ಯಶಸ್ವೀ ‘ಗಂಡ’ ಎನ್ನಿಸಿಕೊಳ್ಳಬೇಕೆ ? ಹಾಗಾದ್ರೆ ಈ 8 Rules ಗಳನ್ನು ಫಾಲೋ ಮಾಡಿ… ಸೂಚನೆ : ಗಂಡಸರಿಗೆ ಮಾತ್ರ…!!

0
3849

Kannada News | kannada Useful Tips

 • ಗಂಡಿನ ಜವಾಬ್ದಾರಿಗಳ ಬಗ್ಗೆ “ಮದುವೆ ಮಂಟಪ ದಲ್ಲೇ ಬೋಧನೆ” ಆಗುತ್ತದೆ. ಆದರೆ ದುರಂತಕ್ಕೆ ಅವುಗಳಲ್ಲಿ ಬಹಳಷ್ಟು ಈ ಕಾಲ ಘಟ್ಟಕ್ಕೆ ತಕ್ಕಂತೆ ಅಪ್ಡೇಟ್ ಆಗಿಲ್ಲ. ಹಾಗಾಗಿ “ಉತ್ತಮ ಪತಿಯಾಗುವುದು ಹೇಗೆ” ಎಂಬುದರ ಬಗ್ಗೆ ಎಲ್ಲಾ ಗಂಡಂದಿರು ಈ ವಿಚಾರಗಳನ್ನು ಮನಸಿನಲ್ಲಿ ಇಟ್ಟುಕೊಡು ಪಾಲಿಸಿದರೆ ಒಳ್ಳೆಯದು…
 • ಹೆಂಡತಿಯ ಮಾತಿಗೆ ಯಾವತ್ತೂ ಎದುರಾಡಲು ಹೋಗಬಾರದು.
 • “ಹೌದು, ಸರಿ, ಹಾಗೆ ಆಗಲಿ, ಖಂಡಿತ.. ಮುಂತಾದ ಪದ ಬಳಕೆ ಮಾಡಬೇಕು.
 • ಈಗಿನ ಕಾಲದ ಹುಡುಗೀರಿಗೆ ಅಡುಗೆ ಮನೆ ಅಂದ್ರೆ ಅಲರ್ಜಿ. ಮಡದಿ ಏನು ಮಾಡಿ ಕೊಟ್ಟರೂ, ಯಾವುದೇ ರೀತಿಯ ವಿಮರ್ಶೆ ಮಾಡದೆ ಚಪ್ಪರಿಸುತ್ತಾ ತಿನ್ನಬೇಕು.
 • ನಿಮ್ಮ ಭಾಷಾ ಜ್ಞಾನ ವೃದ್ದಿಸಿಕೊಂಡಂತೆ, ನೆನಪಿನ ಶಕ್ತಿಯನ್ನು ಕೂಡ ಹೆಚ್ಚಿಸಿಕೊಳ್ಳಬೇಕು. ನಿಮ್ಮ ಮದುವೆಯ ದಿನ, ಹುಟ್ಟಿದ ಹಬ್ಬ ಮುಂತಾದುವು ಚೆನ್ನಾಗಿ ನೆನಪಿಟ್ಟುಕೊಳ್ಳಬೇಕು.

 • ಹೆಂಡತಿಗೆ ಅಗತ್ಯ ಇದ್ದಾಗೆಲ್ಲ ದುಡ್ಡು ಕೊಡುತ್ತಾ ಇರಬೇಕು. ಸಾದ್ಯ ಆದ್ರೆ, ಕ್ರೆಡಿಟ್ ಕಾರ್ಡ್ ನೆ ಕೊಡಬೇಕು. ಆಮೇಲೆ ಬಿಲ್ ಬಂದಮೇಲೆ ಖರ್ಚಿನ ವಿವರ ಕೇಳುವ ಮೂರ್ಖ
  ಕೆಲಸಕ್ಕೆ ಕೈ ಹಾಕಬಾರದು. ತುಟಿ ಪಿಟಿಕ್ ಎನ್ನದೆ ಅದರ ಬಿಲ್ ಕಟ್ಟಬೇಕು.
 • ಮನೆ ಅಂದ ಮೇಲೆ ಅತ್ತೆ ಸೊಸೆ ಜಗಳ ಇದ್ದಿದ್ದೇ. ಇದೊಂತರ “ಅತ್ತ ದರಿ, ಇತ್ತ ಪುಲಿ” ಸಂಧರ್ಭ. ಇಂತಹ ಸಂದರ್ಭದಲ್ಲಿ ಆದಷ್ಟು ಯೋಚಿಸಿ ಯೋಜನೆ ಹಾಕಿಕೊಂಡು ಇಬ್ಬರ ಜಗಳ ನಿಲ್ಲಿಸಿ. ನಿಲ್ಲಿಸಿದರೆ, ನೀವು ಯಶಸ್ವಿ ಗಂಡ ಏನು.. ಯಶಸ್ವಿ ಮಾನವ ಜೀವಿ ಅಂತ ಗುರುತಿಸಲ್ಪಡುತ್ತಿರಿ.
 • ಟೀವಿಯಲ್ಲಿ ಇಂಡಿಯಾ – ಪಾಕಿಸ್ತಾನ್ ಮ್ಯಾಚ್ ಬರ್ತಾ ಇದ್ರೂ ಅದನ್ನ ನೋಡದೆ, “ಪುಟ್ಟ ಗೌರಿ ಮದುವೆ” ಅಥವಾ ಇನ್ನಾವುದೇ ಹೆಂಡತಿ ನೋಡುವ ಧಾರವಾಹಿ ನೋಡಬೇಕು.
  ಹೆಂಡತಿ ಕೆಲ್ಸಕ್ಕೆ ಹೋಗುತ್ತಿದ್ದಲ್ಲಿ, ನಿಮ್ಮ ಬೈಕು / ಕಾರಿನಲ್ಲಿ ಉಚಿತ ಸಾರಿಗೆ ವ್ಯವಸ್ತೆ ಕೊಡಬೇಕು.
 • ಸ್ಥಿತಿ ಪ್ರಜ್ಞರಾಗಿ – ತರ್ಕ ಬದ್ದವಾಗಿ ಮಾತಾಡಲು ಹೊರಟಿರೋ.. ನೀವು ಕೆಟ್ಟಿರಿ. ಆದಷ್ಟು ನಿಮ್ಮ ಚಾಣಾಕ್ಷತನವನ್ನು ಹೆಚ್ಚು ತೋರಿಸುವುದಕ್ಕೆ ಹೋಗಬೇಡಿ. ಸುಮ್ಮನಿರಿ…!!

Also Read: ಮರೆಯಲಾಗದ ಮಾಂತ್ರಿಕ ಶಂಕರ ನಾಗರಕಟ್ಟೆ!!!

Watch: