸ್ತೆ ಹರಿಯುತ್ತದೆ. ಹಾದಿಯಲ್ಲಿ ಕಬ್ಬನ್‌ಪೇಟೆ, ಚಿಕ್ಕಪೇಟೆ, ನಗರ್ತರ ಪೇಟೆ, ದೊಡ್ಡಪೇಟೆ, ಕುಂಬಾರ ಪೇಟೆ, ಗುಂಡೋಪಂತ್‌ ರಸ್ತೆ ಇವುಗಳು ಅಡ್ಡಲಾಗಿ ಬರುತ್ತವೆ. ಚೌಡೇಶ್ವರಿ ರಸ್ತೆ ಇದರ ಪಕ್ಕದಲ್ಲೇ ಇದೆ. ಅವೆನ್ಯೂ ರಸ್ತೆಗೆ ಮೊದಲು ದೊಡ್ಡಪೇಟೆ ಎಂದೇ ಹೆಸರು. ಶಾಲಾ ಕಾಲೇಜುಗಳ ಪಠ್ಯಪುಸ್ತಕಗಳನ್ನು ಕೊಳ್ಳಲು ಇಲ್ಲಿಗೆ ಬರಬೇಕಾಗಿತ್ತು. ಆಗ ಸ್ಟ್ಯಾಂಡರ್ಡ್‌ ಬುಕ್‌ ಡಿಪೋ, ದುರ್ಗಾ ಬುಕ್‌ ಸ್ಟಾಲ್‌ ಬಹಳ ಹೆಸರುವಾಸಿ. ಸೆಕೆಂಡ್‌ ಹ್ಯಾಂಡ್‌ ಪುಸ್ತಕಗಳನ್ನು ಇಲ್ಲಿ ರಸ್ತೆ ತುಂಬ ಹರಡಿಕೊಂಡು ಮಾರಾಟ ಮಾಡಲಾಗುತ್ತದೆ.

Also read: ಮಾನಸಿಕ ಒತ್ತಡ ಯಾವುದರಿಂದ ಬರುತ್ತೆ? ಇಂತಹ ಒತ್ತಡವನ್ನು ನಿಯಂತ್ರಿಸುವುದು ಹೇಗೆ.?

ಹಳೆಯ ಪುಸ್ತಕಗಳ ಮಳಿಗೆಗಳಿಗೆ ಮುಗಿಬಿದ್ದು ಬರುವ ಜನ ಕಡಿಮೆ ಬೆಲೆಗೆ ಪುಸ್ಕಗಳನ್ನು ಕದಿಯುತ್ತಾರೆ.

ಇಲ್ಲಿ ಸಿಗದ ಪುಸ್ತಕಗಳಿಲ್ಲ. ಕವಿರಾಜಮಾರ್ಗದಿಂದ ಜಾನ್‌ಪಾಲ್‌ ಸಾರ್ತ್ರೆವರೆಗೆ ಮತ್ತು ಅಚ್ಚಿನಲ್ಲಿಲ್ಲದ ಪುಸ್ತಕಗಳೂ ಇಲ್ಲಿನ ಪಾದಚಾರಿ ರಸ್ತೆ ಅಂಗಡಿಗಳಲ್ಲಿ ದೊರಕುತ್ತವೆ. ಸ್ವಲ್ಪ ಹುಡುಕುವ ವ್ಯವಧಾನ ಇರಬೇಕು ಅಷ್ಟೇ. ಪಕ್ಕದ ಗಲ್ಲಿಗಳಲ್ಲಿ ಬಟ್ಟೆ–ಬರೆ, ಸಗಟು ವ್ಯಾಪಾರ ಕೋಟಿ ಕೋಟಿ ರೂಪಾಯಿಗಳಲ್ಲಿ ನಡೆಯುತ್ತದೆ. ಪಕ್ಕದ ದಿವಾನ್‌ ಸೂರಪ್ಪ ಗಲ್ಲಿಯ ಅಂಗಡಿಗಳನ್ನು ನೋಡಿದರೆ ಮೇಲ್ನೋಟಕ್ಕೆ ಇದು ನಿಜವೇ ಅನ್ನಿಸುವಂತಿದೆ. ಅಷ್ಟು ಆಡಂಬರ ಇಲ್ಲದ ಮಳಿಗೆಗಳಿರುವ ಈ ಗಲ್ಲಿಗಳಲ್ಲಿ ಚಿನ್ನ, ಬೆಳ್ಳಿ ವ್ಯಾಪಾರದ ಅಂಗಡಿಗಳು ರಸ್ತೆಯ ಇಕ್ಕೆಲಗಳಲ್ಲೂ ಹರಡಿವೆ.

Also read: ಸರ್ಕಾರಿ ನೌಕರರಿಗೆ ಭರ್ಜರಿ ಗಿಫ್ಟ್; ಸಮ್ಮಿಶ್ರ ಸರ್ಕಾರದಿಂದ ದಸರಾ ಹಬ್ಬದ ಉಡುಗೊರೆ ರೂಪದಲ್ಲಿ ತುಟ್ಟಿಭತ್ಯೆ ಹೆಚ್ಚಳ..!

ಇಲ್ಲಿ ಸೆಕೆಂಡ್ಸ್’ಗೆ ಪುಸ್ತಕಗಳನ್ನು ಖರೀದಿಸಬಹುದು. ಇಲ್ಲಿ 300ಕ್ಕೂ ಹೆಚ್ಚಿನ ಮಾರಾಟಗಾರರಿದ್ದು, ಇವರಲ್ಲಿ ಹಲವರು 3 ದಶಕಗಳಿಂಗಿಂತಲೂ ಹೆಚ್ಚಿನ ಸಮಯದಿಂದ ಇದ್ದಾರೆ. ಇಲ್ಲಿ ಕಾದಂಬರಿಗಳು, ಸ್ಪರ್ಧಾತ್ಮಕ ಪರೀಕ್ಷೆಗಳಗೆ ಸಹಾಯ ಮಾಡುವ ಪುಸ್ತಕಗಳು, ತರಬೇತಿ ಪುಸ್ತಕ, ಕಥೆ ಪುಸ್ತಕ, ಪಠ್ಯಪುಸ್ತಕ ಹೀಗೆ ಹತ್ತು ಹಲವು ಬಗೆಯ ಪುಸ್ತಕಗಳು ದೊರೆಯುತ್ತವೆ.. ಇಲ್ಲಿ ಇರದ ಪುಸ್ತಕಗಳೇ ಇಲ್ಲ.. ಅವೆನ್ಯೂ ರಸ್ತೆಯಲ್ಲಿ ಸುಮಾರು 70 ಮಳಗೆಗಳಿದ್ದು, 250 ಮಂದಿ ಬೀದಿ ವ್ಯಾಪಾರಿಗಳಿದ್ದಾರೆ.

Also read: ಹೆಲೋ ಫ್ರೆಂಡ್ಸ್, ವಿಶ್ವಾದ್ಯಂತ ನೆಟ್’ವರ್ಕ್ ಸ್ಲೋ ಆಗಲಿದೆ; ಎಚ್ಚರ ಎಚ್ಚರ..! ಇದು ನಿಮ್ಮ ಗ್ರಹಚಾರವಲ್ಲ..

ಅಂಕರ್ ಬುಕ್ ಸ್ಟೋರ್, ಬಿ ಎಸ್ ಗೌಡ ಬುಕ್ ಹೌಸ್, ಗೋಲ್ಡನ್ ಬುಕ್ ಸ್ಟೋರ್ ಸೇರಿದಂತೆ ಇನ್ನು ಹಲವು ಪುಸ್ತಕ ಮಳಿಗೆಗಳು ಹೆಸರುವಾಸಿಯಾಗಿವೆ. ಆದರೆ ಆನ್’ಲೈನ್ ಹಲವು ಗ್ರಾಹಕರನ್ನು ಹಿಡಿದಿಟ್ಟುಕೊಂಡಿದ್ದರೂ ಸಹ, ಈಗಲೂ ಹಲವರು ಪುಸೇತಕಗಳಿಗಾಗಿ ಅವೆನ್ಯೂ ರಸ್ತೆಗೆ ಬಂದೇ ಬರುತ್ತಾರೆ.. ಯಾವ ಪುಸ್ತಕ ಎಲಲಲಿಯೂ ಸಿಗದಿದ್ದರೂ ಇಲ್ಲಿ ಸಿಕ್ಕೆ ಸಿಗುತ್ತೆ ಎಂಬುದು ಹಲವು ಗ್ರಾಹಕಾರ ಮಾತು.