“ಹರಿವರಾಸನಂ” ಹಾಡಿನ ಹಿಂದಿನ ಸತ್ಯ..!!!

0
7118

ಶಬರಿಮಲೆಯ ಅಯ್ಯಪ್ಪನ ಸನ್ನಿಧಿಯಲ್ಲಿ ಯೇಸುದಾಸ್ ರವರ ಭಕ್ತಿಸುಧೆ

ಕೇರಳ ಸರ್ಕಾರದಿಂದ ಆಸ್ಥಾನ ಗಾಯಕ ಪ್ರಶಸ್ತಿ ಪಡೆದ ಏಕೈಕ ಗಾಯಕ ಜೆ.ಯೇಸುದಾಸ್ ಅಯ್ಯಪ್ಪನ ಸನ್ನಿಧಿಯಲ್ಲಿ ಮಣಿಕಂಠ ಮಹಿಮೆಯನ್ನು ಕೀರ್ತಿಸುತ್ತಾ,”ಹರಿವರಾಸನಂ” ಭಕ್ತಿಗೀತೆಯನ್ನು ಹಾಡಿ ಅಲ್ಲಿ ಸೇರಿದ್ದ ಭಕ್ತರ ಮನಸೋರೆಗೊಂಡರು.

ಓಣಂ ಹಬ್ಬದ ಕೊನೆಯ ದಿನವಾದ ಗುರುವಾರ ಕನ್ನಿ ಉತ್ಸವದ ವೇಳೆ ದೇಗುಲಕ್ಕೆ ತೆರಳಿದ ಹಿರಿಯ ಗಾಯಕ ಜೆ.ಯೇಸುದಾಸ್ ಕ್ರೈಸ್ತ ಧರ್ಮಿಯರಾಗಿದ್ದರೂ ದೇವಾಲಯವನ್ನು ಪ್ರವೇಶಿಸುವುದಕ್ಕೆ ಯಾವುದೇ ಅಡ್ಡಿ ಇಲ್ಲದಿದ್ದರೂ, ತಮ್ಮದೇ ನಿಯಮವನ್ನು ಪರಿಪಾಲಿಸಿ, ದೇವಾಲಯದೊಳಗೆ ಹೋಗದೆ ಹೊರಗಿನಿಂದಲೇ ಅಯ್ಯಪ್ಪಸ್ವಾಮಿಯ ದರ್ಶನ ಪಡೆದರು.

ಹಿಂದೂಗಳ ಪಾಲಿಗೆ ಪುಣ್ಯಕ್ಷೇತ್ರವದ ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಮಣಿಕಂಠ ಮಹಿಮೆಯನ್ನು ಹೇಳುವ  ‘ಹರಿವರಾಸನಂ’ ಭಕ್ತಿಗೀತೆಯನ್ನು ಅತ್ಯಂತ ಭಕ್ತಿ ಶ್ರದ್ಧೆಯಿಂದ ಯೇಸುದಾಸ್ ಹಾಡಿ ಅಲ್ಲಿ ಸೇರಿದ್ದ ಭಕ್ತರ ಮನಸೆಳೆದರು. ದೇಗುಲದ ಸಂಪ್ರದಾಯದ ಪ್ರಕಾರ ಅಯ್ಯಪ್ಪಸ್ವಾಮಿಯನ್ನು ಮಲಗಿಸಲು ಈ ಹಾಡನ್ನು ಹಾಡಿಸಲಾಗುತ್ತದೆ.

ದೇವಸ್ವಂ ಅಧಿಕಾರಿಗಳ ಮನವಿ ಮೇರೆಗೆ ಅಯ್ಯಪ್ಪನ ಮುಂದೆ ಹರಿವರಾಸನಂ ಭಕ್ತಿಗೀತೆಯನ್ನು ಹಾಡಿದರು. ಅವರ ಹಾಡಿನ ಜೊತೆಗೆ ಅಲ್ಲಿ ನೆರೆದಿದ್ದ ಭಕ್ತರೆಲ್ಲರು ಕೂಡ ಧ್ವನಿಯಾಗಿದರು. ಸಾಹಿತ್ಯ ‘ಹರಿಹರಸುಧಾಸ್ತಕಂ’ ಎಂಬ ಈ ಸಂಸ್ಕೃತ ಹಿಂದು ಭಕ್ತಿ ಹಾಡನ್ನು “ಕುಂಭಕುಡಿ ಕುಲತೂರ್ ಅಯ್ಯರ್” 1950 ರಲ್ಲಿ ರಚಿಸಿದ್ದರು. ಹೆಸರಾಂತ ಸಂಗೀತ ನಿರ್ದೇಶಕರಾದ ಜಿ ದೇವರಾಜನ್ ಸಂಯೋಜಿಸಿದ ರಾಗದಲ್ಲಿ ಸ್ವತಃ ಜೆ.ಯೇಸುದಾಸ್ ಅವರು ಹಾಡಿದ್ದಾರೆ. ಈ ಸಂಗೀತವನ್ನು ‘ಉರಕ್ಕ ಪಟ್ಟು’ (ಲಾಲಿ) ಎಂದೂ ಕೂಡ ಕರೆಯಲಾಗುತ್ತದೆ.