ಮುಂದಿನ ಚುನಾವಣೆಗೆ ನೀವು ಆಯ್ಕೆ ಮಾಡುವ ವ್ಯಕ್ತಿ ಹೀಗಿರಲಿ.. ಶೇರ್ ಮಾಡಿ ಎಲ್ಲರಿಗೂ ಅರಿವು ಮೂಡಿಸಿ.

0
430

ಇನ್ನೇನು ಇಲೆಕ್ಷನ್ ಬರುತ್ತದೆ ಅಭ್ಯರ್ಥಿಗಳ ಮನವೊಲಿಸುವ ಕಾರ್ಯವು ಶುರುವಾಗಲಿದೆ. ಇದೊಂದು ಮಾಯೆಯೇ ಸರಿ.. ಆದರೆ ಈ ಮಾಯೆಯಲ್ಲಿ ಸಿಲುಕದೆ ಒಳ್ಳೆಯ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕಾದದ್ದು ನಮ್ಮ ಕರ್ತವ್ಯ.. ಇದನ್ನು ಮಾಡುವುದಾದರು ಹೇಗೆ?? ಇಲ್ಲಿದೆ ನೋಡಿ ನಮ್ಮದೊಂದಿಷ್ಟು ಸಲಹೆ..

ನೀವು ವೋಟ್ ಮಾಡಬೇಕೆಂದಿರುವ ಅಭ್ಯರ್ಥಿಗಳಲ್ಲಿ ಈ 5 ಅಂಶವನ್ನು ಗಮನದಲ್ಲಿಟ್ಟುಕೊಂಡು ಮತ ಚಲಾವಣೆ ಮಾಡಿ..

1.ಪಕ್ಷ ನೋಡಬೇಡಿ.

ಯಾವುದೇ ಕಾರಣಕ್ಕೂ ಅಭ್ಯರ್ಥಿ ಸರಿ ಇಲ್ಲದಿದ್ದರೂ ಪಕ್ಷದ ಮೇಲಿನ ಪ್ರೀತಿಯಿಂದಾಗಿ ವೋಟ್ ಮಾಡಬೇಡಿ.. ಅಭ್ಯರ್ಥಿಯ ಸ್ವಂತ ಅರ್ಹತೆಯನ್ನು ಪರಿಗಣನೆಗೆ ತೆಗೆದುಕೊಳ್ಳಿ..

2.ಸಮಾಜದ ಬಗ್ಗೆ ಕಾಳಜಿ.

ನೀವು ವೋಟ್ ಮಾಡಬೇಕೆಂದಿರುವ ವ್ಯಕ್ತಿಗೆ ಸಮಾಜದ ಮೇಲೆ ಕಾಳಜಿ ಇದೆಯೇ ಎಂದು ತಿಳಿದುಕೊಳ್ಳಿ.. ನಿಮ್ಮ ಏರಿಯಾವನ್ನು 5 ವರ್ಷ ಅವರ ಕೈಗೆ ಕೊಡುವ ಮುನ್ನ 5 ನಿಮಿಷ ಅವರಿಗೆ ನಿಮ್ಮ ಏರಿಯಾ ಬಗ್ಗೆ ಕಾಳಜಿ ಇದೆಯೇ ಎಂದು ಅರಿತುಕೊಳ್ಳಿ..

3.ಅಭ್ಯರ್ಥಿಯ ವಿದ್ಯಾರ್ಹತೆಯನ್ನು ನೋಡಿ.

ಇದು ಎಲ್ಲರಿಗೂ ಅನ್ವಯ ವಾಗದಿದ್ದರೂ ಕೂಡ ಕೆಲವೊಮ್ಮೆ ವಿದ್ಯಾರ್ಹತೆಯು ಮುಖ್ಯವಾಗುತ್ತದೆ.. ನೀವು ಮತ ಚಲಾಯಿಸುವ ವ್ಯಕ್ತಿಗೆ ಕನಿಷ್ಟ ವಿದ್ಯಾರ್ಹತೆಯಾದರು ಇದೆಯೇ ಎಂದು ತಿಳಿದುಕೊಳ್ಳಿ..

4.ಕಾನೂನಾತ್ಮಕವಾಗಿ ಸರಿಯಾಗಿರುವ ಅಭ್ಯರ್ಥಿಯ ಆಯ್ಕೆ.

ಹತ್ತು ಇಪ್ಪತ್ತು ಕೇಸ್ ಗಳಿರುವವರೆಲ್ಲಾ ಇಲೆಕ್ಷನ್ ನಲ್ಲಿ ನಿಲ್ಲುವುದು ಉಂಟು… ಆದರೇ ನೀವು ವೋಟ್ ಮಾಡುವ ಮುನ್ನ ಆ ವ್ಯಕ್ತಿ ಕಾನೂನನ್ನು ಸರಿಯಾಗಿ ಪಾಲಿಸುತ್ತಿರುವರೇ ಎಂದು ಅರಿತುಕೊಳ್ಳಿ..

5.ಜನರಿಗೆ ಸ್ಪಂದಿಸುವ ವ್ಯಕ್ತಿಯ ಆಯ್ಕೆ.

ಮುಂದಿನ 5 ವರ್ಷ ನಮಗೆ ಏನೇ ತೊಂದರೆ ಆದರೂ ಆ ವ್ಯಕ್ತಿಯ ಬಳಿ ಹೋದರೆ ಸ್ಪಂದಿಸುವ ಮನೋಭಾವನೆ ಅವರಿಗೆ ಇದೆಯೇ ಎಂದು ತಿಳಿದುಕೊಳ್ಳಿ.. ನಿಮ್ಮ ಜಾಗಕ್ಕೆ ಬಂದು ಹಾಗು ಹೋಗುಗಳ ಬಗ್ಗೆ ವಿಚಾರಿಸುವರೆ??.. ಅಭಿವೃದ್ಧಿಯ ಮಂತ್ರವೇ ಅವರಿಗೆ ಪ್ರಾಮುಖ್ಯವಾಗಿದೆಯೇ?? ಎಂದು ತಿಳಿದುಕೊಳ್ಳಿ..

ಇದೊಂದು ಸಾಮಾಜಿಕ ಕಳಕಳಿ ಇರುವ ಲೇಖನ.. ಉಪಯುಕ್ತವೆನಿಸಿದರೆ ಶೇರ್ ಮಾಡಿ ಅರಿವು ಮೂಡಿಸಿ..