ಕೇಂದ್ರಾಡಳಿತ ಪ್ರದೇಶವಾಗಲಿದೆ ಜಮ್ಮು-ಕಾಶ್ಮೀರ; ವಿಶೇಷ ಅಧಿಕಾರ, ಸ್ಥಾನಮಾನ ರದ್ದು, ಏನೇನು ಬದಲಾಗುತ್ತೆ? ಇಲ್ಲಿದೆ ನೋಡಿ ರೋಚಕ ಮಾಹಿತಿ!!

0
331

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಹತ್ವದ ನಿರ್ಣಯ ಮಾಡಿದ್ದು. ಭಾರತ ಸಂವಿಧಾನ ವಿಧಿ 370 ಮತ್ತು 35(ಎ) ಅನ್ವಯ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ, ವಿಶೇಷ ಸ್ಥಾನಮಾನ ರದ್ದುಗೊಳಿಸಿದ್ದು ಕೇಂದ್ರದ ಐತಿಹಾಸಿಕ ನಿರ್ಧಾರದಿಂದ ಕಣಿವೆ ರಾಜ್ಯ ಇನ್ಮುಂದೆ ಕೇಂದ್ರಾಡಳಿತ ಪ್ರದೇಶವಾಗಲಿದೆ. ಈ ಪ್ರಸ್ತಾವನೆಗೆ ರಾಷ್ಟ್ರಪತಿ ಸಹಿ ಕೂಡಾ ಬಿದ್ದಿದ್ದು, ಇದು ಇಂದಿನಿಂದಲೇ ಜಾರಿಯಾಗಲಿದೆ. ಈ ಸುಗ್ರೀವಾಜ್ಞೆಯಿಂದ ಜಮ್ಮು ಕಾಶ್ಮೀರ ಇನ್ಮುಂದೆ ರಾಜ್ಯವಾಗಿ ಗುರುತಿಸಲ್ಪಡದೆ, ಒಂದು ಕೆಂದ್ರಾಡಳಿತ ಪ್ರದೇಶವಾಗಲಿದೆ. ಈ ಹಿನ್ನಲೆಯಲ್ಲಿ ಕಣಿವೆಯಲ್ಲಿ ಏನೆಲ್ಲಾ ಬದಲಾಗುತ್ತೆ ಎನ್ನುವುದು ಇಲ್ಲಿದೆ ನೋಡಿ.


Also read: ಬಿಗ್ ಬ್ರೇಕಿಂಗ್ ಜಮ್ಮು-ಕಾಶ್ಮೀರದಲ್ಲಿ ಯುದ್ದದ ವಾತಾವರಣ; 370 ವಿಶೇಷ ಸ್ಥಾನಮಾನಕ್ಕೆ ಅಂತಿಮ?ಕಾಶ್ಮೀರದಲ್ಲಿ ನಿಷೇಧಾಜ್ಞೆ ಜಾರಿ..

ಏನೆಲ್ಲಾ ಬದಲಾವಣೆ?

ಜಮ್ಮು ಕಾಶ್ಮೀರ ಕೇಂದ್ರದ ಅಧೀನಕ್ಕೆ ಒಳಪಡಲಿದೆ. ಜಮ್ಮು-ಕಾಶ್ಮೀರ ವಿಧಾನಸಭೆಯನ್ನು ಒಳಗೊಂಡಿದ್ದರೂ ಕೇಂದ್ರದ ಅಧೀನದಲ್ಲಿ ಬರಲಿದೆ. ಲಡಾಕ್ ಕೇಂದ್ರಾಡಳಿತ ಪ್ರದೇಶವಾಗಲಿದೆ. ಜಮ್ಮು ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನ ಮತ್ತು ಅಧಿಕಾರವನ್ನು ರದ್ದುಗೊಳಿಸಲಾಗಿದೆ. ರಾಜ್ಯಸಭೆಯಲ್ಲಿ ಕೇಂದ್ರಗೃಹ ಸಚಿವ ಅಮಿತ್ ಶಾ ಪರಿಚ್ಛೇಧ 370 ಮತ್ತು 35(ಎ) ರದ್ದುಗೊಳಿಸಲಾಗುವುದು ಎಂದು ಹೇಳುತ್ತಿದ್ದಂತೆ ವಿಪಕ್ಷ ನಾಯಕರು ವಿರೋಧ ವ್ಯಕ್ತಪಡಿಸಿ ಗಲಾಟೆ ಆರಂಭಿಸಿದರು. ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ, ಅಧಿಕಾರ ರದ್ದುಗೊಳಿಸಿದ ಆದೇಶಕ್ಕೆ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅಂಕಿತ ಹಾಕಿದ್ದಾರೆ.

1. ಜಮ್ಮು-ಕಾಶ್ಮೀರಕ್ಕೆ ಭಾರತದ್ದೇ ಸಂವಿಧಾನ ಅನ್ವಯವಾಗುತ್ತೆ
2. ರಾಜ್ಯಪಾಲರಿಗೆ ಜಮ್ಮು – ಕಾಶ್ಮೀರದ ಪರಮಾಧಿಕಾರ ಸಿಗುತ್ತೆ
3. ಜಮ್ಮು ಕಾಶ್ಮೀರ ಹೊರತುಪಡಿಸಿ ಇತರ ರಾಜ್ಯದವರಿಗೂ ಆಸ್ತಿ ಖರೀದಿಸುವ ಹಕ್ಕು ಸಿಗುತ್ತದೆ
4. ಅನ್ಯ ರಾಜ್ಯದಿಂದ ಬಂದು ನೆಲೆಸಿದವರಿಗೆ ಮತದಾನದ ಹಕ್ಕು ಇರುತ್ತೆ
5. ಭಾರತ ಸರ್ಕಾರದ ಮಾಹಿತಿ ಹಕ್ಕು ಕಾಯ್ದೆ (RTI) ಅನ್ವಯ ಆಗುತ್ತೆ
6. ಸಂಸತ್‌ನಲ್ಲಿ ಪಾಸ್ ಆದ ಎಲ್ಲ ಕಾನೂನುಗಳು ಅನ್ವಯವಾಗುತ್ತವೆ
7. ಹೊರ ರಾಜ್ಯದ ಜನರಿಗೂ ಇಲ್ಲಿ ವಾಸಿಸಲು ಅವಕಾಶ
8. ಸರ್ಕಾರಿ ಉದ್ಯೋಗ ನೇಮಕಾತಿಯಲ್ಲಿ ಎಲ್ಲ ರಾಜ್ಯದವರಿಗೂ ಆದ್ಯತೆ.

ಈ ಹಿಂದೆ 370, 35ಎ ವಿಧಿ ಅನ್ವಯ ಏನಿತ್ತು?

1. ಜಮ್ಮು-ಕಾಶ್ಮೀರದ ನಾಗರಿಕರಿಗೆ ಮಾತ್ರ ಆಸ್ತಿ, ಶಿಕ್ಷಣ, ಉದ್ಯೋಗದಲ್ಲಿ ವಿಶೇಷ ಅಧಿಕಾರ ನೀಡುವ ಕಲಂ ಇದಾಗಿತ್ತು.
2. 35-ಎ ಪ್ರಕಾರ, ಆ ರಾಜ್ಯದ ಕಾಯಂ ನಿವಾಸಿಗಳನ್ನು ಅಂದರೆ ಸ್ಥಳೀಯರನ್ನು ಬಿಟ್ಟು ಹೊರಗಿನವರು ಯಾರೂ ಅಲ್ಲಿ ಸ್ಥಿರ ಆಸ್ತಿ ಹೊಂದುವಂತಿಲ್ಲ.
3. ಶಿಕ್ಷಣ, ವಿದ್ಯಾರ್ಥಿವೇತನ ಮತ್ತು ಉದ್ಯೋಗಕ್ಕೆ ಸ್ಥಳೀಯರಷ್ಟೇ ಅರ್ಹರು.
4. ಅಲ್ಲಿನ ಮಹಿಳೆ ರಾಜ್ಯದ ಹೊರಗಿನವರನ್ನು ವಿವಾಹವಾದರೆ ಈ ವಿಶೇಷ ಸೌಲಭ್ಯಗಳಿಂದ ವಂಚಿತಳಾಗುತ್ತಿದ್ದಳು.
5. ಅಲ್ಲಿನ ಪುರುಷ ಮಾತ್ರ ಹೊರರಾಜ್ಯದ ಸ್ತ್ರೀಯನ್ನು ವಿವಾಹವಾದರೆ ಆತನ ಹಕ್ಕಿಗೆ ಯಾವುದೇ ಧಕ್ಕೆ ಬರುವುದಿಲ್ಲ. ಜೊತೆಗೆ ಆತನ ಪತ್ನಿಗೂ ಈ ಎಲ್ಲಾ ಹಕ್ಕುಗಳು ಪ್ರಾಪ್ತವಾಗುತ್ತವೆ.
6. ವಿವಾಹ, ಆಸ್ತಿ ಖರೀದಿ, ಸರ್ಕಾರಿ ಸೌಲಭ್ಯಗಳನ್ನು ಪಡೆಯುವ ವಿಚಾರದಲ್ಲಿ ತಾರತಮ್ಯವಿದೆ.

ಏನಿದು 370ನೇ ವಿಧಿ? ರದ್ದುಪಡಿಸಲು ಸಾಧ್ಯವೇ?

370 ಭಾರತ ಸಂವಿಧಾನದ ಒಂದು ವಿಧಿ. ಇದು ಕಾಶ್ಮೀರಕ್ಕೆ ತಾತ್ಕಾಲಿಕ ವಿಶೇಷ ಸ್ಥಾನಮಾನ ಕಲ್ಪಿಸಿದ್ದು, ಜಮ್ಮು-ಕಾಶ್ಮೀರಕ್ಕೆ ಸ್ವಾಯತ್ತ ಸ್ಥಾನಮಾನ ನೀಡಿದೆ. ಇದರಂತೆ ರಕ್ಷಣೆ, ವಿದೇಶಾಂಗ ವ್ಯವಹಾರ, ಸಂಪರ್ಕ ಹೊರತುಪಡಿಸಿ ದೇಶದ ಬೇರೆಲ್ಲಾ ರಾಜ್ಯಗಳಿಗೆ ಅನ್ವಯಿಸುವ ಕಾನೂನುಗಳು, ನಿಯಮಗಳು ಜಮ್ಮು-ಕಾಶ್ಮೀರಕ್ಕೆ ಅನ್ವಯಿಸುವುದಿಲ್ಲ. ಈ ವಿಶೇಷ ಸ್ಥಾನಮಾನವನ್ನು ರದ್ದು ಮಾಡುವುದಾಗಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿತ್ತು. ಹಾಗಾಗಿ ಅಶಾಂತಿಗೆ ಎಡೆಮಾಡಿಕೊಡದಂತೆ ಸೂಕ್ತ ಭದ್ರತೆ ನೀಡಿ, ಇಂದಿನಿಂದಲೇ ರದ್ದು ಮಾಡಿ ಕೇಂದ್ರಕ್ಕೆ ಒಳಪಟ್ಟಿದೆ.