ಸೋಮಾರಿಗಳು ಸ್ವಾಭಿಮಾನಿಯಾಗಿ ದುಡಿಯಲು ಪ್ರೇರಣೆ ನೀಡುವ ಸತ್ಯ ಕತೆಯೊಂದಿದೆ ನೋಡಿ; ಈ ಕತೆ ನಿಮ್ಮ ಬದುಕನ್ನೇ ಬದಲಾಯಿಸಬಹುದು..

0
1011

ದೇಶದಲ್ಲಿ ಕೈಕಾಲುಗಳು ನೆಟ್ಟಗಿದ್ದರು ಸೋಮಾರಿಗಳಾಗಿ ಮನೆಯವರಿಗೆ ಹೊರೆಯಾಗಿ ಇಲ್ಲ ಬಿಕ್ಷೆಬೇಡಿ ಜೀವನ ನಡೆಸುವರನ್ನು ತುಂಬಾ ನೋಡಿರುತ್ತೀರ. ಈ ಬಿಕ್ಷೆಬೇಡುವ ಜನರಲ್ಲಿ ಹೆಚ್ಚಾಗಿ ಕೈಕಾಲು ಇಲ್ಲದೆ ಇರುವರು ಇಲ್ಲ ದೈಹಿಕವಾಗಿ ಕುಬ್ಜತೆ ಇರುವರು ದೇವಸ್ಥಾನಗಳಲ್ಲಿ ಇಲ್ಲ ರೋಡ್ ನಲ್ಲಿ ಕಂಡಿರುತ್ತಾರೆ ಅವರನ್ನು ಕಂಡು ಕನಿಕರದಿಂದ ಅಲ್ಪ ಸಹಾಯ ಮಾಡಿರುತ್ತೀರ. ಅಂತಹ ಜನರಲ್ಲಿ ಕೆಲವೊಬ್ಬರಿಗೆ ಸ್ವತಹ ತಾವೇ ದುಡಿದು ಜೀವನ ನಡೆಸಬೇಕು ಅನ್ನೂ ಛಲ ತುಂಬಾ ಇರುತ್ತದೆ. ಅದೇ ಸಾಲಿನಲ್ಲಿ ಬರುವ ಬರೋಬ್ಬರಿ 3 ಅಡಿ ಎತ್ತರ ಇರುವ ಬೆಂಗಳೂರಿನ ವ್ಯಕ್ತಿಯೊಬ್ಬರು ಜೀವನ ನಡೆಸಲು ಏನ್ ಮಾಡುತ್ತಿದ್ದಾರೆ ನೋಡಿ.


Also read: ಭಾರತದಲ್ಲಿ ಮತ್ತೊಬ್ಬ ಯುವ ವಿಜ್ಞಾನಿ; ಸಮುದ್ರದಲ್ಲಿ ತ್ಯಾಜ್ಯ ತೆಗೆಯವ ಹಡಗು ಕಂಡುಹಿಡಿದ 12 ವರ್ಷದ ಬಾಲಕ..

ಹೌದು ಸಾಧನೆ ಮಾಡುವ, ಸ್ವಾಭಿಮಾನದಿಂದ ದುಡಿದು ತಿನ್ನುವ ಮನಸ್ಸಿದರೆ ಯಾವುದು ಅಸಾದ್ಯವಲ್ಲ ಅನ್ನೋದಕ್ಕೆ ಬೆಂಗಳೂರಿನಲ್ಲಿ ಆಟೋ ಓಡಿಸಿ ಮನೆಯನ್ನು ನಡೆಸುತ್ತಿರುವ ವ್ಯಕ್ತಿನೆ ಸಾಕ್ಷಿ ಅನ್ಸುತೆ. ಈ ವ್ಯಕ್ತಿ ಹುಟ್ಟಿನಿಂದಲೇ ಕುಬ್ಜನಾಗಿದ್ದು ದೈಹಿಕವಾಗಿ ತೊಂದರೆಗೆ ಸಿಲುಕಿದ್ದಾನೆ. ಇವನಿಗೆ ಸ್ವತಹ ಆಟೋ ಏರೋದಕ್ಕೆ ಬರೋದಿಲ್ಲ ಬೇರೆಯವರ ಆಟೋ ಸಿಟ್ ಮೇಲೆ ಕುರಿಸಿದ್ದಾಗೆ ಮುಂದೆ ದಿನವಿಡಿ ಆಟೋದಲ್ಲೇ ಕುಳಿತು ಆಟೋ ಓಡಿಸಿ ಜೀವನ ಮಾಡುತ್ತಾನೆ.

ಯಾರು ಈ ವ್ಯಕ್ತಿ?

ಮೂಲತಃ ತಮಿಳುನಾಡಿನವರಾದ ಅಕ್ಬರ್ ಬೆಂಗಳೂರಿನ ಎಚ್‍ಎಸ್‍ಆರ್ ಲೇಔಟ್‍ನಲ್ಲಿ 10 ವರ್ಷಗಳಿಂದ ನಲೆಸಿದ್ದಾರೆ ಇವರು ಕುಬ್ಜನಾಗಿದ್ದು 7 ವರ್ಷಗಳ ಹಿಂದೆ ಅಪ್ಪ ನಿಧನರಾದ ಮೇಲೆ ಅಕ್ಬರ್ ತಾನೇ ದುಡಿಯಬೇಕಾಯಿತು. ಹಾಗೆಯೇ ಸುಮಾರು ವರ್ಷಗಳಿಂದ ಆಟೋ ಓಡಿಸಿ ಜೀವನ ಮಾಡುತ್ತಿರುವ 31 ವರ್ಷದ ಅಕ್ಬರ್ 3 ಅಡಿ ಎತ್ತರ ಇದ್ದಾರೆ. ಆದರೆ, ಜೀವನೋತ್ಸಾಹ ಯಾರಿಗೇನು ಕಡಿಮೆಯಿಲ್ಲ, ಇವರ ಈ ಸಾಹಸ ಬರಿ ಅಂಗವಿಕಲರಿಗೆ ಮಾತ್ರವಲ್ಲ ಕೆಲಸ ಮಾಡದೆ ಇರುವ ಸೋಮಾರಿಗಳಿಗೆ ಮಾದರಿಯಾಗಿದೆ. ಇದರ ಬಗ್ಗೆ ಅಕ್ಬರ್ ಸ್ವತಹ ತಾವೇ ಹೇಳಿದ್ದು ಹೀಗೆ.


Also read: ಫುಟ್-ಪಾತ್ ನಲ್ಲಿ ಟಿಶರ್ಟ್ ಮಾರುತ್ತಿದ್ದ ವ್ಯಕ್ತಿ ಇಂದು ಕೋಟ್ಯಂತರ ರೂಪಾಯಿ ಬೆಲೆ ಬಾಳುವ ವ್ಯಾಪಾರ ನಡೆಸುತ್ತಿರುವ ಕಥೆ ಕೇಳಿ ನಿಮಗೂ ಸ್ಫೂರ್ತಿ ಬರುತ್ತೆ..

ಆಟೋ ಡ್ರೈವರ್ ಅಕ್ಬರ್:

ನಾನು ಹುಟ್ಟುತ್ತಲೇ ಈ ದೇಹವನ್ನು ಪಡೆದುಕೊಂಡೆ ನನಗೆ ಜೀವನದಲ್ಲಿ ಬಹಳಷ್ಟು ಕನಸು, ಗುರಿ ಇದ್ದವು ಆದರೆ ಈ ಕುಬ್ಜತೆಯಿಂದ ಯಾವುದೇ ನನಸ್ಸಾಗಲಿಲ್ಲ, ತಂದೆ ತಾಯಿಗಳು ನನ್ನನು ಬೆಳೆಸಿದರು, ಏಳು ವರ್ಷದ ಹಿಂದೆ ತಂದೆ ತೀರಿಕೊಂಡರು ನಂತರ ಅನಿವಾರ್ಯವಾಗಿ ನಾನೇ ದುಡಿಯ ಬೇಕಾಯಿತು ನಂಗೆ ಬೇರೆ ಕೆಲಸ ಮಾಡಲು ಬರುವುದಿಲ್ಲ ಆದಕಾರಣ ಸಾಲ ಮಾಡಿ ಆಟೋ ತೆಗೆದುಕೊಂಡು ಮೀಟರ್ ಲೆಕ್ಕದಲ್ಲಿ ಡ್ರೈವರ್ ಒಬ್ಬರಿಗೆ ಕೊಟ್ಟಿದೆ ಅವನು ಬಾಡಿಗೆ ಹಣವು ನೀಡದೆ ಅರ್ದದಲ್ಲಿ ಆಟೋ ನಿಲ್ಲಿಸಿ ಓಡಿಹೋದ ನಂತರ ಅನಿವಾರ್ಯವಾಗಿ 3 ದಿನದಲ್ಲಿ ಆಟೋ ಕಲಿತು ಬ್ರೇಕ್ ಪೆಡಲ್ ಚೇಂಜ್ ಮಾಡಿಸಿ ಆಟೋ ಓಡಿಸುತ್ತಿದ್ದೇನೆ ನನ್ನ ಪರಿಸ್ಥಿತಿ ನೋಡಿ ಕೆಲಯೋಬ್ಬರು ಹೆಚ್ಚಿನ ಹಣ ನೀಡುತ್ತಾರೆ ನಾನು ಮೀಟರ್ ಬಿಟ್ಟು ಒಂದು ರುಪಾಯಿಗಳನ್ನು ಕೂಡ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿತ್ತಾರೆ.


Also read: ಕೇವಲ ಹಸು ಸಾಕಣೆ ಮಾಡಿ ಲಕ್ಷಾಂತರ ರೂಪಾಯಿ ದುಡಿದು BMW ಕಾರ್ ಖರೀದಿಸಿದ ಇವರು ಅನೇಕ ಯುವಕ ಯುವತಿಯರಿಗೆ ಮಾದರಿ!!

ನೈಜವಾಗಿ ನೋಡಿದರೆ ಅಕ್ಬರ್ ಅವರಿಗೆ ಓಡಾಡಲೂ ಕಷ್ಟವಾಗಿದೆ. ಪ್ರತಿದಿನವೂ ಬೇರೆಯವರೇ ಇವರನ್ನು ಎತ್ತಿ ಆಟೋಕ್ಕೆ ಹತ್ತಿಸುತ್ತಾರೆ. ಸ್ನೇಹಿತರು ಕೂಡ ಇವರಿಗೆ ಸಹಾಯ ಮಾಡುತ್ತಾರೆ. ಪ್ರಯಾಣಿಕರು ಅಂತು ಯಾವುದೇ ಭಯವಿಲ್ಲದೆ ಅಕ್ಬರ್ ಆಟೋ ಹುಡಿಕಿಕೊಂಡು ಬರುತ್ತಾರೆ. ಇಷ್ಟೊಂದು ಟ್ರಾಪಿಕ್ ಮತ್ತು ವಾಹನ ದಟ್ಟಣೆಯಲ್ಲಿ ಆಟೋ ನಡೆಸುತ್ತಿರುವ ಅಕ್ಬರ್ ಅವರ ದೈರ್ಯ ಮೆಚ್ಚಲೇಬೇಕು. ಎಲ್ಲವೂ ಸರಿಯಿದ್ದು ಹೆತ್ತವರಿಗೆ ಸಮಾಜಕ್ಕೆ ಬಾರವಾಗಿರುವ ಜನರು ಇವರನ್ನು ನೋಡಿ ಸ್ವಾಭಿಮಾನಿಗಳಾಗಬೇಕು.